AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಹೇಳಿದ್ದನ್ನೇ ನೀವು ಯಾಕೆ ಕೇಳುತ್ತಿರುತ್ತೀರಿ?; ಪತ್ರಕರ್ತರ ಮೇಲೆ ಸಿಟ್ಟಾದ ರಾಹುಲ್ ಗಾಂಧಿ

ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಹಲವು ಪಕ್ಷದ ನಾಯಕರೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಬಿಜೆಪಿ ಹೇಳಿದ್ದನ್ನೇ ನೀವು ಯಾಕೆ ಕೇಳುತ್ತಿರುತ್ತೀರಿ?; ಪತ್ರಕರ್ತರ ಮೇಲೆ ಸಿಟ್ಟಾದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Apr 04, 2023 | 7:32 PM

ದೆಹಲಿ: ಕಾಂಗ್ರೆಸ್ ಪಕ್ಷವು (Congress) ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬ ಬಿಜೆಪಿ ಆರೋಪಗಳ ಕುರಿತ ಪ್ರಶ್ನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಿಟ್ಟಾಗಿದ್ದು, ಅದಾನಿ ವಿಚಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮುಂದಿನ ಪಟ್ಟಿಯ ಪೂರ್ವಭಾವಿ ಸಭೆಗಾಗಿ ಮಾಜಿ ಸಂಸದರು ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕೇಂದ್ರ ಕಚೇರಿಗೆ ಆಗಮಿಸಿದ್ದರು. ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸಿದ ರಾಹುಲ್‌ ಗಾಂಧಿಯವರಲ್ಲಿ ಮಾಧ್ಯಮ ಪ್ರತಿನಿಧಿ ಕಾಂಗ್ರೆಸ್‌ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬ ಬಿಜೆಪಿ ಆರೋಪಗಳ ಬಗ್ಗೆ ಕೇಳಿದಾಗ, ಯಾವಾಗಲೂ ಬಿಜೆಪಿ ಹೇಳುವುದನ್ನು ಏಕೆ ಹೇಳುತ್ತೀರಿ… ಪ್ರತಿ ಬಾರಿಯೂ ಬಿಜೆಪಿ ಹೇಳುವುದನ್ನೇ ಹೇಳುತ್ತೀರುತ್ತಿರಿ ಎಂದು ಗುಡುಗಿದ್ದಾರೆ.

ವಿಷಯ ತುಂಬಾ ಸರಳ. ಅದಾನಿ ಶೆಲ್ ಕಂಪನಿಗಳಲ್ಲಿರುವ ₹ 20,000 ಕೋಟಿ ಯಾರಿಗೆ ಸೇರಿದೆ? ಇವರು ಬೇನಾಮಿಗಳು, ಅದು ಯಾರದ್ದು? ಎಂದು ಕೇಳಿದ್ದಾರೆ. ರಾಹುಲ್ ಜತೆ ಡಿಕೆ ಶಿವಕುಮಾರ್, ವೀರಪ್ಪ ಮೊಯ್ಲಿ, ರಣದೀಪ್ ಸುರ್ಜೆವಾಲಾ, ಡಿಕೆ ಸುರೇಶ್, ಪ್ರಿಯಾಂಕ್ ಖರ್ಗೆ ಮತ್ತು ಮೊಹ್ಸಿನಾ ಕಿದ್ವಾಯಿ ಸೇರಿದಂತೆ ಹಲವು ಪಕ್ಷದ ನಾಯಕರು ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸಿದ್ದರು.

ಕರ್ನಾಟಕದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಹಲವು ಪಕ್ಷದ ನಾಯಕರೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಮೊನ್ನೆ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವು ಹಿರಿಯ ನಾಯಕರೊಂದಿಗೆ ಗುಜರಾತ್ ನ್ಯಾಯಾಲಯಕ್ಕೆ ಮಾರ್ಚ್ 23 ರಂದು ಅವರ ಮೋದಿ ಸರ್​​ನೇಮ್ ಹೇಳಿಕೆಯ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ತೆರಳಿದರು.

ಇದನ್ನೂ ಓದಿ:ಉತ್ತರ ಪ್ರದೇಶ: ಬಿಜೆಪಿ ನಾಯಕನಿಂದ ರಸ್ತೆ ಸಂಚಾರಕ್ಕೆ ಅಡ್ಡಿ, ಆ್ಯಂಬುಲೆನ್ಸ್​​ನಲ್ಲಿದ್ದ ರೋಗಿ ಸಾವು; ಪ್ರಶ್ನಿಸಿದ್ದಕ್ಕೆ ಬೈಗುಳ, ಬೆದರಿಕೆ

ರಾಹುಲ್ ಜತೆ ಅವರ ಸಹೋದರಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಇದ್ದರು. ಆಕೆಯ ಜೊತೆಗೆ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೂ ನ್ಯಾಯಾಲಯಕ್ಕೆ ಬಂದಿದ್ದರು. ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸಲ್ಲಿಸಿದ ಮೇಲ್ಮನವಿ ಇತ್ಯರ್ಥವಾಗುವವರೆಗೆ ಜಾಮೀನು ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ