ಪ್ರಧಾನಿ ಮೋದಿಯವರನ್ನು ಉಲ್ಲೇಖಿಸಿ, ಪಾಕಿಸ್ತಾನಕ್ಕೊಂದು ಎಚ್ಚರಿಕೆ ಕೊಟ್ಟ ಅಮೆರಿಕ ಗುಪ್ತಚರ ಸಂಸ್ಥೆ

ಯುಎಸ್​ನ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಕೇವಲ ಭಾರತ ಮತ್ತು ಪಾಕಿಸ್ತಾನದ ಬಗ್ಗೆಯಷ್ಟೇ ಅಲ್ಲ, ಭಾರತ ಮತ್ತು ಚೀನಾದ ಗಡಿ ವಿವಾದದ ಬಗ್ಗೆಯೂ ತನ್ನ ವಾರ್ಷಿಕ ವರದಿಯಲ್ಲಿ ಪ್ರಸ್ತಾಪ ಮಾಡಿದೆ.

ಪ್ರಧಾನಿ ಮೋದಿಯವರನ್ನು ಉಲ್ಲೇಖಿಸಿ, ಪಾಕಿಸ್ತಾನಕ್ಕೊಂದು ಎಚ್ಚರಿಕೆ ಕೊಟ್ಟ ಅಮೆರಿಕ ಗುಪ್ತಚರ ಸಂಸ್ಥೆ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Mar 09, 2022 | 6:03 PM

ಯುಎಸ್​​ನ ಗುಪ್ತಚರದಳ ಭಾರತದ ಬಗ್ಗೆ ಒಂದು ಮಹತ್ವದ ವಿಚಾರವನ್ನು ಹೇಳಿದೆ. ಇದು ಪಾಕಿಸ್ತಾನಕ್ಕೆ ಒಂದು ಎಚ್ಚರಿಕೆಯೂ ಹೌದು. ಪಾಕಿಸ್ತಾನದ ಯಾವುದೇ ರೀತಿಯ ಅನಗತ್ಯ ಪ್ರಚೋದನೆಗಳಿಗೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಇರುವ ಭಾರತ ತನ್ನ ಸೇನಾ ಬಲದಿಂದ ಹಿಂದೆಂದಿಗಿಂತಲೂ ತೀವ್ರವಾದ, ತೀಕ್ಷ್ಣವಾದ ಪ್ರತಿಕ್ರಿಯೆ ನೀಡಲಿದೆ ಎಂದು ಯುಎಸ್​ ಗುಪ್ತಚರ ಸಮುದಾಯ ಹೇಳಿದೆ. ಯುಎಸ್​ನ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಉಲ್ಲೇಖವಿದೆ. ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು ಪರಮಾಣು ಸಶಸ್ತ್ರ ರಾಷ್ಟ್ರಗಳಾಗಿವೆ. ಹೀಗಾಗಿ ಭಾರತ-ಪಾಕಿಸ್ತಾನ ನಡುವಿನ ಬಿಕ್ಕಟ್ಟು ಕಳವಳಕಾರಿಯಾಗಿದೆ ಎಂದು ಹೇಳಲಾಗಿದೆ. 

ಪಾಕಿಸ್ತಾನ ಗಡಿಯಲ್ಲಿ ಸದಾ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುತ್ತದೆ. ಸುಮ್ಮನೆ ಭಾರತೀಯ ಯೋಧರನ್ನು ಪ್ರಚೋದಿಸುತ್ತದೆ. ಅದಕ್ಕೆ ತಕ್ಕದಾದ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡುತ್ತಲೇ ಬರುತ್ತಿದೆ. ಹೀಗಿರುವಾಗ ಯುಎಸ್​ನ ಈ ಗುಪ್ತಚರ ವರದಿ ಪಾಕಿಸ್ತಾನಕ್ಕೊಂದು ಎಚ್ಚರಿಕೆಯ ಗಂಟೆಯೇ ಆಗಿದೆ. ಪಾಕಿಸ್ತಾನ ವೃಥಾ ಕಾಲುಕೆದರಿ ಭಾರತ ಭದ್ರತೆಗೆ ಅಪಾಯವೊಡ್ಡಿದರೆ, ಅದು ಭಾರತದ ಕಡೆಯಿಂದ ತೀವ್ರತರನಾದ ಸೇನಾ ಕಾರ್ಯಾಚರಣೆ ಎದುರಿಸಲಿದೆ ಎಂಬುದು ಯುಎಸ್​ ಗುಪ್ತಚರ ದಳದ ವರದಿಯ ಸಾರಾಂಶ.

ಯುಎಸ್​ನ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ ಕೇವಲ ಭಾರತ ಮತ್ತು ಪಾಕಿಸ್ತಾನದ ಬಗ್ಗೆಯಷ್ಟೇ ಅಲ್ಲ, ಭಾರತ ಮತ್ತು ಚೀನಾದ ಗಡಿ ವಿವಾದದ ಬಗ್ಗೆಯೂ ತನ್ನ ವಾರ್ಷಿಕ ವರದಿಯಲ್ಲಿ ಪ್ರಸ್ತಾಪ ಮಾಡಿದೆ. ವಿವಾದಿತ ಗಡಿಯಲ್ಲಿ ಭಾರತ ಮತ್ತು ಚೀನಾಗಳು ತಮ್ಮ ಸೇನಾ ಬಲವನ್ನು ವಿಸ್ತರಿಸುತ್ತಿವೆ. ಇವೆರಡೂ ರಾಷ್ಟ್ರಗಳೂ ಪರಮಾಣು ಶಕ್ತಿ ಶಸ್ತ್ರಗಳನ್ನು ಹೊಂದಿದ್ದು, ಮುಂದೊಂದು ದಿನ ಒಮ್ಮೆ ಶಸ್ತ್ರ ಪ್ರಯೋಗ ಪ್ರಾರಂಭವಾದರೆ ಅದು ಯುಎಸ್​​ಗೂ ಅಪಾಯವೊಡ್ಡಲಿದೆ. ಹೀಗಾಗಿ ಈ ವಿಚಾರದಲ್ಲಿ ಯುಎಸ್​ ಮಧ್ಯಸ್ಥಿಕೆ ಅಗತ್ಯವಿರುತ್ತದೆ ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ. ಹಾಗೇ, 2020ರ ಪೂರ್ವ ಲಡಾಖ್​​ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಾಗಿನಿಂದಲೂ ಎರಡೂ ರಾಷ್ಟ್ರಗಳ ನಡುವಿನ ಸೌಹಾರ್ದತೆ ಸರಿಯಿಲ್ಲ ಎಂಬುದನ್ನು ಒತ್ತಿ ಹೇಳಲಾಗಿದೆ.

ಇದನ್ನೂ ಓದಿ: ಚೆರ್ನೋಬಿಲ್ ನ್ಯೂಕ್ಲಿಯರ್ ಡೇಟಾ ಸಿಸ್ಟಮ್ಸ್ ಸಂಪರ್ಕ ಕಳೆದುಕೊಂಡಿದೆ: ಐಎಇಎ

Published On - 5:59 pm, Wed, 9 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್