ಚಾಲಕರ ‘ಮನ್ ಕಿ ಬಾತ್’ ಕೇಳಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್​​ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

|

Updated on: May 23, 2023 | 12:34 PM

ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಜನನಾಯಕ ರಾಹುಲ್ ಗಾಂಧಿ ಜಿ ಟ್ರಕ್ ಡ್ರೈವರ್‌ಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಚಾಲಕರೊಂದಿಗೆ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಸುಮಾರು 90 ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳಿವೆ

ಚಾಲಕರ ‘ಮನ್ ಕಿ ಬಾತ್’ ಕೇಳಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್​​ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ರಾತ್ರಿ ಟ್ರಕ್ ಚಾಲಕರನ್ನು (truck drivers) ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವುದಕ್ಕಾಗಿ ಅವರ ಮನ್ ಕಿ ಬಾತ್ (Mann ki Baat)  ಆಲಿಸಿದರು.  ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿಯವರು ಟ್ರಕ್‌ನೊಳಗೆ ಕುಳಿತುಕೊಂಡು ಒಬ್ಬ ಡ್ರೈವರ್‌ನೊಂದಿಗೆ ಪ್ರಯಾಣಿಸುತ್ತಿರುವುದನ್ನು ಮತ್ತು ಟ್ರಕ್ ಡ್ರೈವರ್‌ಗಳೊಂದಿಗೆ ಮಾತನಾಡುತ್ತಿರುವುದನ್ನು ಫೋಟೊಗಳಲ್ಲಿ ಕಾಣಬಹುದು. ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿ ಚಾಲಕರೊಂದಿಗೆ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದರು ಎಂದು ಪಕ್ಷ ತಿಳಿಸಿದೆ.

ಈ ವಿಡಿಯೊವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಜನನಾಯಕ ರಾಹುಲ್ ಗಾಂಧಿ ಜಿ ಟ್ರಕ್ ಡ್ರೈವರ್‌ಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಚಾಲಕರೊಂದಿಗೆ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಸುಮಾರು 90 ಲಕ್ಷ ಟ್ರಕ್ ಚಾಲಕರಿದ್ದಾರೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳಿವೆ. ರಾಹುಲ್ ಜೀ ಅವರ ಮನ್ ಕಿ ಬಾತ್ ಕೇಳುವ ಕೆಲಸವನ್ನು ಮಾಡಿದ್ದಾರೆ ಎಂದಿದ್ದಾರೆ.


ಟ್ರಕ್ ಚಾಲಕರ ನಡುವೆ ಗಾಂಧಿ ಕುಳಿತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ ಕಾಂಗ್ರೆಸ್, “ನಿಮ್ಮ ಮಧ್ಯೆ ನಿಮ್ಮ ರಾಹುಲ್ ಗಾಂಧಿ” ಎಂದು ಬರೆದಿದೆ.

ಈ ತಿಂಗಳ ಆರಂಭದಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ರಾಹುಲ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಬಿಎಂಟಿಸಿ ಬಸ್‌ ನೊಳಗೆ ಕುಳಿತು ಅವರು ಮಹಿಳಾ ಪ್ರಯಾಣಿಕರಲ್ಲಿಯೂ ಮಾತನಾಡಿದ್ದರು.

ಕರ್ನಾಟಕದಲ್ಲಿದ್ದಾಗ ರಾಹುಲ್, ಬೆಂಗಳೂರಿನಲ್ಲಿ ಬಾಡಿಗೆ ಟ್ಯಾಕ್ಸಿ ಚಾಲಕರು ಮತ್ತು ಆಹಾರ ವಿತರಣೆ ಮಾಡುವ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಹುಲ್, ಊಬರ್, ಓಲಾದಂತ ಬಾಡಿಗೆ ವಾಹನ ಚಾಲಕರ ಕಷ್ಟಗಳನ್ನು ಕೇಳಿದರು. ರಾಹುಲ್ ಆಹಾರ ವಿತರಣೆ ಮಾಡುವ ವ್ಯಕ್ತಿಗಳೊಂದಿಗೆ ರೆಸ್ಟೋರೆಂಟ್‌ನಲ್ಲಿ ಮಸಾಲೆ ದೋಸೆ ಮತ್ತು ಕಾಫಿ ಸೇವಿಸಿದರು. ತಮ್ಮ ಹೋಟೆಲ್‌ಗೆ ತಲುಪಲು ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿ ಹೋಗಿದ್ದರು ರಾಹುಲ್.

ಇದನ್ನೂ ಓದಿ: ಪೆಟ್ರೋಲ್​ ಬಂಕ್​ನಲ್ಲಿ 2 ಸಾವಿರ ರೂ. ನೋಟು ಕೊಟ್ಟಿದ್ದಕ್ಕೆ ಗ್ರಾಹಕನ ಬೈಕ್​ನಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್ ಸಿಬ್ಬಂದಿ

ಏಪ್ರಿಲ್ ಅಂತ್ಯದಲ್ಲಿ, ದೆಹಲಿಯ ಮುಖರ್ಜಿ ನಗರದಲ್ಲಿ ನಾಗರಿಕ ಸೇವಾ ಆಕಾಂಕ್ಷಿಗಳೊಂದಿಗೆ ಗಾಂಧಿ ಸಂವಾದ ನಡೆಸಿದರು. ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ವಿಡಿಯೊದಲ್ಲಿ ಮಾಜಿ ಲೋಕಸಭಾ ಸದಸ್ಯರು ಉನ್ನತ ಸರ್ಕಾರಿ ಉದ್ಯೋಗಗಳಿಗಾಗಿ ಆಕಾಂಕ್ಷಿಗಳ ಗುಂಪಿನೊಂದಿಗೆ ಚರ್ಚೆ ನಡೆಸುತ್ತಿರುವುದನ್ನು ತೋರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ