Video: ಜರ್ಮನಿಯಲ್ಲಿ ಬಾಲಕನ ಹಾಡು ಕೇಳಿ ಫುಲ್ ಖುಷಿಯಾದ ಪ್ರಧಾನಿ ಮೋದಿ
ಇಂದು ಸಂಜೆ ಏಳುಗಂಟೆ ಹೊತ್ತಿಗೆ ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಸೇರಿ, ಭಾರತ-ಜರ್ಮನಿ ಆಂತರಿಕ ಸಚಿವಾಲಯದ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜರ್ಮನಿಗೆ ತೆರಳಿದ್ದಾರೆ. ಅವರು ಯುರೋಪ್ನ ಮೂರು ದೇಶಗಳ ಪ್ರವಾಸಕ್ಕೆ ತೆರಳಿದ್ದು, ಇಂದು ಬರ್ಲಿನ್ನಲ್ಲಿ ಲ್ಯಾಂಡ್ ಆಗಿದ್ದಾರೆ. ಅದಾದ ಮೇಲೆ ಡೆನ್ಮಾರ್ಕ್ ಮತ್ತು ಫ್ರಾನ್ಸ್ಗೆ ಭೇಟಿ ನೀಡಿ, ಭಾರತಕ್ಕೆ ವಾಪಸ್ ಬರಲಿದ್ದಾರೆ. ಈ ಮೂರು ದೇಶಗಳೊಂದಿಗೆ ವ್ಯಾಪಾರ, ಇಂಧನ ಮತ್ತು ಹಸಿರು ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಬರ್ಲಿನ್ನ ಬ್ರ್ಯಾಂಡನ್ಬರ್ಗ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿ ಅಲ್ಲಿಂದ ಹೊಟೆಲ್ ಹೊಡ್ಲೆನ್ ಕೆಂಪಿನ್ಸ್ಕಿಗೆ ತೆರಳಿದರು. ಈ ವೇಳೆ ಅಲ್ಲಿ ಕೆಲವು ಭಾರತೀಯ ಮೂಲದವರು ಪ್ರಧಾನಿ ಮೋದಿಗಾಗಿ ಕಾಯುತ್ತಿದ್ದರು. ನರೇಂದ್ರ ಮೋದಿ ಹೋಟೆಲ್ ತಲುಪುತ್ತಿದ್ದಂತೆ ಭಾರತೀಯ ಮೂಲದವರು ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗಿದ್ದಾರೆ. ಕೆಲವರು ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ.
#WATCH PM Narendra Modi in all praises for a young Indian-origin boy as he sings a patriotic song on his arrival in Berlin, Germany pic.twitter.com/uNHNM8KEKm
— ANI (@ANI) May 2, 2022
#WATCH Indian diaspora extends a warm welcome to PM Modi in Berlin, Germany
(Source:DD) pic.twitter.com/H0yX5LWut4
— ANI (@ANI) May 2, 2022
It was early morning in Berlin yet several people from the Indian community came by. Was wonderful connecting with them. India is proud of the accomplishments of our diaspora. pic.twitter.com/RfCyCqJkPY
— Narendra Modi (@narendramodi) May 2, 2022
ಅಲ್ಲಿದ್ದ ಮಕ್ಕಳೊಂದಿಗೆ ಕೂಡ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಪುಟ್ಟ ಹುಡುಗಿಯ ತಲೆ ಮುಟ್ಟಿ ಮಾತನಾಡಿಸಿದ್ದಾರೆ. ಹಾಗೇ ಇನ್ನೊಬ್ಬ ಬಾಲಕಿ ಪ್ರಧಾನಿಗೆ ಏನನ್ನೋ ತೋರಿಸಿದ್ದನ್ನೂ ವಿಡಿಯೋದಲ್ಲಿ ನೋಡಬಹುದು. ಬಾಲಕನೊಬ್ಬ ಪ್ರಧಾನಿಯವರ ಎದುರು ನಿಂತು ದೇಶ ಭಕ್ತಿಯ ಹಾಡನ್ನು ಹಾಡಿ ಶಹಭಾಷ್ ಎನ್ನಿಸಿಕೊಂಡಿದ್ದಾನೆ. ಪುಟ್ಟ ಹುಡುಗ ಹಾಡು ಹಾಡುವುದನ್ನು ಚಿಟಿಕೆ ಹೊಡೆಯುತ್ತ ಕೇಳಿದ ಪ್ರಧಾನಿ, ಹಾಡು ಮುಗಿಯುತ್ತಿದ್ದಂತೆ ತುಂಬ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕನ ಕೆನ್ನೆ ಹಿಡಿದು ಮುದ್ದು ಮಾಡಿದ್ದಾರೆ. ಈ ವಿಡಿಯೋವನ್ನು ನರೇಂದ್ರ ಮೋದಿಯವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.
ಇಂದು ಸಂಜೆ ಏಳುಗಂಟೆ ಹೊತ್ತಿಗೆ ಬರ್ಲಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಸೇರಿ, ಭಾರತ-ಜರ್ಮನಿ ಆಂತರಿಕ ಸಚಿವಾಲಯದ ಸಮಾಲೋಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ರಾತ್ರಿ 8ಗಂಟೆ ನಂತರ ಪ್ರಧಾನಿ ನರೇಂದ್ರ ಮೋದಿ ಬರ್ಲಿನ್ನಲ್ಲಿರುವ ಭಾರತೀಯರೊಂದಿಗೆ ಸಂವಾದ ನಡೆಸುವರು. ಅಂದಹಾಗೇ, ಇದು ಪ್ರಧಾನಿ ನರೇಂದ್ರ ಮೋದಿಯವರ 2022ನೇ ವರ್ಷದ ಮೊದಲ ವಿದೇಶ ಪ್ರವಾಸವಾಗಿದೆ. ಜರ್ಮನಿಯಿಂದ ನಾಳೆ (ಮೇ 3) ಡೆನ್ಮಾರ್ಕ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಮಹೇಶ್ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್ ಗರಂ
Published On - 1:28 pm, Mon, 2 May 22




