ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ‌ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ

ISIS K: ಐಸಿಸ್-ಕೆ ಸಂಘಟನೆ ಆಫ್ಘನ್‌ನಲ್ಲಿ ಬಲವಾಗಿ ಬೆಳೆಯುತ್ತಿದೆ. ಅದು ಅಮೆರಿಕ ಮೇಲೆ‌ ದಾಳಿ ಮಾಡುವವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ಅಮೆರಿಕ ಗುಪ್ತಚರ ಸಮುದಾಯದಿಂದ ಎಚ್ಚರಿಕೆ ಕೇಳಿಬಂದಿದೆ. ಪೆಂಟಗಾನ್ ಅಧಿಕಾರಿಯೊಬ್ಬರು ಅಮೆರಿಕ ಕಾಂಗ್ರೆಸ್‌ಗೆ ಈ ಬಗ್ಗೆ ತಿಳಿಸಿದ್ದಾರೆ.

ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ‌ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ
ಆರೇ ತಿಂಗಳಲ್ಲಿ ಐಸಿಸ್ ಸಂಘಟನೆ ಅಮೆರಿಕ ಮೇಲೆ‌ ದಾಳಿ ಮಾಡುವ ಸಾಮರ್ಥ್ಯ ಹೊಂದಲಿದೆ: ಅಮೆರಿಕ ಗುಪ್ತಚರರಿಂದ ಎಚ್ಚರಿಕೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 27, 2021 | 1:43 PM

ವಾಷಿಂಗ್ಟನ್: ಇನ್ನು ಆರೇ ತಿಂಗಳಲ್ಲಿ ಐಸಿಸ್-ಕೆ ಉಗ್ರ ಸಂಘಟನೆ ಅಮೆರಿಕದ ಮೇಲೆ‌ ದಾಳಿ ಮಾಡಲಿದೆ. ಐಸಿಸ್-ಕೆ ಸಂಘಟನೆ ಆಫ್ಘನ್‌ನಲ್ಲಿ ಬಲವಾಗಿ ಬೆಳೆಯುತ್ತಿದೆ. ಅದು ಅಮೆರಿಕ ಮೇಲೆ‌ ದಾಳಿ ಮಾಡುವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ಅಮೆರಿಕ ಗುಪ್ತಚರ ಸಮುದಾಯದಿಂದ ಎಚ್ಚರಿಕೆ ಕೇಳಿಬಂದಿದೆ. ಪೆಂಟಗಾನ್ ಅಧಿಕಾರಿಯೊಬ್ಬರು ಅಮೆರಿಕ ಕಾಂಗ್ರೆಸ್‌ಗೆ ಈ ಬಗ್ಗೆ ತಿಳಿಸಿದ್ದಾರೆ.

ಐಸಿಸ್-ಕೆ ಸಂಘಟನೆ ಆಫ್ಘನ್‌ನಲ್ಲಿ ಬಲವಾಗಿ ಬೆಳೆಯುತ್ತಿದೆ. ಅದು ಅಮೆರಿಕ ಮೇಲೆ‌ ದಾಳಿ ಮಾಡುವವಷ್ಟು ಸಾಮರ್ಥ್ಯ ಹೊಂದಲಿದೆ ಎಂದು ಅಮೆರಿಕ ಗುಪ್ತಚರ ಸಮುದಾಯ ಎಚ್ಚರಿಕೆ ನೀಡಿರುವುದಾಗಿ ಪೆಂಟಗಾನ್ ಅಧಿಕಾರಿಯೊಬ್ಬರು ಅಮೆರಿಕ ಕಾಂಗ್ರೆಸ್‌ಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಕೇವಲ ಆರು ತಿಂಗಳೊಳಗೆ ಅಮೇರಿಕಾ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್ ಗುಪ್ತಚರ ಸಮುದಾಯವು ಅಂದಾಜಿಸಿದೆ ಜೊತೆಗೆ ದಾಳಿ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಪೆಂಟಗನ್ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ರಕ್ಷಣಾ ಕಾರ್ಯದರ್ಶಿಯ ಅಧೀನ ಕಾರ್ಯದರ್ಶಿ ಕಾಲಿನ್ ಕಾಹ್ಲ್ ಈ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನವು ತನ್ನ ಎರಡು ದಶಕಗಳ-ಹಳೆಯ ಯುದ್ಧವನ್ನು ಆಗಸ್ಟ್‌ನಲ್ಲಿ ಕೊನೆಗೊಳಿಸಿದ ನಂತರವೂ ಅಮೇರಿಕಾಗೆ ಗಂಭೀರ ರಾಷ್ಟ್ರೀಯ ಭದ್ರತಾ ಹಾನಿ ಮಾಡುವ ಸಾಮರ್ಥ್ಯವನ್ನು ಇಸ್ಲಾಮಿಕ್‌ ಸ್ಟೇಟ್ ವೃದ್ದಿಸಿಕೊಳ್ಳುತ್ತಿದೆ.‌

ಯುದ್ಧವನ್ನು ಗೆದ್ದ ತಾಲಿಬಾನ್ ಗೆದ್ದಿ ಬಳಿಕ ತಾಲಿಬಾನ್ ಗೆ ಇಸ್ಲಾಮಿಕ್ ಸ್ಟೇಟ್‌ನ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಹಕ್ಕು ಸಾಧಿಸಲು ಆತ್ಮಹತ್ಯಾ ಬಾಂಬ್‌ ದಾಳಿಗಳು ನಡೆಯುತ್ತಿದೆ. ಅಮೇರಿಕಾ ಸೇನೆ ವಾಪಾಸ್ ಕರೆಸಿಕೊಂಡ ಬಳಿಕ ಇಸ್ಲಾಮಿಕ್ ಸ್ಟೇಟ್ ನ ದಾಳಿಗಳು ಹೆಚ್ಚಾಹಿವೆ.‌

ಇಸ್ಲಾಮಿಕ್ ಸ್ಟೇಟ್ ಅಲ್ಪಸಂಖ್ಯಾತ ಶಿಯಾ ಪಂಥವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿಗಳನ್ನು ಮಾಡುತ್ತಿದೆ. ಜಲಾಲಾಬಾದ್‌ನಲ್ಲಿ ತಾಲಿಬಾನ್ ಮಿಲಿಟರಿ ಪಡೆಯ ಸದಸ್ಯನ ಶಿರಚ್ಛೇದದವನ್ನು ಇಸ್ಲಾಮಿಕ್ ಸ್ಟೇಟ್ ಮಾಡಿದೆ. ಅಮೇರಿಕಾ ಸೇನೆ ವಾಪಾಸ್ ಆದ ಬಳಿಕ ಇಸ್ಲಾಮಿಕ್‌ ಸ್ಟೇಟ್ ಖೊರಾಸಾನ್ ಬಲಗೊಂಡಿದೆ. ತ ಇಸ್ಲಾಮಿಕ್ ಸ್ಟೇಟ್ ನ ದಾಳಿಗಳನ್ನು ತಡೆಯಲು ತಾಲಿಬಾನ್ ಗೆ ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಗೆ ಇಸ್ಲಾಮಿಕ್ ಸ್ಟೇಟ್ ಎದುರಿಸುವ ಸಾಮರ್ಥ್ಯ ಇಲ್ಲ ಎನ್ನುವುದು ಸಾಬೀತಾಗುತ್ತಿದೆ.

ಇಸ್ಲಾಮಿಕ್‌ ಸ್ಟೇಟ್ ತನ್ನದೆ ಆದ ಸಾವಿರಾರು ಯುವಕರ ಪಡೆಕಟ್ಟಿಕೊಂಡಿದೆ. ಮುಂದಿನ ಆರು ತಿಂಗಳಲ್ಲಿ ಅಮೇರಿಕಾ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ. ದಾಳಿ ಮಾಡುವ ಉದ್ದೇಶವನ್ನು ಐಸಿಸ್ ಕೆ ಹೊಂದಿದೆ ಎಂದು ಖಾಲ್ ಅಂದಾಜಿಸಿದ್ದಾರೆ.

Also Read: ತಾಲಿಬಾನ್​ಗೆ ಧರ್ಮ ಸಂಕಟ! ಈ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿರುವ ಭಾರತ ಕೈಗೊಳ್ಳುವುದೇ ದಿಟ್ಟ ಕ್ರಮ?

Also Read: ತಾಲಿಬಾನ್​ಗೆ ಸದ್ಯಕ್ಕೆ ಮಾನ್ಯತೆ ಇಲ್ಲ, ಭರವಸೆ ಈಡೇರಿಸಿದ ಮೇಲೆ ನೋಡೋಣ ಎಂದ ರಷ್ಯಾ

ದಿಢೀರನೆ ವಾಲುತ್ತಾ ಆತಂಕ ಮೂಡಿಸಿದ ವಿದ್ಯುತ್ ಕಂಬ|Davanagere light poll|TV9 Kannada

(isis k growing strong in afghanistan will attack us in six months informs pentagon officer to america congress)

Published On - 12:13 pm, Wed, 27 October 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್