’ಕೇಂದ್ರ ಸರ್ಕಾರಕ್ಕೆ ಅರ್ಥವಾಗುವುದಿಲ್ಲ..‘-ಭಾರತ್​ ಬಂದ್​ಗೆ ಬೆಂಬಲ ಸೂಚಿಸಿದ ರಾಹುಲ್​ ಗಾಂಧಿ

| Updated By: Lakshmi Hegde

Updated on: Sep 27, 2021 | 11:58 AM

Bharat Bandh: ಕೃಷಿಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಹಲವು ರೈತ ಸಂಘಟನೆಗಳ ಆಗ್ರಹ. ಆದರೆ ಕೇಂದ್ರ ಸರ್ಕಾರ ಅದರ ರದ್ದತಿಗೆ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರ ಮತ್ತು ರೈತಸಂಘಟನೆಗಳ ನಡುವೆ ನಡೆದ ಸುಮಾರು 11 ಸುತ್ತುಗಳ ಮಾತುಕತೆಯೂ ವಿಫಲವಾಗಿದೆ.

’ಕೇಂದ್ರ ಸರ್ಕಾರಕ್ಕೆ ಅರ್ಥವಾಗುವುದಿಲ್ಲ..‘-ಭಾರತ್​ ಬಂದ್​ಗೆ ಬೆಂಬಲ ಸೂಚಿಸಿದ ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
Follow us on

ದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ  ಭಾರತ್​ ಬಂದ್ (Bharat Bandh)​ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi) ಬೆಂಬಲ ಸೂಚಿಸಿದ್ದಾರೆ. ಕೃಷಿಕಾಯ್ದೆಗಳು ಅನುಷ್ಠಾನಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಭಾರತ್​ ಬಂದ್​ಗೆ ರೈತರು ಕರೆ ನೀಡಿದ್ದಾರೆ. ಈಗಾಗಲೇ ದೆಹಲಿಯ ಗಡಿಭಾಗಗಳ ಹೆದ್ದಾರಿಗಳು, ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ಕೃಷಿ ಕಾಯ್ದೆ(Farm Laws)ಗಳು, ಕೃಷಿ ವಲಯವನ್ನು ಖಾಸಗಿ ಸಂಸ್ಥೆಗಳು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ನೀಡುತ್ತವೆ. ಹಾಗಾಗಿ ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಳೆದ 11 ತಿಂಗಳುಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್​ ಸೇರಿ  ಹಲವು ಪ್ರತಿಪಕ್ಷಗಳು ರೈತರಿಗೆ ಬೆಂಬಲ ಸೂಚಿಸಿದ್ದು, ಇಂದಿನ ಶಾಂತಿಯುತ ಭಾರತ್ ಬಂದ್​ಗೂ ಸಹ ತಮ್ಮ ಬೆಂಬಲ ಇರುವುದಾಗಿ ಹೇಳಿದ್ದಾರೆ.  

ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ #IStandWithFarmers ಎಂಬ ಹ್ಯಾಷ್​ಟ್ಯಾಗ್ ಹಾಕಿದ್ದಾರೆ. ಅಂದರೆ ನಾನು ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. ರೈತರು ನಡೆಸುತ್ತಿರುವ ಅಹಿಂಸಾತ್ಮಕ ಸತ್ಯಾಗ್ರಹವ ಇಂದೂ ಕೂಡ ಅಖಂಡವಾಗಿದೆ. ಆದರೆ ಈ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ಈ ಧೋರಣೆಯಿಂದಾಗಿಯೇ ಇಂದು ಭಾರತ್​ ಬಂದ್​ ನಡೆಸಬೇಕಾಯಿತು ಎಂದಿದ್ದಾರೆ.

ಕೃಷಿಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು ಹಲವು ರೈತ ಸಂಘಟನೆಗಳ ಆಗ್ರಹ. ಆದರೆ ಕೇಂದ್ರ ಸರ್ಕಾರ ಅದರ ರದ್ದತಿಗೆ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರ ಮತ್ತು ರೈತಸಂಘಟನೆಗಳ ನಡುವೆ ನಡೆದ ಸುಮಾರು 11 ಸುತ್ತುಗಳ ಮಾತುಕತೆಯೂ ವಿಫಲವಾಗಿದೆ. ಈ ನಿಟ್ಟಿನಲ್ಲಿ ಇಂದು 40 ರೈತ ಒಕ್ಕೂಟಗಳ ಸಂಘಟನೆಯಾಗಿರುವ ಸಂಯುಕ್ತ ಕಿಸಾನ್​ ಮೋರ್ಚಾ (SKM)ಮುಂಜಾನೆ 6-4ಗಂಟೆಯವರೆಗೆ  ಭಾರತ್​ ಬಂದ್​ಗೆ ಕರೆ ನೀಡಿದೆ. ಕೆಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಇಂದು ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮೊದಲಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಬಂದಿದೆ. ಅದರಲ್ಲೂ ರೈತರ ಪ್ರತಿಭಟನೆ ಶುರುವಾದಾಗಿನಿಂದಲೂ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ವಿರುದ್ಧ  ಆರೋಪ ಮಾಡುತ್ತಿದ್ದಾರೆ. ಇಂದು ನಡೆಯುತ್ತಿರುವ ಭಾರತ್​ ಬಂದ್​ಗೂ ನಮ್ಮ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bharat Bandh ರೈತರಿಂದ ಹೆದ್ದಾರಿ, ರೈಲು ಮಾರ್ಗ ಬಂದ್; ದೆಹಲಿ,ಹರ್ಯಾಣ ಗಡಿಭಾಗದಲ್ಲಿ ಸಂಚಾರಕ್ಕೆ ಅಡ್ಡಿ

ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಕಾಶ್ಮೀರದಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

Published On - 11:57 am, Mon, 27 September 21