ಸಂಸತ್ತಿಗೆ ಕಾಂಗ್ರೆಸ್ ಚರ್ಚಿಸಲು ಬಂದಿದೆಯೋ, ಚಿಕನ್ ತಿನ್ನಲು ಬಂದಿದೆಯೋ..? -ಪ್ರಲ್ಹಾದ್ ಜೋಶಿ ಲೇವಡಿ
Pralhad Joshi: ಕಾಂಗ್ರೆಸ್ ಸಂಸದರು ಸಂಸತ್ತಿಗೆ ಬಂದಿರುವುದು ಏಕೆ ಅನ್ನೋದನ್ನ ದೇಶದ ಜನರಿಗೆ ತಿಳಿಸಲಿ. ಇವರು ಸಂಸತ್ತಿನಲ್ಲಿ ಚರ್ಚೆ ನಡೆಸಲು ಬಂದಿದ್ದಾರೋ ಅಥವಾ ಗಾಂಧಿ ಪ್ರತಿಮೆ ಕೆಳಗೆ ಕುಳಿತು ಚಿಕನ್ ತಿನ್ನಲು ಬಂದಿದ್ದಾರೋ..? - ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ
ನವದೆಹಲಿ: ಸದನದ ಕಲಾಪಗಳಲ್ಲಿ ಗದ್ದಲ ಎಬ್ಬಿಸಿ ಗಾಂಧಿ ಪ್ರತಿಮೆ ಎದುರು (Gandhi Statue, Parliament) ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸಂಸದರ (Congress MPs) ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸಂಸದರು ಸಂಸತ್ತಿಗೆ ಬಂದಿರುವುದು ಏಕೆ ಅನ್ನೋದನ್ನ ದೇಶದ ಜನರಿಗೆ ತಿಳಿಸಲಿ. ಇವರು ಸಂಸತ್ತಿನಲ್ಲಿ ಚರ್ಚೆ ನಡೆಸಲು ಬಂದಿದ್ದಾರೋ ಅಥವಾ ಗಾಂಧಿ ಪ್ರತಿಮೆ ಕೆಳಗೆ ಕುಳಿತು ಚಿಕನ್ ತಿನ್ನಲು ಬಂದಿದ್ದಾರೋ..? ದೇಶದ ಜನರಿಗೆ ಹೇಳಿ ಎಂದು ಪ್ರತಿಭಟನಾ ನಿರತ ಕೈ ಸಂಸದರನ್ನ ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಾಂಧಿಜಿಯವರು ಅಹಿಂಸೆಯಲ್ಲಿ ಅಚಲ ನಂಬಿಕೆಯುಳ್ಳ ಮಹಾತ್ಮರು. ಮಹಾತ್ಮ ಗಾಂಧೀಜಿಯವರ ಪ್ರತಿಮೆ ಕೆಳಗೆ ಕುಳಿತು ಕಾಂಗ್ರೆಸ್ ಸಂಸದರು ಕೋಳಿ ಮಾಂಸ ತಿನ್ನುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ದೇಶದ ಮಹಾನ್ ವ್ಯಕ್ತಿಗಳನ್ನ ಅವಮಾನಿಸುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿದೆ ಎಂದು ಪ್ರಲ್ಹಾದ್ ಜೋಶಿ ಕೈ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.
ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆಯೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧಿರ್ ರಂಜನ್ ಚೌಧರಿ ಅವರು ಅವಹೇಳನಕಾರಿಯಾಗಿ ಮಾತಾಡಿದ್ದಾರೆ, ರಾಷ್ಟ್ರಪತಿ ಬದಲು ರಾಷ್ಟ್ರಪತ್ನಿ ಎಂದು ಅಧಿರ್ ರಂಜನ್ ಚೌಧರಿ ಅವರು ಹೇಳಿರುವುದು ರಾಷ್ಟ್ರಕ್ಕೆ ಮಾಡಿದ ಅವಮಾನ. ಆದಿವಾಸಿಗಳಿಗೆ ಮಾಡಿದ ಅವಮಾನ. ಈ ಬಗ್ಗೆ ಕ್ಷಮೆಯಾಚಿಸುವ ಬದಲು, ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿರುವಂತೆ ತೋರುತ್ತಿದೆ. ಸೋನಿಯಾ ಗಾಂಧಿ ಅವರೇ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
We have heard that near Mahatma Gandhi's statue, a firm believer in non-violence, Congress leaders were having chicken in the name of protest. Leave aside the discussion on important issues, it has become a practise for Congress to insult national icon
— Pralhad Joshi (@JoshiPralhad) July 29, 2022