ದೆಹಲಿ ಡಿಸೆಂಬರ್ 22: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಶುಕ್ರವಾರ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಟೀಕಿಸಿದ್ದು, ಜಾಟ್ ಜಾತಿಯವರಾದ ಕಾರಣ ಅವಮಾನಿಸಲಾಗಿದೆ ಎಂದು ಆರೋಪಿಸುವ ಬದಲು ಸಾಂವಿಧಾನಿಕ ಹುದ್ದೆಯನ್ನು ಎತ್ತಿಹಿಡಿಯಬೇಕು ಎಂದು ರಾಜ್ಯಸಭೆಯ ಸಭಾಪತಿಗೆ ನೆನಪಿಸಿದ್ದಾರೆ.ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ಇಂಡಿಯಾ ಬಣ (INDIA bloc) ಶುಕ್ರವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar)ಪ್ರತಿಭಟನೆ ನಡೆಸಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಜನರು ಒಂದಾಗಬೇಕು ಎಂದು ಖರ್ಗೆ ಕರೆ ನೀಡಿದ್ದಾರೆ.
“ನೀವು (ಧನ್ಖರ್) ಸಾಂವಿಧಾನಿಕ ಹುದ್ದೆಯಲ್ಲಿದ್ದೀರಿ. ನೀವು ಅದನ್ನು ಎತ್ತಿಹಿಡಿಯಬೇಕು. ಜಾತಿಯ ಬಗ್ಗೆ ಕೆಣಕಬಾರದು. ನನ್ನ ಜಾತಿಯಿಂಗಾಗಿ ನನ್ನನ್ನು ಗುರಿಯಾಗಿಸಲಾಗಿದೆ ಎಂದು ಹೇಳಬಾರದು. ನಾನು ಎದ್ದಾಗ ಸಂಸತ್ ಸದಸ್ಯರು ನನ್ನನ್ನು ಮಾತನಾಡದಂತೆ ತಡೆಯುತ್ತಾರೆ. ಹಾಗಾಗಿ ನಾನು ದಲಿತ ಎಂಬ ಕಾರಣಕ್ಕಾಗಿ ಅವರು ನನ್ನನ್ನು ಮಾತನಾಡದಂತೆ ತಡೆಯುತ್ತಿದ್ದಾರೆ ಎಂದು ನಾನು ಹೇಳಬಹುದೇ? ಎಂದು ಖರ್ಗೆ ಕೇಳಿದ್ದಾರೆ.
मोदी जी और अमित शाह जी ने देश के लोकतंत्र और संविधान को खत्म करने का बीड़ा उठाया है।
ये लोग दलितों, आदिवासियों, मजदूरों, महिलाओं और किसानों को कुचलने का काम कर रहे हैं।
इसलिए हमने देश को बचाने के लिए INDIA गठबंधन बनाया है।
उच्च संवैधानिक पद पर बैठे लोग कहते हैं कि ‘मैं इस… pic.twitter.com/ELHOF688Dz
— Mallikarjun Kharge (@kharge) December 22, 2023
ಸಂಸದರ ಅಮಾನತಿನ ವಿರುದ್ಧ ವಿಪಕ್ಷ ಪ್ರತಿಭಟಿಸುತ್ತಿರುವಾಗ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿಯನ್ನು ಅನುಕರಣೆ ಮಾಡಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಧನ್ಖರ್ ತಾನು ಜಾಟ್, ಸಮುದಾಯದವನು. ವಿಪಕ್ಷದವರು ನನ್ನ ಜಾತಿ ಮತ್ತು ರೈತರ ಕುಟುಂಬದಿಂದ ಬಂದಿರುವ ನನ್ನನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದರು.
“ನಮ್ಮ ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ, ನಾವು ನೋಟಿಸ್ ನೀಡಿದಾಗ (ಸಂಸತ್‌ನಲ್ಲಿ) ನೋಟಿಸ್ ಓದಲು ನಮಗೆ ಅವಕಾಶ ನೀಡುವುದಿಲ್ಲ, ಬಿಜೆಪಿ ಸರ್ಕಾರ ದಲಿತರನ್ನು ಮಾತನಾಡಲು ಬಿಡುತ್ತಿಲ್ಲ ಎಂದು ನಾನು ಹೇಳಬೇಕೇ? ನಿಮಗೆ ಸಾಧ್ಯವಿಲ್ಲ. ಮಾತನಾಡುವ ನಮ್ಮ ಹಕ್ಕನ್ನು ಕಸಿದುಕೊಳ್ಳಿ. ಈ ಸ್ವಾತಂತ್ರ್ಯವನ್ನು ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರು ನಮಗೆ ನೀಡಿದರು. ನೀವು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿ ಮತ್ತು ಅವಿರೋಧವಾಗಿ ಕಾನೂನುಗಳನ್ನು ಜಾರಿಗೊಳಿಸಿ ನಾವು ಒಟ್ಟಾಗಿ ಹೋರಾಡಬೇಕು, ”ಎಂದು ಖರ್ಗೆ ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಡಪಕ್ಷಗಳು, ಡಿಎಂಕೆ, ಎನ್‌ಸಿಪಿ, ಎಸ್‌ಪಿ, ಎನ್‌ಸಿ, ಟಿಎಂಸಿ, ಜೆಎಂಎಂ, ಆರ್‌ಜೆಡಿ ಮತ್ತು ವಿರೋಧ ಪಕ್ಷದ ಒಕ್ಕೂಟದ ಇತರ ಸದಸ್ಯರು ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಇಂಡಿಯಾ ಬಣದಲ್ಲಿನ ಪಕ್ಷಗಳ ನಾಯಕರು ಒಗ್ಗೂಡಿದ್ದಾರೆ ಎಂದಿದ್ದಾರೆ.
ಎಲ್ಲರೂ ಒಗ್ಗೂಡಿದಾಗ ನರೇಂದ್ರ ಮೋದಿಯವರಿಗೆ ಏನೂ ಮಾಡಲು ಆಗುವುದಿಲ್ಲ .ನೀವು ನಮ್ಮನ್ನು ತುಳಿಯಲು ಯತ್ನಿಸಿದಷ್ಟೂ ನಾವು ಮೇಲಕ್ಕೇರುತ್ತೇವೆ, ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ಪ್ರತಿಯೊಂದು ವಿಚಾರದಲ್ಲೂ ಜಾತಿ ಎಳೆದು ಜನರನ್ನು ಕೆರಳಿಸಬಾರದು: ಮಲ್ಲಿಕಾರ್ಜುನ ಖರ್ಗೆ
ಡಿಸೆಂಬರ್ 13 ರ ಸಂಸತ್ತಿನ ಭದ್ರತಾ ವೈಫಲ್ಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರವನ್ನು ಕೋರಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರನ್ನು ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
“ಬಿಜೆಪಿ ಎಷ್ಟು ದ್ವೇಷವನ್ನು ಹರಡುತ್ತದೆಯೋ, ಹೆಚ್ಚು ಪ್ರೀತಿ ಮತ್ತು ಸಹೋದರತ್ವವನ್ನು ಇಂಡಿಯಾ ಪಕ್ಷಗಳು ಹರಡುತ್ತವೆ” ಎಂದು ಗಾಂಧಿ ಹೇಳಿದರು.
ಸಂಸತ್ತಿನಿಂದ 150 ಸಂಸದರನ್ನು ಹೊರಗಿಡುವ ಮೂಲಕ ಸರ್ಕಾರವು 60 ಪ್ರತಿಶತ ಭಾರತೀಯರ ಧ್ವನಿಯನ್ನು ಮುಚ್ಚಿದೆ ಎಂದು ಅವರು ಹೇಳಿದರು.
ಎನ್‌ಸಿಪಿ ನಾಯಕ ಶರದ್ ಪವಾರ್, ಸಿಪಿಐ-ಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ, ಜೆಎಂಎಂನ ಮಹುವಾ ಮಜಿ, ಡಿಎಂಕೆಯ ತಿರುಚಿ ಶಿವ, ಆರ್‌ಜೆಡಿಯ ಮನೋಜ್ ಕುಮಾರ್ ಝಾ, ಟಿಎಂಸಿಯ ಮೌಸಮ್ ನೂರ್, ಎನ್‌ಸಿಯ ಹಸನೈನ್ ಮಸೂದಿ, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಎನ್‌ಕೆ ಪ್ರೇಮಚಂದ್ರನ್ ಮತ್ತು ಸಮಾಜವಾದಿ ಪಕ್ಷದ ಎಸ್‌ಟಿ ಹಸನ್ ಮೊದಲಾದವರು ಭಾಗಿಯಾಗಿದ್ದರು.
ಏತನ್ಮಧ್ಯೆ, ಕಾಂಗ್ರೆಸ್ ಸಂಸದ ಶಶಿ ತರೂರ್, ಜಂತರ್ ಮಂತರ್‌ನಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಬ್ಯಾನರ್ ಅಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯು ‘ದೇಶದ ಭವಿಷ್ಯಕ್ಕೆ ಅಪಾಯ ಬಂದಿದೆ ಎಂಬ ಎಂಬ ಸಂದೇಶವನ್ನು ಜನರಿಗೆ ರವಾನಿಸುತ್ತಿದೆ ಎಂದು ಹೇಳಿದರು.
“ವಿಶ್ವದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 146 ಸಂಸದರನ್ನು ಅಮಾನತು ಮಾಡಿಲ್ಲ.ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ಜನರು ಅರಿಯಬೇಕು. ದೇಶದ ಭವಿಷ್ಯಕ್ಕಾಗಿ ಏನಾಗುತ್ತಿದೆಯೋ ಅದು ತಪ್ಪು ಎಂದು ಜನರಿಗೆ ತಿಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಇದಕ್ಕಿರುವ ಒಂದೇ ಒಂದು ಪರಿಹಾರವೆಂದರೆ ಜನರು ಈ ಸರ್ಕಾರವನ್ನು ಬದಲಾಯಿಸಬೇಕು ಮತ್ತು ಇಂಡಿಯಾ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು ಎಂದು ಎಎನ್ಐ ಜತೆ ಮಾತನಾಡಿದ ತರೂರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Fri, 22 December 23