ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎಜಿ ಪೇರರಿವಾಲನ್‌ಗೆ ಸುಪ್ರೀಂಕೋರ್ಟ್ ಜಾಮೀನು

A G Perarivalan ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಾಲನ್​​ ಬಂಧನಕ್ಕೊಳಗಾದಾಗ ಆತನ ವಯಸ್ಸು 19. ಮೇ 1999 ರಲ್ಲಿ ಪೇರರಿವಾಲನ್​​ಗೆ ಮರಣದಂಡನೆ ವಿಧಿಸಲಾಯಿತು.

ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎಜಿ ಪೇರರಿವಾಲನ್‌ಗೆ ಸುಪ್ರೀಂಕೋರ್ಟ್ ಜಾಮೀನು
ಎಜಿ ಪೇರರಿವಾಲನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 09, 2022 | 4:05 PM

ದೆಹಲಿ: ರಾಜೀವ್ ಗಾಂಧಿ ಹತ್ಯೆಯ (Rajiv Gandhi assassination ) ಅಪರಾಧಿ ಎಜಿ ಪೇರರಿವಾಲನ್‌ಗೆ(A G Perarivalan) ಸುಪ್ರೀಂಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ಬಿಡುಗಡೆ ಕೋರಿ ಸಲ್ಲಿಸಿರುವ ಮನವಿಯ ಕುರಿತು ರಾಜ್ಯಪಾಲರು ಇನ್ನೂ ತೀರ್ಮಾನಿಸದಿರುವ ಕಾರಣ ಪೇರರಿವಾಲನ್​​ಗೆ ಜಾಮೀನು ನೀಡಬೇಕೆ ಎಂದು ಸುಪ್ರೀಂಕೋರ್ಟ್‌ (Supreme Court) ಚಿಂತನೆ ನಡೆಸಿತ್ತು. ಪೇರರಿವಾಲನ್ ಮನವಿಯನ್ನು ನಿರ್ಧರಿಸಲು ರಾಷ್ಟ್ರಪತಿಗಳೇ ಸೂಕ್ತ ಅಧಿಕಾರ ಎಂದು ಕೇಂದ್ರವು ಮನವಿಯನ್ನು ವಿರೋಧಿಸಿತ್ತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಾಲನ್​​ ಬಂಧನಕ್ಕೊಳಗಾದಾಗ ಆತನ ವಯಸ್ಸು 19. ಮೇ 1999 ರಲ್ಲಿ ಪೇರರಿವಾಲನ್​​ಗೆ ಮರಣದಂಡನೆ ವಿಧಿಸಲಾಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಂದ ಬೆಲ್ಟ್ ಬಾಂಬ್ ಅನ್ನು ಪ್ರಚೋದಿಸಲು ಬಳಸಿದ 8-ವೋಲ್ಟ್ ಬ್ಯಾಟರಿಯನ್ನು ಖರೀದಿಸಿದ ಆರೋಪ  ಈತನ ಮೇಲಿದೆ. 2014ರಲ್ಲಿ ಪೇರರಿವಾಲನ್ , ಮುರುಗನ್ ಮತ್ತು ಸಂತನ್ (ಇಬ್ಬರೂ ಶ್ರೀಲಂಕಾದವರು) ಶಿಕ್ಷೆಯನ್ನು ಅವರ ಕ್ಷಮಾದಾನ ಅರ್ಜಿಗಳ ದೀರ್ಘಾವಧಿಯ ಬಾಕಿಯ ಮೇಲೆ ಜೀವಾವಧಿಗೆ ಬದಲಾಯಿಸಲಾಯಿತು. ಇದಾದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠವು “ಅವರು ಈಗಾಗಲೇ 30 ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾಗಿರುವುದರಿಂದ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರ ತೀವ್ರ ವಿರೋಧದ ನಡುವೆಯೂ ಅವರು ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ನಾವು ಪರಿಗಣಿಸಿದ್ದೇವೆ” ಎಂದು ಹೇಳಿದರು.

ಕ್ಷಮಾಪಣೆಗಾಗಿ ತನ್ನ ಮನವಿ ಬಗ್ಗೆ ರಾಜ್ಯಪಾಲರು ಇನ್ನೂ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಈ ವಿಳಂಬವು ಜಾಮೀನಿಗೆ ಕಾರಣ ಎಂದು ಪೇರರಿವಾಲನ್ ಹೇಳಿದ್ದಾರೆ.

ಅವರ ಮನವಿಯನ್ನು ವಿರೋಧಿಸಿದ ಕೇಂದ್ರವು, ಪೇರರಿವಾಲನ್ ಅವರ ಕೋರಿಕೆಗಳನ್ನು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸೂಕ್ತ ಅಧಿಕಾರ ಎಂದು ಹೇಳಿತ್ತು. “ಒಂದು ವೇಳೆ ಒಕ್ಕೂಟದ ಕಾರ್ಯನಿರ್ವಾಹಕ ಅಧಿಕಾರವನ್ನು ವಿಸ್ತರಿಸುವ ಅಪರಾಧಗಳ ಸಂದರ್ಭದಲ್ಲಿ, ಬಿಡುಗಡೆಗಾಗಿ ಮನವಿಯನ್ನು ನಿರ್ಧರಿಸಲು ಕೇಂದ್ರವು ಅರ್ಹವಾಗಿದೆ” ಎಂದು ಅದು ಹೇಳಿದೆ. ಪೇರರಿವಾಲನ್ ಅವರು ಈಗಾಗಲೇ ಮರಣದಂಡನೆಯನ್ನು ಜೀವಾವಧಿಗೆ ಇಳಿಸುವ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಮತ್ತು ಅವರ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸುವಲ್ಲಿ ವಿಳಂಬವಾಗಿದೆ. ಇನ್ನೊಂದು ವಿಳಂಬವನ್ನು ಉಲ್ಲೇಖಿಸಿ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅದು ವಾದಿಸಿದೆ.

ಈ ಕುರಿತು ಸುಪ್ರೀಂ ಕೋರ್ಟ್ ಭಾರತೀಯ ಒಕ್ಕೂಟದ ನಿಲುವನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ವಿಧಿಸಲಾದ ಮರಣದಂಡನೆಯನ್ನು ಜೀವಾವಧಿಗೆ ಇಳಿಸಿದ ನಂತರ ಅರ್ಜಿಯನ್ನು ಪುರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈವಿಷಯವನ್ನು ಅಂತಿಮವಾಗಿ ನಿರ್ಧರಿಸಬೇಕಿದೆ.

“ದೀರ್ಘ ಸೆರೆವಾಸ ಮತ್ತು ಅನಾರೋಗ್ಯದ ಸಮಯದಲ್ಲಿ ಅವರ ನಡವಳಿಕೆಯನ್ನು ಸಾಬೀತುಪಡಿಸಲು ಅರ್ಜಿದಾರರಿಂದ ಸಾಕಷ್ಟು ವಿವರಗಳನ್ನು ಪಡೆಯಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

2015 ರಲ್ಲಿ ಪೆರಾರಿವಾಲನ್ ಸಲ್ಲಿಸಿದ ಕ್ಷಮಾದಾನ ಕೋರಿಕೆಯನ್ನು ರಾಜ್ಯಪಾಲರು ಪರಿಗಣಿಸಲಿಲ್ಲ, ಸೆಪ್ಟೆಂಬರ್ 2018 ರಲ್ಲಿ ಸಂಬಂಧಿತ ಅರ್ಜಿಯ ಮೇಲಿನ ಸುಪ್ರೀಂ ಕೋರ್ಟ್ ಆದೇಶವು ಕ್ಷಮಾದಾನದ ಬಗ್ಗೆ ನಿರ್ಧರಿಸಲು ರಾಜ್ಯಪಾಲರು “ಯೋಗ್ಯವೆಂದು ಪರಿಗಣಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ. ಇದಾದ ಮೂರು ದಿನಗಳಲ್ಲಿ ಎಐಎಡಿಎಂಕೆ ಸರ್ಕಾರವು ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿತು.

ತಮಿಳುನಾಡು ಸರ್ಕಾರವು ಸೆಪ್ಟೆಂಬರ್ 9, 2018 ರಂದು ಪ್ರಕರಣದಲ್ಲಿ ಪೇರರಿವಾಲನ್ ಮತ್ತು ಇತರ ಆರು ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ಇದನ್ನೂ  ಓದಿ: ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ರೆಸಾರ್ಟ್ ವಾಸದ ಬೆನ್ನಲ್ಲೇ  ತಮ್ಮ ಅಭ್ಯರ್ಥಿಗಳಿಗೆ ಕಾವಲಾಗಿ ನಿಂತ ಎಎಪಿ

Published On - 3:28 pm, Wed, 9 March 22

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ