AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS: ಆರ್​ಎಸ್​ಎಸ್​ನ ನೀತಿ ರೂಪಿಸುವ ಸಂಸ್ಥೆಯಿಂದ ಗುಜರಾತ್​ನಲ್ಲಿ ಮಾ. 11ರಿಂದ 3 ದಿನ ಸಮಾವೇಶ

ಶತಮಾನೋತ್ಸವದ ಹೊಸ್ತಿಲಲ್ಲಿರುವ ಆರ್​ಎಸ್​ಎಸ್​ 2025ರ ವೇಳೆಗೆ ತನ್ನ ನೆಲೆಯನ್ನು ದ್ವಿಗುಣಗೊಳಿಸುವ ಬಗ್ಗೆ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು.

RSS: ಆರ್​ಎಸ್​ಎಸ್​ನ ನೀತಿ ರೂಪಿಸುವ ಸಂಸ್ಥೆಯಿಂದ ಗುಜರಾತ್​ನಲ್ಲಿ ಮಾ. 11ರಿಂದ 3 ದಿನ ಸಮಾವೇಶ
ಸುನೀಲ್ ಅಂಬೇಕರ್
TV9 Web
| Updated By: ಸುಷ್ಮಾ ಚಕ್ರೆ|

Updated on:Mar 09, 2022 | 6:31 PM

Share

ಅಹಮದಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಮಾರ್ಚ್ 11ರಿಂದ ಮೂರು ದಿನಗಳ ಕಾಲ ಅಹಮದಾಬಾದ್​ನಲ್ಲಿ ಸಮಾವೇಶ ನಡೆಸಲಿದೆ. ಅಹಮದಾಬಾದ್‌ನ ಪ್ರೇರಣಾಪಿತ್‌ನಲ್ಲಿ ಸಭೆ ನಡೆಯಲಿದ್ದು, ಆರ್​ಎಸ್​ಎಸ್​ ಸರಸಂಘಚಾಲಕ್ ಮೋಹನ್ ಭಾಗವತ್, ಸರ್ಕಾರಿವಾಹ್ ದತ್ತಾತ್ರೇಯ ಹೊಸಬಾಳೆ ಮತ್ತು ಇತರ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಪ್ರಮುಖ್ (ಮಾಧ್ಯಮ ವಿಭಾಗದ ಮುಖ್ಯಸ್ಥ) ಸುನೀಲ್ ಅಂಬೇಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶತಮಾನೋತ್ಸವದ ಹೊಸ್ತಿಲಲ್ಲಿರುವ ಆರ್​ಎಸ್​ಎಸ್​ 2025ರ ವೇಳೆಗೆ ತನ್ನ ನೆಲೆಯನ್ನು ದ್ವಿಗುಣಗೊಳಿಸುವ ಬಗ್ಗೆ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು. ಸಂಘವು 2021ರಲ್ಲಿ ವಿಶೇಷ ಮೂರು ವರ್ಷಗಳ ಕೆಲಸದ ವಿಸ್ತರಣೆ ಯೋಜನೆಯನ್ನು ಸಿದ್ಧಪಡಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸಂಘದ ಕಾರ್ಯಗಳನ್ನು ಹೇಗೆ ವಿಸ್ತರಿಸಬೇಕು ಎಂಬುದರ ಕುರಿತು ಅಂತಿಮ ರೂಪವನ್ನು ನೀಡಲಾಗುವುದು. ಯಾವ ನಗರಗಳಲ್ಲಿ ಆರ್​ಎಸ್​ಎಸ್​ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಅದರ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಭೆಯ ಕೊನೆಯಲ್ಲಿ ಚರ್ಚಿಸಲಾಗುವುದು. ಈ ಸಭೆ ಮಾರ್ಚ್ 13ರಂದು ಮುಕ್ತಾಯಗೊಳ್ಳುತ್ತದೆ ಎಂದು ಅಂಬೇಕರ್ ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಭಾಗವಾಗಿ, ಆರ್‌ಎಸ್‌ಎಸ್ ಹಲವಾರು ಸಂಸ್ಥೆಗಳ ಸಹಾಯದಿಂದ ರಾಷ್ಟ್ರವ್ಯಾಪಿ ಅಧ್ಯಯನವನ್ನು ಕೈಗೊಂಡಿದೆ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಜನರನ್ನು ಸ್ವಾವಲಂಬಿ ಮತ್ತು ಸ್ವಯಂ ಉದ್ಯೋಗಿಗಳನ್ನಾಗಿ ಮಾಡುವ ತರಬೇತಿ ಇತ್ಯಾದಿ ವಿಷಯಗಳ ಕುರಿತು ಎಷ್ಟು ಚಟುವಟಿಕೆಗಳು ಸಮಾಜದಲ್ಲಿ ನಿರೀಕ್ಷಿತ ಬದಲಾವಣೆಗಳನ್ನು ತಂದಿವೆ ಮತ್ತು ಅವರನ್ನು ಹೇಗೆ ಮುನ್ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುವುದು ಅವರು ಹೇಳಿದ್ದಾರೆ.

ಮೂರು ದಿನಗಳ ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗುಜರಾತ್ ಕೊಡುಗೆ, 1938ರಿಂದ ರಾಜ್ಯದಲ್ಲಿ ಸಂಘ ಚಟುವಟಿಕೆಗಳು, ವಿವಿಧ ಪ್ರದೇಶಗಳಿಗೆ ಹೇಗೆ ವಿಸ್ತರಿಸಿತು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗುವುದು. ಗುಜರಾತ್‌ನ ರಾಜ್‌ಕೋಟ್ 1988ರಲ್ಲಿ ನಾಗ್ಪುರದ ಹೊರಗೆ ಈ ಮಹತ್ವದ ಸಭೆಯನ್ನು ಆಯೋಜಿಸಿದ ಮೊದಲ ನಗರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಮಜ್ದೂರ್ ಸಂಘ, ವಿದ್ಯಾರ್ಥಿ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ರಾಷ್ಟ್ರ ಸೇವಿಕಾ ಸಮಿತಿ, ವಿದ್ಯಾ ಭಾರತಿ ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ 36 ಅಂಗಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಲಾಯಂ ಸಿಂಗ್ ಜತೆ ಮೋಹನ್ ಭಾಗವತ್ ಫೋಟೊ; ಸಮಾಜವಾದಿ ಪಕ್ಷವನ್ನು ಕುಟುಕಿದ ಕಾಂಗ್ರೆಸ್, ಚಿತ್ರ ಬಹಳಷ್ಟು ಹೇಳುತ್ತಿದೆ ಎಂದ ಬಿಜೆಪಿ

RSS Baithak: ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಆರ್​ಎಸ್​ಎಸ್​ ಬೈಠಕ್​ಗೆ ಮೋಹನ್ ಭಾಗವತ್ ಚಾಲನೆ

Published On - 6:30 pm, Wed, 9 March 22