ದೆಹಲಿ: ಒಂದೇ ದಿನದಲ್ಲಿ ದಾಖಲೆಯ ಕೊವಿಡ್ -19 (Covid-19) ಲಸಿಕೆಗಳ ವಿತರಣೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು “ಕಾರ್ಯಕ್ರಮ” ಈಗ ಮುಗಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ದಾಖಲೆಯ ನಂತರ ಚುಚ್ಚುಮದ್ದಿನ ಕುಸಿತವನ್ನು ತೋರಿಸಲು ಕೊವಿನ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ಅವರು ಕಳೆದ 10 ದಿನಗಳಲ್ಲಿ ವ್ಯಾಕ್ಸಿನೇಷನ್ ಪ್ರವೃತ್ತಿಯ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ನಿಮಿತ್ತ ಶುಕ್ರವಾರ ಒಂದೇ ದಿನದಲ್ಲಿ 2.5 ಕೋಟಿ ಜನರಿಗೆ ಭಾರತ ಲಸಿಕೆ ಹಾಕಿದೆ. Vaccination ಹ್ಯಾಶ್‌ಟ್ಯಾಗ್ ಲಸಿಕೆ ಬಳಸಿ ರಾಹುಲ್ ಗಾಂಧಿ ಟ್ವೀಟ್ ನಲ್ಲಿ “ಈವೆಂಟ್ ಓವರ್” ಎಂದು ಬರೆದಿದ್ದಾರೆ .
Event ख़त्म! #Vaccination pic.twitter.com/S1SAdjGUA2
— Rahul Gandhi (@RahulGandhi) September 19, 2021
ದೇಶದಲ್ಲಿ ಇಂತಹ ದಾಖಲೆಯ ಲಸಿಕೆಗಳು ಹೆಚ್ಚು ನಡೆಯಲಿ ಎಂದು ಗಾಂಧಿ ಶನಿವಾರ ಆಶಿಸಿದ್ದರು.
“2.1 ಕೋಟಿ ಲಸಿಕೆಗಳನ್ನು ಇನ್ನೂ ಹಲವು ದಿನಗಳವರೆಗೆ ಎದುರು ನೋಡುತ್ತಿದ್ದೇನೆ. ಈ ವೇಗ ನಮ್ಮ ದೇಶಕ್ಕೆ ಬೇಕಾಗಿದೆ ”ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಶುಕ್ರವಾರ ದೇಶಾದ್ಯಂತ ಕೊವಿಡ್ 19 ಲಸಿಕಾ ಬೃಹತ್ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಒಂದೇದಿನ 2 ಕೋಟಿ ಡೋಸ್ ಗಡಿ ದಾಟುವ ಮೂಲಕ ದೇಶ ಕೊವಿಡ್ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.
#LargestVaccineDrive #Unite2FightCorona pic.twitter.com/Uly8hVAZY6
— Ministry of Health (@MoHFW_INDIA) September 17, 2021
ಇನ್ನು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಫುಲ್ ಖುಷಿಯಾಗಿದ್ದಾರೆ. ಇಂದಿನ ಲಸಿಕಾ ಮೇಳ ತುಂಬ ವೇಗವಾಗಿ ನಡೆಯಿತು. ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಲೇಬೇಕು ಎಂದು ಹೇಳಿದ್ದಾರೆ. ಮಧ್ಯಾಹ್ನ 1.30ರ ಹೊತ್ತಿಗೆ ಒಂದು ಕೋಟಿ ಡೋಸ್ ಮೀರಿದಾಗಲೇ ಟ್ವೀಟ್ ಮಾಡಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂತು ದೇಶ 1 ಕೋಟಿ ಡೋಸ್ ಕೊವಿಡ್ 19 ಲಸಿಕೆಯನ್ನು ನೀಡಿದೆ. ಇನ್ನೂ ಸಂಜೆಯವರೆಗೆ ಸಮಯವಿದೆ. ಇಂದು ಕೊರೊನಾ ಲಸಿಕೆ ನೀಡುವುದರಲ್ಲಿ ನಾವು ಖಂಡಿತ ದಾಖಲೆ ಬರೆಯುತ್ತೇವೆ. ಇದೇ ಪ್ರಧಾನಿ ಮೋದಿಯವರಿಗೆ ನೀಡುವ ಉಡುಗೊರೆ ಎಂದು ಹೇಳಿದ್ದರು.
ಭಾರತದಲ್ಲಿ ಜನವರಿಯಿಂದ ಕೊವಿಡ್ 19 ಲಸಿಕಾ ಅಭಿಯಾನ ಶುರುವಾಗಿದ್ದರೂ ಕೆಲವು ಅಡಚಣೆಗಳ ಕಾರಣದಿಂದ ಮಧ್ರ ಸ್ವಲ್ಪ ದಿನ ತೊಡಕಾಗಿತ್ತು. ಆದರೆ ಈಗ ಅಭಿಯಾನ ವೇಗ ಪಡೆದುಕೊಂಡಿದೆ. ಇಲ್ಲಿಯವರೆಗೆ ಆಗಸ್ಟ್ 27, ಆಗಸ್ಟ್ 31 ಮತ್ತು ಸೆಪ್ಟೆಂಬರ್ 6ರಂದು 1 ಕೋಟಿಗೂ ಹೆಚ್ಚು ಡೋಸ್ಗಳಷ್ಟು ಕೊರೊನಾ ಲಸಿಕೆ ನೀಡಲಾಗಿತ್ತು.
India breaks another record! 1 Crore vaccine doses administered in less than 6 hours.
Go get vaccinated now! Visit https://t.co/G4e2WXWB9X or https://t.co/97Wqddbz7k today! #LargestVaccineDrive #VaccineSeva pic.twitter.com/4Lt7idgQkH— MyGovIndia (@mygovindia) September 17, 2021
ಇದನ್ನೂ ಓದಿ: Coronavirus: ಲಸಿಕೆ ಪಡೆದವರ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ, ಲಸಿಕೆ ಪಡೆದರೂ ಮರೆಯಬೇಡಿ ಮಾಸ್ಕ್
ಇದನ್ನೂ ಓದಿ: ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ ಬಂದಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
(Congress leader Rahul Gandhi took a swipe at the government over the record Covid-19 vaccinations in a single day)
Published On - 4:26 pm, Sun, 19 September 21