ದೆಹಲಿ: ಪ್ರಸ್ತುತ ರಾಜಕೀಯ ಪರಿಸ್ಥಿತಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಮುಂದಿನ ವರ್ಷ ನಡೆಯಲಿರುವ ರಾಜ್ಯ ಚುನಾವಣೆಗಳ ಬಗ್ಗೆ ಮಾತುಕತೆ ನಡೆಸುವ ಸಲುವಾಗಿ ಅಕ್ಟೋಬರ್ 16 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಇಂದು (ಅಕ್ಟೋಬರ್ 9) ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆಯು ಅಕ್ಟೋಬರ್ 16, ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪಕ್ಷದ ಮುಖ್ಯ ಕಚೇರಿ ದೆಹಲಿಯಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಿಕೆ ಬಿಡುಗಡೆಗೊಳಿಸಲಾಗಿದೆ. ದೇಶದ ರಾಜಕೀಯ ಪರಿಸ್ಥಿತಿ, ಮುಂಬರುವ ಚುನಾವಣೆ, ಇತ್ಯಾದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಲಾಗಿದೆ.
A meeting of the @INCIndia Working Committee will be held on Saturday, the 16th October, 2021 at 10.00 a.m. at AICC Office, 24, Akbar Road, New Delhi to discuss current political situation, forthcoming assembly elections & Organisational elections.
— K C Venugopal (@kcvenugopalmp) October 9, 2021
ಕಾಂಗ್ರೆಸ್ ಈ ವೇಳೆ, ಪಂಜಾಬ್ನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕೂಡ ಚರ್ಚಿಸುವ ಹಾಗೂ ಜಿ 23 ನಾಯಕರ ಪ್ರಶ್ನೆಗಳಿಗೆ ಉತ್ತರಿಸುವ ನಿರೀಕ್ಷೆ ಇದೆ. ಕಳೆದ 18 ತಿಂಗಳ ಅವಧಿಯಲ್ಲಿ ನಡೆದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ವರ್ಚುವಲ್ ವಿಧಾನದಲ್ಲಿ ನಡೆದಿತ್ತು. ಈ ಬಾರಿ ದೆಹಲಿ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯಲಿರುವ ಬಗ್ಗೆ ತಿಳಿಸಲಾಗಿದೆ. ಸಭೆಯಲ್ಲಿ ರೈತರ ಹೋರಾಟ, ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಕೇರಿಯಲ್ಲಿ ನಡೆದ ಘಟನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಳೆದ ತಿಂಗಳು, ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಸುವಂತೆ ತಿಳಿಸಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಪಂಜಾಬ್ ಹಾಗೂ ಗೋವಾ ಕಾಂಗ್ರೆಸ್ನ ರಾಜಕೀಯ ಸ್ಥಿತಿಗತಿ ಮತ್ತು ಪಕ್ಷದ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡುವಂತೆ ತಿಳಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸಾಯುವ ಹಂತದಲ್ಲಿದೆ ಎಂದಿರುವ ನವಜೋತ್ ಸಿಧು ಹೈಕಮಾಂಡ್ಗೆ ಮತ್ತೆ ತಲೆನೋವಾಗಿದ್ದಾರೆ!
ಇದನ್ನೂ ಓದಿ: ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ?
Published On - 3:28 pm, Sat, 9 October 21