ನವದೆಹಲಿ, ಮಾರ್ಚ್ 7: ಕರ್ನಾಟಕದ ಕಾಂಗ್ರೆಸ್ನಿಂದ ಶುರುವಾದ ಗ್ಯಾರಂಟಿ (congress guarantee) ಭರವಸೆ ಈಗ ಲೋಕ ಸಮರದಲ್ಲಿ ಜೋರಾಗಿ ನಡೆಯುತ್ತಿದೆ. ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ (Modi ki Guarantee) ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಖಾತ್ರಿ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ದೇಶದ ಯುವಕರಿಗೆ ಉದ್ಯೋಗ ಕೊಡುವ ಉದ್ದೇಶ ಪ್ರಧಾನಿ ಮೋದಿಗೆ ಇಲ್ಲ ಎಂದು ಹಂಗಿಸಿರುವ ರಾಹುಲ್ ಗಾಂಧಿ, ಖಾಲಿ ಉಳಿದಿರುವ 30 ಲಕ್ಷ ಸರ್ಕಾರಿ ನೌಕರಿಗಳನ್ನು ಭರ್ತಿ ಮಾಡುವುದಾಗಿ ದೊಡ್ಡ ಭರವಸೆ ಕೂಡ ನೀಡಿದ್ದಾರೆ.
ಇದನ್ನೂ ಓದಿ: ಈ ಹಣಕಾಸು ವರ್ಷ ಜಿಡಿಪಿ ದರ ಶೇ. 8ಕ್ಕೆ ಸಮೀಪ: ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಂದಾಜು
ಯುವಕರಿಗೆ ಅಪ್ರೆಂಟಿಸ್ ಅಥವಾ ತರಬೇತಿ ಹಕ್ಕು ಒದಗಿಸುವ ಭರವಸೆಯನ್ನು ಕಾಂಗ್ರೆಸ್ ಪರಿಶೀಲಿಸುತ್ತಿದೆ. ಅದರ ಅಡಿಯಲ್ಲಿ ಯುವಸಮುದಾಯಕ್ಕೆ ಅಗತ್ಯ ವೃತ್ತಿಪರ ಶಿಕ್ಷಣದ ವ್ಯವಸ್ಥೆ ಮಾಡುವುದರ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಅವರಿಗೆ ಇಂಟರ್ನ್ಶಿಪ್ ಅಥವಾ ತರಬೇತಿ ಕೊಡಿಸುವುದು ಈ ಯೋಜನೆಯಲ್ಲಿದೆ.
ಯುವಕರನ್ನು ವೃತ್ತಿಪರ ತರಬೇತಿ ಮೂಲಕ ಕೆಲಸಕ್ಕೆ ಅಣಿಗೊಳಿಸುವುದು ಈ ಯೋಜನೆಯ ಉದ್ದೇಶ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Thu, 7 March 24