ಕಾಂಗ್ರೆಸ್ ಕೇಂದ್ರ ಸರ್ಕಾರದ ಜತೆ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲಿದೆ: ಸೋನಿಯಾ ಗಾಂಧಿ

|

Updated on: May 01, 2021 | 8:42 PM

ಕೊವಿಡ್ ಪಿಡುಗು ನಿಲ್ಲುವವರೆಗೂ ವಲಸೆ ಕಾರ್ಮಿಕ ಖಾತೆಗೆ ತಲಾ ಆರು ಸಾವಿರ ಮೊತ್ತವನ್ನು ಪರಿಹಾರ ರೂಪದಲ್ಲಿ ಸರ್ಕಾರ ಒದಗಿಸಬೇಕು ಎಂದು 74 ವರ್ಷದ ಅವರು ವಿಡಿಯೋ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಕೇಂದ್ರ ಸರ್ಕಾರದ ಜತೆ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲಿದೆ: ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಜವಾಬ್ಧಾರಿಯನ್ನು ಪೂರೈಸಬೇಕು. ಕೊವಿಡ್ ವಿರುದ್ಧ ಹೋರಾಡಲು ಸಹಭಾಗಿತ್ವದಲ್ಲಿ ರಾಷ್ಟ್ರಮಟ್ಟದ ಒಂದು ಯೋಜನೆ ರೂಪಿಸಬೇಕು ಎಂದು ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜತೆ ಸಮಾಲೋಚನೆ ನಡೆಸಿದ ಬಳಿಕ ಅವರ ವಿಡಿಯೋ ಸಂದೇಶವೊಂದನ್ನು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಕಾರ್ಮಿಕರ ವಲಸೆ ನಿಲ್ಲಬೇಕು. ಕೊವಿಡ್ ಪಿಡುಗು ನಿಲ್ಲುವವರೆಗೂ ವಲಸೆ ಕಾರ್ಮಿಕ ಖಾತೆಗೆ ತಲಾ ಆರು ಸಾವಿರ ಮೊತ್ತವನ್ನು ಪರಿಹಾರ ರೂಪದಲ್ಲಿ ಸರ್ಕಾರ ಒದಗಿಸಬೇಕು ಎಂದು 74 ವರ್ಷದ ಅವರು ವಿಡಿಯೋ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ಕಿತ್ತಾಡುವ ಸಮಯವಲ್ಲ. ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಿ ಅಗತ್ಯ ಸೌಲಭ್ಯವನ್ನು ತುರ್ತಾಗಿ ಒದಗಿಸುವ ಸಮಯ. ಈ ಅಪಾಯದ ಸನ್ನಿವೇಶದಿಂದ ದೇಶವನ್ನು ಕಾಪಾಡಲು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸಹಕಾರ ನೀಡಲಿದೆ. ಕೊರೊನಾ ಚಿಕಿತ್ಸೆ ನೀಡಲು ಶ್ರಮಿಸುತ್ತಿರುವ ವೈದ್ಯ ಸಿಬ್ಬಂದಿಗೆ ನನ್ನ ನಮನಗಳನ್ನು ತಿಳಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ.

ದೇಶದಾದ್ಯಂತ ಕೊವಿಡ್ ಪರೀಕ್ಷೆಯ ಪ್ರಮಾಣವನ್ನು ತೀವ್ರವಾಗಿ ಹೆಚ್ಚಿಸಬೇಕು. ಕೊವಿಡ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕು. ಮೆಡಿಕಲ್ ಆಕ್ಸಿಜನ್ ಮತ್ತು ಇತರ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ಯುದ್ಧೋಪಾದಿಯಲ್ಲಿ ಒದಗಿಸಬೇಕು. ಜೀವ ಉಳಿಸುವಂತಹ ಔಷಧಗಳನ್ನು ಕಾಳಸಂತೆಯಲ್ಲಿ ಮಾರುವುದನ್ನು ತಡೆಗಟ್ಟಬೇಕು ಎಂದು ಅವರು ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 40,990 ಮಂದಿಗೆ ಕೊರೊನಾ ಸೋಂಕು, 271 ಸಾವು

Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

(Congress will support the centre in covid battle says Sonia Gandhi)

Published On - 8:41 pm, Sat, 1 May 21