Rahul Gandhi: ದೇಶದಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗಲು ಯಾರು ಕಾರಣ ಎಂಬುದು ಜನರಿಗೆ ಗೊತ್ತು; ರಾಹುಲ್ ಗಾಂಧಿ ಟ್ವೀಟ್​

| Updated By: Lakshmi Hegde

Updated on: Jul 15, 2021 | 2:33 PM

ಗಾಲ್ವಾನ್​ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮತ್ತೆ ವಾಗ್ವಾದ ನಡೆಯುತ್ತಿದೆ ಎಂಬ ಮಾಧ್ಯಮಗಳ ವರದಿಯ  ಬೆನ್ನಲ್ಲೇ ಕಾಂಗ್ರೆಸ್ ನಾಯಕ​ ಗಾಂಧಿ ಈ ಟ್ವೀಟ್​ ಮಾಡಿದ್ದಾರೆ.

Rahul Gandhi: ದೇಶದಲ್ಲಿ ಕಷ್ಟದ ಪರಿಸ್ಥಿತಿ ಉಂಟಾಗಲು ಯಾರು ಕಾರಣ ಎಂಬುದು ಜನರಿಗೆ ಗೊತ್ತು; ರಾಹುಲ್ ಗಾಂಧಿ ಟ್ವೀಟ್​
ರಾಹುಲ್​ ಗಾಂಧಿ
Follow us on

ದೆಹಲಿ: ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಇಂದು ಟ್ವೀಟ್ ಮೂಲಕ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ, ಹಲವು ವಿಚಾರಗಳನ್ನಿಟ್ಟುಕೊಂಡು ಕಿಡಿಕಾರಿದ್ದಾರೆ. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್​ ದರ, ಕೊರೊನಾ ಲಸಿಕೆ ಕೊರತೆ, ಚೀನಾ-ಭಾರತ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಬಿಕ್ಕಟ್ಟು, ರೈತರ ಹೋರಾಟಗಳಿಗೆಲ್ಲ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದಾರೆ. ಶತಮಾನಗಳಷ್ಟು ಸಮಯ ತೆಗೆದುಕೊಂಡು ಕಟ್ಟಲ್ಪಟ್ಟಿದ್ದೆಲ್ಲ ಸೆಕೆಂಡ್​ಗಳಲ್ಲಿ ನಾಶವಾಗಿದೆ. ದೇಶಕ್ಕೆ ಇಂಥ ಕಷ್ಟದ ಸಮಯ ತಂದವರು ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದು ಟ್ವೀಟ್​ ಮಾಡಿದ್ದಾರೆ.

ಗಾಲ್ವಾನ್​ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮತ್ತೆ ವಾಗ್ವಾದ ನಡೆಯುತ್ತಿದೆ ಎಂಬ ಮಾಧ್ಯಮಗಳ ವರದಿಯ  ಬೆನ್ನಲ್ಲೇ ಕಾಂಗ್ರೆಸ್ ನಾಯಕ​ ಗಾಂಧಿ ಈ ಟ್ವೀಟ್​ ಮಾಡಿದ್ದಾರೆ. ಕಳೆದ ವರ್ಷ ಜು.20ರಂದು ಗಾಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಉಂಟಾಗಿ, 20 ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಆಗಿನಿಂದಲೂ ರಾಹುಲ್ ಗಾಂಧಿಯಾದಿಯಾಗಿ ಕಾಂಗ್ರೆಸ್​ನ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದಾಗಿಯೂ ರಾಹುಲ್ ಗಾಂಧಿ ಅದಾಗಲೇ ತುಂಬ ಸಲ ಹೇಳಿದ್ದಾರೆ.


ಇದನ್ನೂ ಓದಿ: ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​; ಮಾಜಿ ಬಾಯ್​ಫ್ರೆಂಡ್​ ಹೇಳಿದ್ದೇನು?

Congress leader Rahul Gandhi took a dig at the Central government Through Tweet