ಅಸ್ಸಾಂನಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾದ ನಂತ ಕಾಂಗ್ರೆಸ್ (Congress) ನಾಯಕ ಜಿಗ್ನೇಶ್ ಮೇವಾನಿ (Jignesh Mevani) ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇದು ನನ್ನನ್ನು ನಾಶಮಾಡಲು ಪೂರ್ವ ಯೋಜಿತ ಸಂಚು. “ಅವರು ನನ್ನನ್ನು ಕರೆದೊಯ್ದರು. ಆದರೆ ನನಗೆ ಪ್ರಕರಣದ ವಿವರಗಳನ್ನು ನೀಡಲಿಲ್ಲ. ನಾನು ವಕೀಲ ಮತ್ತು ಶಾಸಕ. ಅವರು ನನ್ನ ವಿರುದ್ಧ ಬಳಸಲಾದ ಸೆಕ್ಷನ್‌ಗಳನ್ನು ಅವರು ನನಗೆ ಹೇಳಲಿಲ್ಲ ಮತ್ತು ನನ್ನ ಹೆತ್ತವರೊಂದಿಗೆ ಮಾತನಾಡಲು ಬಿಡಲಿಲ್ಲ. ನನ್ನ ವಕೀಲರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಶಾಸಕರ ಪ್ರೋಟೋಕಾಲ್ ಅನ್ನು ನಿರ್ಲಕ್ಷಿಸಲಾಯಿತು. ಈ ಬಗ್ಗೆ ಗುಜರಾತ್ ವಿಧಾನಸಭಾ ಸ್ಪೀಕರ್ ಅವರಿಗೂ ಹೇಳಿಲ್ಲ. ಅಸ್ಸಾಂನಲ್ಲಿದ್ದಾಗಲೇ (Assam) ಈ ವಿಷಯ ತಿಳಿಯಿತು. ನಂತರ, ಅವರು ಮತ್ತೊಂದು ಪ್ರಕರಣ ಮಹಿಳೆಗೆ ಸಂಬಂಧಪಟ್ಟದ್ದು. ಇದು 56 ಇಂಚಿನ ಭಯ. 2,500 ಕಿಮೀ ದೂರದಲ್ಲಿರುವ ಶಾಸಕರೊಬ್ಬರ ಮೇಲೆ ಮಹಿಳೆಗೆ ಸಂಬಂಧಿಸಿ ಸುಳ್ಳು ಪ್ರಕರಣ ದಾಖಲಿಸುವುದು ಹೇಗೆ? ಎಂದು ಮೇವಾನಿ ಪ್ರಶ್ನಿಸಿದ್ದಾರೆ. 56 ಇಂಚು ಎದೆ ಎಂದು ಹೇಳುವ ಮೂಲಕ ಶಾಸಕ ಮೇವಾನಿ ಪ್ರಧಾನಿ ಮೋದಿ ಅವರನ್ನು ಕುಟುಕಿದ್ದಾರೆ. “ನನ್ನ ಬಂಧನದ ಹಿಂದೆ ಪಿಎಂಒದಲ್ಲಿ ಕುಳಿತಿರುವ ಕೆಲವು ಗೋಡ್ಸೆ ಭಕ್ತರು ಇದ್ದಾರೆ” ಎಂದು ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇವಾನಿ ಹೇಳಿದ್ದಾರೆ.
ತನಗೆ ಜಾಮೀನು ನೀಡಿದ ಅಸ್ಸಾಂ ನ್ಯಾಯಾಲಯವನ್ನು ಉಲ್ಲೇಖಿಸಿದ ಮೇವಾನಿ “ಎರಡನೇ ಪ್ರಕರಣದಲ್ಲಿ ತ್ವರಿತ ಎಫ್‌ಐಆರ್ ತಯಾರಿಸಲಾಗಿದೆ ಎಂದು ತೋರುತ್ತದೆ. ಈ ಎಫ್‌ಐಆರ್ ನಿರ್ವಹಿಸುವಂತಿಲ್ಲ. ಯಾವುದೇ ವ್ಯಕ್ತಿ ಎಂದಿಗೂ ಇತರ ಪುರುಷ ಅಧಿಕಾರಿಗಳು ಇರುವಾಗ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾರ. ನನ್ನನ್ನು ಹೆಚ್ಚು ಕಾಲ ಕಸ್ಟಡಿಯಲ್ಲಿಡಲು ಪ್ರಕರಣವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ ಮೇವಾನಿ.
LIVE: Media Briefing by Shri @jigneshmevani80 at the AICC HQ. https://t.co/zP8KpL8gbx
— Congress (@INCIndia) May 2, 2022
ಇದನ್ನು “ಪ್ರಧಾನಿ ಕಚೇರಿಯಲ್ಲಿ ರೂಪಿಸಲಾದ ಪಿತೂರಿ” ಎಂದು ಕರೆದ ಅವರು, “ಗುಜರಾತ್ ಚುನಾವಣೆಗೆ ಸಜ್ಜಾಗುತ್ತಿದೆ. ಅದಕ್ಕಾಗಿಯೇ ಇದನ್ನು ಮಾಡಲಾಗಿದೆ” ಎಂದು ಅವರು ಹೇಳಿದರು.
ಇತರ ಗಂಭೀರ ಸಮಸ್ಯೆಗಳ ನಡುವೆ ಒಂದು ಟ್ವೀಟ್‌ಗಾಗಿ ನನ್ನ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದು ಅವರ ಉದ್ದೇಶ ಮತ್ತು ಆದ್ಯತೆಯನ್ನು ತೋರಿಸುತ್ತದೆ. ಧರ್ಮ ಸಂಸದ್‌ನಲ್ಲಿ ನರಮೇಧಕ್ಕೆ ಕರೆ, ಮುಂದ್ರಾ ಬಂದರಿನಲ್ಲಿ ₹ 1,75,000 ಕೋಟಿ ಮೌಲ್ಯದ ಮಾದಕವಸ್ತು ಪತ್ತೆ ಸೇರಿದಂತೆ ಮತ್ತು ಇತರ ಗಂಭೀರ ಪ್ರಕರಣಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ವಡ್ಗಾಮ್‌ನಲ್ಲಿ ಮತ್ತು ಉನಾ ಚಳವಳಿಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೇಂದ್ರ ಹಿಂಪಡೆಯಬೇಕು “ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾಂಗ್ರೆಸ್ ಪಕ್ಷದ ಗುಜರಾತ್ ಘಟಕವು ಜೂನ್ 1 ರಂದು ಗುಜರಾತ್ ಬಂದ್ ನಡೆಸಲಿದೆ” ಎಂದು ಅವರು ಹೇಳಿದರು.
ಕಳೆದ ವಾರ ಸ್ಥಳೀಯ ನ್ಯಾಯಾಲಯವು ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿತ್ತು. ಏಪ್ರಿಲ್ 20 ರಂದು ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ಗಳಿಗಾಗಿ ಅವರನ್ನು ಬಂಧಿಸಲಾಯಿತು. ಇದಾದ ನಂತರ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಏಪ್ರಿಲ್ 25 ರಂದು ಮತ್ತೆ ಬಂಧಿಸಲಾಯಿತು.
ಜಿಲ್ಲಾ ನ್ಯಾಯಾಲಯವು ರಾಜ್ಯ ಪೊಲೀಸ್ ಪಡೆಗೆ “ಸ್ವತಃ ಸುಧಾರಿಸಿಕೊಳ್ಳುವಂತೆ” ನಿರ್ದೇಶಿಸುವಂತೆ ಗೌಹಾಟಿ ಉಚ್ಚ ನ್ಯಾಯಾಲಯವನ್ನು ಒತ್ತಾಯಿಸಿತು. ಒಂದು ದಿನದ ನಂತರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಲು ಮಹಿಳಾ ಪೊಲೀಸ್ ಅಧಿಕಾರಿ ತನಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Mon, 2 May 22