AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ

ಇಟಲಿಯ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ಹೋಗಿ 'ನೀವು ನನ್ನನ್ನು ಜೈಲಿನಲ್ಲಿಡಲೇಬೇಕು. ನನ್ನ ಹೆಂಡತಿಯೊಂದಿಗೆ ಆ ಮನೆಯಲ್ಲಿ ವಾಸಿಸುವುದಕ್ಕಿಂತ ಜೈಲಿನಲ್ಲಿರುವುದೇ ಉತ್ತಮ ಎಂದು ನನಗೆ ಅನಿಸುತ್ತಿದೆ' ಎಂದಿದ್ದಾನೆ.

Viral News: ಜೈಲಿಗೆ ಹಾಕಿ ಪ್ಲೀಸ್!; ಮನೆಯಲ್ಲಿ ಹೆಂಡತಿಯ ಕಾಟ ತಾಳಲಾರದೆ ಪೊಲೀಸರ ಬಳಿ ಬೇಡಿಕೊಂಡ ಗಂಡ
ಜೈಲು (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Oct 26, 2021 | 6:46 PM

Share

ಮದುವೆಯಾಗುವವರೆಗೂ ತನಗೊಬ್ಬಳು ಸಂಗಾತಿ ಬೇಕೆಂದು ಹಂಬಲಿಸುವ ಬಹುತೇಕ ಗಂಡಸರು ಮದುವೆಯಾದ ನಂತರ ಯಾಕಾದರೂ ಮದುವೆಯಾದೆನೋ! ಎಂದು ಕೊರಗುತ್ತಾರೆ. ಈ ಮಾತು ಎಲ್ಲರಿಗೂ ಅನ್ವಯವಾಗದಿದ್ದರೂ ಬಹುತೇಕರ ವಿಚಾರದಲ್ಲಂತೂ ಈ ಮಾತನ್ನು ಅಲ್ಲಗಳೆಯುವಂತಿಲ್ಲ. ಹಾಗಂತ ಭಾರತದಲ್ಲಿ ಮಾತ್ರ ಮದುವೆಯ ಈ ಬಂಧನದಿಂದ ಒಮ್ಮೆ ಬಿಡುಗಡೆಯಾದರೆ ಸಾಕು ಎಂದು ಕೊರಗುವ ಜನರಿದ್ದಾರೆ ಎಂದು ನೀವಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಇಟಲಿ ದೇಶದಲ್ಲೂ ಮದುವೆಗೆ ಇಲ್ಲಿಯಷ್ಟೇ ಪ್ರಾಮುಖ್ಯತೆಯಿದ್ದು, ಇಲ್ಲಿಯ ಗಂಡನೊಬ್ಬ ತನ್ನ ಹೆಂಡತಿಯ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ಬಹುಶಃ ಕಾಟ ಕೊಡುವ ಹೆಂಡತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋಗಿರಬಹುದು ಅಥವಾ ಆಕೆಗೆ ವಿಚ್ಛೇದನ ನೀಡಲು ಯೋಚಿಸಿರಬಹುದು ಎಂದೆಲ್ಲ ನೀವಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಆ ವ್ಯಕ್ತಿ ಅಲ್ಲಿಗೆ ಹೋಗಿದ್ದು ತನ್ನನ್ನು ಅರೆಸ್ಟ್ ಮಾಡಿ ಎಂದು ಪೊಲೀಸರ ಬಳಿ ಬೇಡಿಕೊಳ್ಳೋಕೆ! ಮನೆಯಲ್ಲಿ ಹೆಂಡತಿಯ ಜೊತೆ ಇರಲಾರದೆ ಮನೆಗಿಂತಲೂ ಜೈಲೇ ಒಳ್ಳೆಯದು ಎಂದು ನಿರ್ಧರಿಸಿದ ಆತ ತನ್ನನ್ನು ಬಂಧಿಸಿ, ಜೈಲಿನಲ್ಲಿ ಇರಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.

ಗಂಡ- ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು, ಕೋಪ-ತಾಪ-ಜಗಳಗಳು ಸಾಮಾನ್ಯ. ಒಬ್ಬರಿಗೆ ಒಬ್ಬರು ಹೊಂದಾಣಿಕೆ ಮಾಡಿಕೊಂಡು ಹೋದರೆ ಎಲ್ಲವೂ ಸರಿಯಾಗುತ್ತದೆ. ಕೆಲವರು ಸಣ್ಣಪುಟ್ಟ ವಿಷಯಕ್ಕೂ ಡೈವೋರ್ಸ್ ಪಡೆಯುವ ನಿರ್ಧಾರ ಮಾಡುತ್ತಾರೆ. ಆದರೆ, ಇಟಲಿಯಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ತಪ್ಪಿಸಿಕೊಳ್ಳಲು ಪೊಲೀಸರ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ.

ಇಟಲಿಯ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ಹೋಗಿ ‘ನೀವು ನನ್ನನ್ನು ಜೈಲಿನಲ್ಲಿಡಲೇಬೇಕು. ನನ್ನ ಹೆಂಡತಿಯೊಂದಿಗೆ ಆ ಮನೆಯಲ್ಲಿ ವಾಸಿಸುವುದಕ್ಕಿಂತ ಜೈಲಿನಲ್ಲಿರುವುದೇ ಉತ್ತಮ ಎಂದು ನನಗೆ ಅನಿಸುತ್ತಿದೆ’ ಎಂದಿದ್ದಾನೆ.

ಹಾಗಂತ ಆತನೇನೂ ಪ್ರಾಮಾಣಿಕನಲ್ಲ. 30 ವರ್ಷದ ಅಲ್ಬೇನಿಯನ್ ಪ್ರಜೆಯಾದ ಆತನನ್ನು ಕಳೆದ ಕೆಲವು ತಿಂಗಳುಗಳಿಂದ ಮಾದಕವಸ್ತು ಸಂಬಂಧಿತ ಅಪರಾಧಗಳ ಹಿನ್ನೆಲೆಯಲ್ಲಿ ಪೊಲೀಸರು ಗೃಹಬಂಧನದಲ್ಲಿರಿಸಿದ್ದರು. ಆತನ ಗೃಹಬಂಧನ ಇನ್ನೂ ಮುಗಿದಿರಿಲಿಲ್ಲ. ಆ ಮನೆಯಲ್ಲಿ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದ ಆತನಿಗೆ ಅದೇ ದೊಡ್ಡ ಹಿಂಸೆಯಾಗಿತ್ತು. ಹೀಗಾಗಿ, ಇನ್ನು ಆ ಮನೆಯಲ್ಲಿ ಗೃಹಬಂಧನದಲ್ಲಿರಲು ಸಾಧ್ಯವಿಲ್ಲ, ನನ್ನನ್ನು ಜೈಲಿಗೆ ಹಾಕಿ ಎಂದು ಆತ ಮನವಿ ಮಾಡಿದ್ದಾನೆ.

ಆತನ ಮನವಿಯನ್ನು ಒಪ್ಪಿದ ಪೊಲೀಸರು ಗೃಹಬಂಧನದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆತನನ್ನು ಜೈಲಿನಲ್ಲಿ ಇರಿಸಿದರು. ಇದರಿಂದ ಆತ ಬಹಳ ಖುಷಿಪಟ್ಟನು. ನ್ಯಾಯಾಲಯದ ಅಧಿಕಾರಿಗಳು ಕೂಡ ಸ್ಥಳೀಯ ಪೊಲೀಸರಿಗೆ ಆತನನ್ನು ಡ್ರಗ್ಸ್​ ಪ್ರಕರಣದ ಆರೋಪದಲ್ಲಿ ಜೈಲಿನಲ್ಲಿ ಇರಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದರು. ಈ ಮೂಲಕ ಆತನಿಗೆ ತನ್ನ ಮನೆ ಹಾಗೂ ಕುಟುಂಬದಿಂದ ತಾತ್ಕಾಲಿಕವಾದ ಮುಕ್ತಿ ಸಿಕ್ಕಂತಾಗಿದೆ!

ಇದನ್ನೂ ಓದಿ: Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 6:44 pm, Tue, 26 October 21