Video: ಗಾಳಿಗೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನ ಅಲುಗಾಡಿದ ಭಯಾನಕ ದೃಶ್ಯ; ಚೆಲ್ಲಾಪಿಲ್ಲಿಯಾದ ವಸ್ತುಗಳು, ಪ್ರಯಾಣಿಕರು ಕಂಗಾಲು

ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್​ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ತಲೆಗೆ ಗಂಭೀರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿದೆ.

Video: ಗಾಳಿಗೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನ ಅಲುಗಾಡಿದ ಭಯಾನಕ ದೃಶ್ಯ; ಚೆಲ್ಲಾಪಿಲ್ಲಿಯಾದ ವಸ್ತುಗಳು, ಪ್ರಯಾಣಿಕರು ಕಂಗಾಲು
ಸ್ಪೈಸ್​ಜೆಟ್​​ನ ಚಿತ್ರಣ
Follow us
TV9 Web
| Updated By: Lakshmi Hegde

Updated on:May 02, 2022 | 12:20 PM

ಮುಂಬೈನಿಂದ, ಪಶ್ಚಿಮಬಂಗಾಳದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್​ ಜೆಟ್​ ವಿಮಾನ ಭಾನುವಾರ ಸಂಜೆ ಬಹುದೊಡ್ಡ ದುರಂತದಿಂದ ಪಾರಾಗಿದೆ. ಪೈಲಟ್​​ಗಳ ಸಮಯಪ್ರಜ್ಞೆಯಿಂದ 188 ಮಂದಿಯ ಪ್ರಾಣ ಉಳಿದಿದೆ. ದುರ್ಗಾಪುರ ಏರ್​​​ಪೋರ್ಟ್​ನಲ್ಲಿ ಲ್ಯಾಂಡ್​ ಆಗುವಾಗ ಸುಂಟರಗಾಳಿಯ ಪ್ರಭಾವಕ್ಕೆ ಸಿಲುಕಿ ವಿಮಾನ ತೀವ್ರ ಕುಲುಕಾಟಕ್ಕೆ ಒಳಗಾಯಿತು. ಗಾಳಿಯಿಂದ ಸಿಕ್ಕಾಪಟೆ ಅಲುಗಾಡಿದ ವಿಮಾನದ ಒಳಗಿನ ದೃಶ್ಯದ ವಿಡಿಯೋ ವೈರಲ್ ಆಗಿದೆ. ವಿಮಾನದೊಳಗೆ ಇದ್ದ ಪ್ರಯಾಣಿಕರಿಗೆ ಸೇರಿದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕ್ಯಾಬಿನ್ ಬ್ಯಾಗೇಜ್​ ಪ್ರಯಾಣಿಕರ ಮೇಲೆ ಕುಸಿದಿದೆ. ಆಕ್ಸಿಜನ್​ ಮಾಸ್ಕ್​ಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್​ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ತಲೆಗೆ ಗಂಭೀರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕನಿಗೆ ಬೆನ್ನುಮೂಳೆಗೆ ಹೊಡೆತ ಬಿದ್ದಿದೆ​ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ. ಹಾಗೇ, ಗಾಯಗೊಂಡ ಎಲ್ಲರಿಗೂ ದುರ್ಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪೈಸ್​ಜೆಟ್​ ವಕ್ತಾರ ಮಾಹಿತಿ ನೀಡಿದ್ದಾರೆ. ಇನ್ನು ತಲೆಗೆ ಬ್ಯಾಂಡೇಜ್​​ ಹಾಕಿದ್ದ ವ್ಯಕ್ತಿಯೊಬ್ಬ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾರು ಅಪಘಾತವಾಗುವ ಸಂದರ್ಭದಲ್ಲಿ ಯಾವ ಸನ್ನಿವೇಶ ಇರುತ್ತದೆಯೋ, ಅದರ ಎರಡು ಪಟ್ಟು ಭೀಕರ ಸನ್ನಿವೇಶ ವಿಮಾನದಲ್ಲಿ ಇತ್ತು ಎಂದಿದ್ದಾರೆ.

ಸ್ಪೈಸ್​ಜೆಟ್​​ನ ಬೋಯಿಂಗ್​ ಬಿ737 ನ SG-945 ವಿಮಾನ ಮೇ 1ರಂದು ಮುಂಬೈನಿಂದ ದುರ್ಗಾಪುರಕ್ಕೆ ಹೋಗುತ್ತಿತ್ತು.  ದುರ್ಗಾಪುರದಲ್ಲಿ ಲ್ಯಾಂಡ್ ಆಗುವ ಹೊತ್ತಿಗೆ ಗಾಳಿಯಿಂದಾಗಿ ವಿಮಾನ ಅಲುಗಾಡಲು ಶುರುವಾಯಿತು. ಈ ಘಟನೆಯಲ್ಲಿ ಸುಮಾರು 12 ಪ್ರಯಾಣಿಕರಿಗೆ ಗಾಯವಾಗಿದೆ. ಗಗನಸಖಿಯರು ಸಮಾಧಾನ ಹೇಳುತ್ತಿದ್ದರೂ, ಜನರು ತೀವ್ರ ಭಯಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?

Published On - 12:13 pm, Mon, 2 May 22

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ