ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಂದ ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor) ಬುಧವಾರ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಕೇಂದ್ರ ಗೃಹ ಸಚಿವರಿಂದ ಕರೆಯನ್ನು ನಿರೀಕ್ಷಿಸಿರಲಿಲ್ಲ ಎಂಬುದು ಅವರ ಟ್ವೀಟ್ನಿಂದಲೇ ತಿಳಿಯುತ್ತಿದೆ. “66 ನೇ ವರ್ಷಕ್ಕೆ ಕಾಲಿಡುವುದರಲ್ಲಿ ಏನೋ ವಿಶೇಷತೆ ಇರಬೇಕು! ಒಳ್ಳೆಯ ಮಾತುಗಳಿಗೆ ಅತ್ಯಂತ ಕೃತಜ್ಞರಾಗಿರುತ್ತೇನೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿರುವುದಾಗಿ ತರೂರ್ ಹೇಳಿದ್ದಾರೆ. ನರೇಂದ್ರ ಮೋದಿಜಿಯವರಿಂದ ಈ ಚಿಂತನಶೀಲ ಶುಭಾಶಯಗಳನ್ನು ಸ್ವೀಕರಿಸಿ ಖುಷಿಯಾಗಿದೆ. ಅವರು ಯಾವತ್ತೂ ಈ ರೀತಿಯ ಸೌಜನ್ಯವನ್ನು ತೋರುತ್ತಾರೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ತರೂರ್ ಅವರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಅವರು ತರೂರ್ ಅವರಿಗೆ ಸಮಾಧಾನ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಿದ್ದಾರೆ. “ಜನ್ಮದಿನವು ಹಿಂದಿನ ನೆನಪುಗಳನ್ನು ನೆನಪಿಸಿಕೊಳ್ಳುವ ಒಂದು ವಿಶೇಷ ಸಂದರ್ಭವಾಗಿದೆ. ಅದೇ ಸಮಯದಲ್ಲಿ, ನಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯಗಳನ್ನು ಹೊಸ ಉತ್ಸಾಹದಿಂದ ಪೂರೈಸಲು ಪ್ರೇರೇಪಿಸುವ ದಿನವಾಗಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
Surprised and touched to receive a telephone call from Home Minister @AmitShah wishing me on my birthday. There must be something special about turning 66! Most grateful for the kind words.
— Shashi Tharoor (@ShashiTharoor) March 9, 2022
ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರ ಜನ್ಮದಿನದಂದು ಶುಭಾಶಯ ಕೋರಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಈ ಹಿಂದೆ ಟ್ವಿಟರ್‌ನಲ್ಲಿ ಟೀಕೆಗಳನ್ನು ಎದುರಿಸಿದ್ದರು.ತರೂರ್ ಈ ಟೀಕೆಗಳನ್ನು ಅವರು ತೀವ್ರವಾಗಿ ವಿರೋಧಿಸಿದರು ಮತ್ತು ವಿಭಿನ್ನ ರಾಜಕೀಯ ದೃಷ್ಟಿಕೋನಗಳ ಕಾರಣ ಸೌಜನ್ಯವನ್ನು ಎಂದಿಗೂ ತಪ್ಪಿಸುವುದಿಲ್ಲ ಎಂದು ಹೇಳಿದ್ದರು. “ಹೌದು, ನಾನು ಎಲ್.ಕೆ. ಅಡ್ವಾಣಿ ಮತ್ತು ನರೇಂದ್ರ ಮೋದಿಯವರ ಜನ್ಮದಿನದಂದು ಶುಭ ಹಾರೈಸುವುದನ್ನು ಮುಂದುವರಿಸಲು ಉದ್ದೇಶಿಸಿದ್ದೇನೆ. ಅದೇ ವೇಳೆ ಅವರು ರಾಜಕೀಯ ನಿಲುವುಗಳನ್ನು ನಾನು ವಿರೋಧಿಸುತ್ತೇನೆ. ನನ್ನ 40 ವರ್ಷಗಳ ಬರವಣಿಗೆ ನಾನು ನಂಬಿದ್ದನ್ನು ಸ್ಪಷ್ಟಪಡಿಸುತ್ತದೆ. ನನ್ನನ್ನು ಓದದವರು ಮಾತ್ರ ನನ್ನನ್ನು ಸಂಘಿ ಎಂದು ಕರೆಯುತ್ತಾರೆ. ಅವರಿಗಾಗಿ ನನ್ನ ಮೌಲ್ಯಗಳನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:Assembly Election Results 2022: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ