AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರ‍್ಯಾಲಿಯಲ್ಲಿ ಎಲ್ಲರ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತೆಯ ಮೈಮುಟ್ಟಲು ಯತ್ನ?: ಕಠಿಣ ಕ್ರಮಕ್ಕೆ ಸಂಸದೆ ಕುಮಾರಿ ಸೆಲ್ಜಾ ಒತ್ತಾಯ

ಸಂತ್ರಸ್ತೆ ಸೋನಿಯಾ ದುಹಾನ್ ಅವರು ನನ್ನ ಜತೆ ಮಾತನಾಡಿ ಅವರಿಗಾದ ಅನುಭವ ವಿವರಿಸಿದ್ದಾರೆ ಎಂದು ಸಂಸದೆ ಕುಮಾರಿ ಸೆಲ್ಜಾ ಹೇಳಿದ್ದಾರೆ. ಜನರು ಆಕೆಯನ್ನು ಮುಟ್ಟಿ ಮೊಣಕೈಯಿಂದ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಆಮೇಲೆ ವೇದಿಕೆಯಿಂದ ಹೊರಹಾಕಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ

ರ‍್ಯಾಲಿಯಲ್ಲಿ ಎಲ್ಲರ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತೆಯ ಮೈಮುಟ್ಟಲು ಯತ್ನ?: ಕಠಿಣ ಕ್ರಮಕ್ಕೆ ಸಂಸದೆ ಕುಮಾರಿ ಸೆಲ್ಜಾ ಒತ್ತಾಯ
ಕುಮಾರಿ ಸೆಲ್ಜಾ
ರಶ್ಮಿ ಕಲ್ಲಕಟ್ಟ
|

Updated on: Oct 05, 2024 | 7:09 PM

Share

ದೆಹಲಿ ಅಕ್ಟೋಬರ್ 4: ಶುಕ್ರವಾರದಂದು ಹರ್ಯಾಣದ ನಾರ್ನಾಂಡ್‌ನಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ನಾಯಕಿಯೊಬ್ಬರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರು ದೌರ್ಜನ್ಯವನ್ನು ದೃಢಪಡಿಸಿದ್ದು, ಸಂತ್ರಸ್ತೆಯ ಜೊತೆ ನೇರವಾಗಿ ಮಾತನಾಡಿರುವುದಾಗಿ ಎಂದು ಹೇಳಿದ್ದಾರೆ. “ನಾನು ಅವಳೊಂದಿಗೆ ಮಾತನಾಡಿದ್ದೇನೆ. ಇಂದು ಅಂತಹ ಘಟನೆ ಸಂಭವಿಸಿದರೆ, ಹೆಚ್ಚು ಭಯಾನಕ ಮತ್ತು ಖಂಡನೀಯವಾದದ್ದು ಯಾವುದು?” ಸೆಲ್ಜಾ ಕೇಳಿದ್ದಾರೆ.

ಸಂತ್ರಸ್ತೆ ಸೋನಿಯಾ ದುಹಾನ್ ಅವರು ನನ್ನ ಜತೆ ಮಾತನಾಡಿ ಅವರಿಗಾದ ಅನುಭವ ವಿವರಿಸಿದ್ದಾರೆ ಎಂದು ಸಂಸದೆ ಕುಮಾರಿ ಸೆಲ್ಜಾ ಹೇಳಿದ್ದಾರೆ. ಜನರು ಆಕೆಯನ್ನು ಮುಟ್ಟಿ ಮೊಣಕೈಯಿಂದ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಆಮೇಲೆ ವೇದಿಕೆಯಿಂದ ಹೊರಹಾಕಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಸೆಲ್ಜಾ ಕೂಡ ಘಟನೆಯ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆ ಖಂಡನೀಯ ಎಂದ ಅವರು, ಇದಕ್ಕೆ ಕಾರಣರಾದವರನ್ನು ಬಹಿಷ್ಕರಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು.

ಏತನ್ಮಧ್ಯೆ, ಸೋನಿಯಾ ದುಹಾನ್ ಅವರಿಗಾದ ಕಿರುಕುಳವನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕ್ಲಿಪ್ ಅನ್ನು ಹಂಚಿಕೊಂಡಿದ್ದು “ಕಾಂಗ್ರೆಸ್ ನಾಯಕಿಯೊಬ್ಬರು ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರ ಮುಂದೆ ಕಿರುಕುಳಕ್ಕೊಳಗಾದರು, ಆದರೂ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಘಟನೆಯು ಕಾಂಗ್ರೆಸ್ ವಿರುದ್ಧ ರೈತ ಗುಂಪುಗಳಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.

ಸೋನಿಯಾ ದುಹಾನ್ ಯಾರು?

ಕೇವಲ 21 ನೇ ವಯಸ್ಸಿನಲ್ಲಿ, ಸೋನಿಯಾ ದುಹಾನ್ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 1992 ರಲ್ಲಿ ಹರ್ಯಾಣದ ಹಿಸಾರ್‌ನಲ್ಲಿ ಜನಿಸಿದ ಅವರು ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ, ಅವರು ಪೈಲಟ್ ತರಬೇತಿಗಾಗಿ ಪುಣೆಗೆ ತೆರಳಿದರು, ಅಲ್ಲಿ ಅವರು NCP ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು. ಈ ಮುಖಾಮುಖಿಯು ಅವಳನ್ನು ರಾಜಕೀಯಕ್ಕೆ ಪ್ರವೇಶಿಸಲು ಪ್ರೇರೇಪಿಸಿತು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (NCP) ಸೇರಲು ಕಾರಣವಾಯಿತು, ಅಲ್ಲಿ ಆಕೆ ಅದರ ವಿದ್ಯಾರ್ಥಿ ವಿಭಾಗದಲ್ಲಿ ಸಕ್ರಿಯರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ