RR vs MI Highlights, IPL 2022: ರೋಹಿತ್ ಶರ್ಮಾಗೆ ಗೆಲುವಿನ ಗಿಫ್ಟ್; ಕೊನೆಗೂ ಗೆದ್ದ ಮುಂಬೈ..!

TV9 Web
| Updated By: ಪೃಥ್ವಿಶಂಕರ

Updated on:Apr 30, 2022 | 11:41 PM

RR vs MI, IPL 2022: ಮುಂಬೈ ಇಂಡಿಯನ್ಸ್ ಅಂತಿಮವಾಗಿ ಐಪಿಎಲ್ 2022 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಮುಂಬೈ ಇಂಡಿಯನ್ಸ್ ತನ್ನ 9 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಋತುವಿನ ಮೊದಲ ಜಯವನ್ನು ಖಚಿತಪಡಿಸಿಕೊಂಡಿತು.

RR vs MI Highlights, IPL 2022: ರೋಹಿತ್ ಶರ್ಮಾಗೆ ಗೆಲುವಿನ ಗಿಫ್ಟ್; ಕೊನೆಗೂ ಗೆದ್ದ ಮುಂಬೈ..!

ಮುಂಬೈ ಇಂಡಿಯನ್ಸ್ ಅಂತಿಮವಾಗಿ ಐಪಿಎಲ್ 2022 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಮುಂಬೈ ಇಂಡಿಯನ್ಸ್ ತನ್ನ 9 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಋತುವಿನ ಮೊದಲ ಜಯವನ್ನು ಖಚಿತಪಡಿಸಿಕೊಂಡಿತು. ಸತತ 8 ಸೋಲಿನ ನಂತರ ಮುಂಬೈ ಇಂಡಿಯನ್ಸ್‌ಗೆ ಇದು ಮೊದಲ ಜಯವಾಗಿದೆ. ಅದೇ ಸಮಯದಲ್ಲಿ ರಾಜಸ್ಥಾನವು ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ತನ್ನ ಮೂರನೇ ಸೋಲನ್ನು ಅನುಭವಿಸಿತು. ಮುಂಬೈ ಇಂಡಿಯನ್ಸ್‌ನ ಈ ಗೆಲುವು ಈ ಋತುವಿನಲ್ಲಿ ಮೊದಲನೇಯಾಗಿರುವುದಕ್ಕೆ ವಿಶೇಷವಲ್ಲ, ಇದರ ಹೊರತಾಗಿ ಈ ಗೆಲುವಿನ ಅರ್ಥವು ನಾಯಕ ರೋಹಿತ್ ಶರ್ಮಾ ಅವರ ಜನ್ಮದಿನಕ್ಕೂ ಸಂಬಂಧಿಸಿದೆ. ತಮ್ಮ ಸೋಲಿನ ಸರಣಿಯನ್ನು ಹತೋಟಿಯಲ್ಲಿಟ್ಟುಕೊಂಡಿರುವ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರ 35 ನೇ ಹುಟ್ಟುಹಬ್ಬದಂದು ಗೆಲುವಿನ ಅದ್ಭುತ ಉಡುಗೊರೆಯನ್ನು ನೀಡಿದೆ.

LIVE NEWS & UPDATES

The liveblog has ended.
  • 30 Apr 2022 11:40 PM (IST)

    ಕೊನೆಗೂ ಗೆದ್ದ ಮುಂಬೈ

    ಮುಂಬೈ ಇಂಡಿಯನ್ಸ್ ಅಂತಿಮವಾಗಿ ಐಪಿಎಲ್ 2022 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಮುಂಬೈ ಇಂಡಿಯನ್ಸ್ ತನ್ನ 9 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಋತುವಿನ ಮೊದಲ ಜಯವನ್ನು ಖಚಿತಪಡಿಸಿಕೊಂಡಿತು.

  • 30 Apr 2022 11:39 PM (IST)

    ಮುಂಬೈ ಗೆಲುವಿಗೆ 5 ರನ್‌ ಬೇಕು

    ಮುಂಬೈ ಇಂಡಿಯನ್ಸ್ ತನ್ನ ಮೊದಲ ಗೆಲುವಿಗೆ ಕೇವಲ 5 ರನ್‌ಗಳ ಅಂತರದಲ್ಲಿದೆ. 19ನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಅವರ ಓವರ್‌ನಲ್ಲಿ ಪೊಲಾರ್ಡ್ ಮತ್ತು ಡೇವಿಡ್ ತಲಾ 2 ರನ್ ಗಳಿಸಿ ತಂಡವನ್ನು ಮೊದಲ ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಇನ್ನು ಕೊನೆಯ ಓವರ್‌ನಲ್ಲಿ ಮುಂಬೈಗೆ ಬೇಕಿರುವುದು 5 ರನ್ ಮಾತ್ರ. ಅಂದರೆ ಕೇವಲ ಒಂದು ಹೊಡೆತ.

    19 ಓವರ್‌ಗಳು, MI- 155/4

  • 30 Apr 2022 11:31 PM (IST)

    ಈ ಬಾರಿ ಬಲವಾದ ಹೊಡೆತ

    ಈ ಬಾರಿ ಡೇವಿಡ್ ತಮ್ಮ ಸಾಮರ್ಥ್ಯದೊಂದಿಗೆ ಬೌಂಡರಿ ಗಳಿಸಿದ್ದಾರೆ. ಕೊನೆಯ ಎಸೆತದಲ್ಲಿ ಬಚಾವ್​ ಆದ ನಂತರ, ಡೇವಿಡ್ ಕುಲದೀಪ್ ಅವರ ಮುಂದಿನ ಚೆಂಡನ್ನು ಸಂಪೂರ್ಣ ಬಲದಿಂದ ಕವರ್‌ ಕಡೆಗೆ ಹೊಡೆದು ಬೌಂಡರಿ ಪಡೆದರು. ಓವರ್‌ನಿಂದ 13 ರನ್.

    18 ಓವರ್‌ಗಳು, MI – 147/4

  • 30 Apr 2022 11:17 PM (IST)

    ಟಿಮ್ ಡೇವಿಡ್ ಸಿಕ್ಸರ್

    ಟಿಮ್ ಡೇವಿಡ್ 6 ಪಂದ್ಯಗಳ ನಂತರ ತಂಡಕ್ಕೆ ಹಿಂದಿರುಗಿದ್ದು, ಮೂರನೇ ಎಸೆತದಲ್ಲಿ ಪ್ರಚಂಡ ಸಿಕ್ಸರ್ ಬಾರಿಸಿದರು.

  • 30 Apr 2022 11:12 PM (IST)

    ನಾಲ್ಕನೇ ವಿಕೆಟ್ ಪತನ

    ಮುಂಬೈ ನಾಲ್ಕನೇ ವಿಕೆಟ್ ಕೂಡ ಕಳೆದುಕೊಂಡಿದ್ದು, ತಿಲಕ್ ವರ್ಮಾ ಕೂಡ ಪೆವಿಲಿಯನ್ಗೆ ಮರಳಿದ್ದಾರೆ. ಮುಂಬೈ 3 ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದು, ಇಬ್ಬರೂ ಸೆಟ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದಾರೆ.

  • 30 Apr 2022 11:11 PM (IST)

    ಮೂರನೇ ವಿಕೆಟ್ ಪತನ

    ಮುಂಬೈನ ಮೂರನೇ ವಿಕೆಟ್ ಪತನಗೊಂಡು ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಅಂತ್ಯಗೊಂಡಿತು. ಸೂರ್ಯಕುಮಾರ್ 15ನೇ ಓವರ್‌ನ ಕೊನೆಯ ಎಸೆತವನ್ನು ಲಾಂಗ್ ಆನ್ ಮೇಲೆ ಮಾಡಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ ಮತ್ತು ಬೌಂಡರಿಯಲ್ಲಿ ಕ್ಯಾಚ್ ನೀಡಿದರು.

    ಸೂರ್ಯಕುಮಾರ್ ಯಾದವ್: 51 ರನ್ (39 ಎಸೆತ, 5×4, 2×6); MI- 122/3

  • 30 Apr 2022 11:03 PM (IST)

    ಸೂರ್ಯ ಬಲಿಷ್ಠ ಅರ್ಧಶತಕ

    ಸೂರ್ಯಕುಮಾರ್ ಈ ಋತುವಿನಲ್ಲಿ ಮೂರನೇ ಅರ್ಧಶತಕ ಪೂರೈಸಿದ್ದಾರೆ. ಅಶ್ವಿನ್ ಅವರ 14 ನೇ ಓವರ್‌ನಲ್ಲಿ ಸ್ಲಾಗ್ ಸ್ವೀಪ್ ಆಡಿ ಚೆಂಡನ್ನು ಡೀಪ್ ಮಿಡ್‌ವಿಕೆಟ್ ಕಡೆಗೆ 6 ರನ್ ಗಳಿಸಿದರು. ಸೂರ್ಯ ಕೇವಲ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಮುಂಬೈಗೆ ಉತ್ತಮ ಓವರ್, ಇದರಿಂದ 11 ರನ್ ಬಂದವು.

    14 ಓವರ್‌ಗಳು, MI – 113/2

  • 30 Apr 2022 10:57 PM (IST)

    ಮುಂಬೈ ಶತಕ ಪೂರ್ಣ

    13ನೇ ಓವರ್‌ನಲ್ಲಿ ಮುಂಬೈ 100 ರನ್ ಪೂರೈಸಿದೆ. ಕುಲದೀಪ್ ಸೇನ್ ಅವರ ಎರಡನೇ ಓವರ್‌ ಬೌಲಿಂಗ್‌ನಲ್ಲಿ, ತಿಲಕ್ ವರ್ಮಾ ಆಫ್ ಸ್ಟಂಪ್‌ಗೆ ಹೊರಗೆ ಬಂದು ಅದನ್ನು ಫೈನ್ ಲೆಗ್‌ಗೆ ಆಡಿ ಬೌಂಡರಿ ಪಡೆದರು. 13ನೇ ಓವರ್‌ನಲ್ಲಿ 7 ರನ್.

    13 ಓವರ್‌ಗಳು, MI- 102/2

  • 30 Apr 2022 10:56 PM (IST)

    ಸೂರ್ಯ ಸಿಕ್ಸರ್

    ಚಹಲ್ ತಮ್ಮ ಎರಡನೇ ಓವರ್‌ ಅನ್ನು ಸಿಕ್ಸರ್ ಮೂಲಕ ಸ್ವಾಗತಿಸಲಾಗಿದೆ. ಕಳೆದ ಬಾರಿ ಚಾಹಲ್ ವಿರುದ್ಧ ಕೊನೆಯ ಎಸೆತದಲ್ಲಿ ಸ್ವೀಪ್ ಶಾಟ್ ಮಿಸ್ ಮಾಡಿಕೊಂಡಿದ್ದ ಸೂರ್ಯಕುಮಾರ್ ಔಟಾಗುವುದರಿಂದ ಪಾರಾದರಾದರೂ ಈ ಬಾರಿಯೂ ಅದೇ ಹೊಡೆತಕ್ಕೆ ಯತ್ನಿಸಿ ಯಶಸ್ಸು ಪಡೆದರು. ಚೆಂಡು ನೇರವಾಗಿ ಡೀಪ್ ಸ್ಕ್ವೇರ್ ಲೆಗ್ ಬೌಂಡರಿಯಿಂದ 6 ರನ್‌ಗಳಿಗೆ ಬಿತ್ತು. ಓವರ್‌ನಿಂದ 10 ರನ್.

    12 ಓವರ್‌, MI- 95/2

  • 30 Apr 2022 10:49 PM (IST)

    ಬೋಲ್ಟ್ ಕೊಂಚ ದುಬಾರಿ

    ಸತತ ಮೂರು ಕಷ್ಟಕರ ಓವರ್‌ಗಳ ನಂತರ ಮುಂಬೈಗೆ ಉತ್ತಮ ಓವರ್ ಬಂದಿತು. 11ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಟ್ರೆಂಟ್ ಬೌಲ್ಟ್ ಓವರ್‌ನಿಂದ 10 ರನ್‌ ನೀಡಿದರು.

    11 ಓವರ್‌, MI- 85/2

  • 30 Apr 2022 10:48 PM (IST)

    ಅಶ್ವಿನ್ ಉತ್ತಮ ಬೌಲಿಂಗ್

    ಸತತ ಮೂರನೇ ಓವರ್ ರಾಜಸ್ಥಾನಕ್ಕೆ ಅತ್ಯುತ್ತಮವಾಗಿ ಪರಿಣಮಿಸಿದೆ. ಚಾಹಲ್ ಮತ್ತು ಕುಲದೀಪ್ ನಂತರ, ಅಶ್ವಿನ್ ಮತ್ತೊಂದು ಉತ್ತಮ ಓವರ್ ಮಾಡಿದರು. ಓವರ್‌ನಿಂದ 5 ರನ್.

    10 ಓವರ್‌, MI- 75/2

  • 30 Apr 2022 10:46 PM (IST)

    ಕುಲದೀಪ್ ಉತ್ತಮ ಓವರ್

    ಎತ್ತರದ ವೇಗಿ ಕುಲದೀಪ್ ಸೇನ್ ತನ್ನ ಮೊದಲ ಓವರ್‌ನಲ್ಲಿ ಬಿಗಿಯಾದ ಲೈನ್‌ನಲ್ಲಿ ಬೌಲಿಂಗ್ ಮಾಡಿದರು, ಇದು ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರನ್ನು ಕಟ್ಟಿಹಾಕಿತು. ಈ ಮೂಲಕ ರಾಜಸ್ಥಾನಕ್ಕೆ ಸತತ ಎರಡು ಬೆಸ್ಟ್ ಓವರ್‌ಗಳು ಬಂದವು.

    9 ಓವರ್‌, MI- 70/2

  • 30 Apr 2022 10:21 PM (IST)

    ಮಿಚೆಲ್ ಓವರ್​ನಲ್ಲಿ ಬೌಂಡರಿ ಮಳೆ

    ಮುಂಬೈ ತಂಡವು ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ, ಆದರೆ ಅದರ ನಂತರ ಮೊದಲ ಓವರ್‌ನಲ್ಲಿ ಮುಂಬೈ ರನ್ ಮಳೆ ಸುರಿಸಿತು. ಅದರಲ್ಲೂ ಸೂರ್ಯಕುಮಾರ್ ಯಾದವ್ ಬೌಂಡರಿಗಳ ಅಬ್ಬರ ಮಾಡಿದರು. ಡ್ಯಾರಿಲ್ ಮಿಚೆಲ್ ಮೊದಲ ಬಾರಿಗೆ ಬೌಲಿಂಗ್ ಮಾಡಲು ಬಂದರು ಮತ್ತು ಮೊದಲ ಎಸೆತವನ್ನು ಸೂರ್ಯಕುಮಾರ್ ಬೌಂಡರಿಗೆ ಕಳುಹಿಸಿದರು. ನಂತರ ಕೊನೆಯ ಎರಡು ಎಸೆತಗಳಲ್ಲೂ ಸೂರ್ಯ ಬೌಂಡರಿ ಬಾರಿಸಿದರು. ಇದೇ ವೇಳೆ ತಿಲಕ್ ವರ್ಮಾ ಕೂಡ ಭರ್ಜರಿ ಸಿಕ್ಸರ್ ಬಾರಿಸಿದರು. ಮುಂಬೈಗೆ ಉತ್ತಮ ಓವರ್, ಇದರಿಂದ 20 ರನ್ ಬಂದವು.

    7 ಓವರ್‌ಗಳು, MI- 61/2

  • 30 Apr 2022 10:11 PM (IST)

    ಇಶಾನ್ ಕಿಶನ್ ಔಟ್

    ಇಶಾನ್ ಕಿಶನ್ ಔಟಾಗಿದ್ದಾರೆ. ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರನ್ನು ಟ್ರೆಂಟ್ ಬೌಲ್ಟ್ ಔಟ್ ಮಾಡಿದರು. ಕಿಶನ್ ಬೋಲ್ಟ್ ಮೇಲೆ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್‌ನ ಮೇಲಿನ ಅಂಚಿಗೆ ತಾಗಿ ಗಾಳಿಯಲ್ಲಿ ಹೋಯಿತು. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸರಳ ಕ್ಯಾಚ್ ಪಡೆದರು.

  • 30 Apr 2022 10:01 PM (IST)

    ಕಿಶನ್ ಫೋರ್

    ಇಶಾನ್ ಕಿಶನ್ ನಾಲ್ಕನೇ ಓವರ್‌ನ ಐದನೇ ಎಸೆತದಲ್ಲಿ ಒಂದು ಕೈಯಿಂದ ಬೌಂಡರಿ ಬಾರಿಸಿದರು.

  • 30 Apr 2022 09:58 PM (IST)

    ಸೂರ್ಯ ಫೋರ್

    ನಾಲ್ಕನೇ ಓವರ್​ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದರು. ಸೂರ್ಯಕುಮಾರ್ ಅವರು ಮಿಡ್ ಆನ್‌ನಲ್ಲಿ ಫೋರ್ ಗಳಿಸಿದರು.

  • 30 Apr 2022 09:57 PM (IST)

    ರೋಹಿತ್ ಔಟ್

    ರೋಹಿತ್ ಶರ್ಮಾ ಔಟಾಗಿದ್ದಾರೆ. ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ರೋಹಿತ್ ಅವರನ್ನು ಔಟ್ ಮಾಡಿದರು. ರೋಹಿತ್ ಅಶ್ವಿನ್ ಅವರ ಚೆಂಡನ್ನು ಸ್ವೀಪ್ ಮಾಡಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಬ್ಯಾಟ್‌ನ ಮೇಲಿನ ಅಂಚನ್ನು ತಾಗಿ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ನಿಂತಿದ್ದ ಮಿಚೆಲ್ ಅವರ ಕೈಗೆ ಹೋಯಿತು.

  • 30 Apr 2022 09:56 PM (IST)

    ಕಿಶನ್‌ ಫೋರ್

    ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಶಾನ್ ಕಿಶನ್ ಮತ್ತೊಂದು ಬೌಂಡರಿ ಹೊಡೆದರು. ಮುಂದಿನ ಬಾಲ್‌ನಲ್ಲಿ, ಅವರು ಮಿಡ್ ಆನ್‌ನಲ್ಲಿ ಮತ್ತೊಂದು ಫೋರ್ ಬಾರಿಸಿದರು.

  • 30 Apr 2022 09:55 PM (IST)

    ಎರಡನೇ ಎಸೆತದಲ್ಲಿ ಇಶಾನ್ ಸಿಕ್ಸರ್

    ಇಶಾನ್ ಕಿಶನ್ ಮೊದಲ ಓವರ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಚೆಂಡು ಆಫ್-ಸ್ಟಂಪ್‌ನ ಹೊರಗಿತ್ತು, ಅದನ್ನು ಕಿಶನ್ ಕಟ್ ಮಾಡಿ ಆರು ರನ್‌ಗಳಿಗೆ ಥರ್ಡ್‌ಮ್ಯಾನ್‌ ಮೇಲೆ ಕಳುಹಿಸಿದರು.

  • 30 Apr 2022 09:55 PM (IST)

    ಮುಂಬೈ ಇನ್ನಿಂಗ್ಸ್ ಆರಂಭ

    ಮುಂಬೈ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೈದಾನದಲ್ಲಿದ್ದು, ಹೊಸ ಚೆಂಡಿನೊಂದಿಗೆ ಟ್ರೆಂಟ್ ಬೌಲ್ಟ್ ಬೌಲಿಂಗ್ ಆರಂಭಿಸಿದ್ದಾರೆ.

  • 30 Apr 2022 09:52 PM (IST)

    ರಾಜಸ್ಥಾನದ ಇನ್ನಿಂಗ್ಸ್ ಅಂತ್ಯ

    ರಾಜಸ್ಥಾನ ಇನ್ನಿಂಗ್ಸ್ ಮುಗಿದಿದೆ. ಪೂರ್ಣ 20 ಓವರ್‌ಗಳನ್ನು ಆಡಿದ ತಂಡ ಆರು ವಿಕೆಟ್‌ಗೆ 158 ರನ್ ಗಳಿಸಿದೆ. ಜೋಸ್ ಬಟ್ಲರ್ ಅವರಿಗೆ ಗರಿಷ್ಠ 67 ರನ್ ಗಳಿಸಿದರು.

  • 30 Apr 2022 09:22 PM (IST)

    ಅಶ್ವಿನ್ ಔಟ್

    20ನೇ ಓವರ್‌ನ ಮೊದಲ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಔಟಾದರು. ಮೆರೆಡಿತ್ ಮೊದಲ ಚೆಂಡನ್ನು ನಿಧಾನವಾಗಿ ಬೌಲ್ ಮಾಡಿದರು ಮತ್ತು ಅಶ್ವಿನ್ ಅದನ್ನು ಎಳೆಯಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಕೈಗವಸುಗಳಿಗೆ ತಾಗಿ ವಿಕೆಟ್ ಕೀಪರ್ ಕೈಗೆ ಹೋಯಿತು.

    ಅಶ್ವಿನ್ – 21 ರನ್, 9 ಎಸೆತಗಳು 3×4 1×6

  • 30 Apr 2022 09:13 PM (IST)

    ಅಶ್ವಿನ್ ಸಿಕ್ಸರ್

    18ನೇ ಓವರ್ನ ಐದನೇ ಎಸೆತದಲ್ಲಿ ಅಶ್ವಿನ್ ಸಿಕ್ಸರ್ ಬಾರಿಸಿದರು. ಅಶ್ವಿನ್ ಸಾಮ್ಸ್ ಅವರ ಚೆಂಡನ್ನು ಮಿಡ್ವಿಕೆಟ್ ಮತ್ತು ಲಾಂಗ್ ಆನ್ ನಡುವೆ ಆರು ರನ್ಗಳಿಗೆ ಕಳುಹಿಸಿದರು.

  • 30 Apr 2022 09:13 PM (IST)

    ಅಶ್ವಿನ್ ಫೋರ್

    ಅಶ್ವಿನ್ 18ನೇ ಓವರ್ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 30 Apr 2022 09:12 PM (IST)

    ಪರಾಗ್ ಔಟ್

    18ನೇ ಓವರ್‌ನ ಮೊದಲ ಎಸೆತದಲ್ಲಿ ರಿಯಾನ್ ಪರಾಗ್ ಔಟಾದರು. ಪರಾಗ್ ರಿಲೇ ಮೆರೆಡಿತ್‌ನ ಶಾರ್ಟ್ ಬಾಲ್ ಅನ್ನು ಎಳೆದರು, ಆದರೆ ಚೆಂಡನ್ನು ನೇರವಾಗಿ ಡೇನಿಯಲ್ ಸ್ಯಾಮ್ಸ್ ಕೈ ಸೇರಿತು.

  • 30 Apr 2022 09:11 PM (IST)

    ಬುಮ್ರಾ ಬ್ರಿಲಿಯಂಟ್ ಓವರ್

    ಜಸ್ಪ್ರೀತ್ ಬುಮ್ರಾ 17ನೇ ಓವರ್ ಬೌಲ್ ಮಾಡಿ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟರು. ಕೊನೆಯ ಓವರ್‌ನಲ್ಲಿ ರಾಜಸ್ಥಾನಕ್ಕೆ ದೊಡ್ಡ ಹೊಡೆತಗಳ ಅಗತ್ಯವಿತ್ತು ಆದರೆ ಬುಮ್ರಾ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲಿಲ್ಲ.

  • 30 Apr 2022 09:03 PM (IST)

    ನಾಲ್ಕು ಸಿಕ್ಸರ್ ಬಾರಿಸಿದ ನಂತರ ಬಟ್ಲರ್ ಔಟ್

    ಹೃತಿಕ್ ಶೋಕಿನ್ ಮೇಲೆ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ ನಂತರ ಜೋಸ್ ಬಟ್ಲರ್ 16ನೇ ಓವರ್‌ನಲ್ಲಿ ಔಟಾದರು.

  • 30 Apr 2022 09:03 PM (IST)

    ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದ ಬಟ್ಲರ್

    ಬಟ್ಲರ್ 16ನೇ ಓವರ್​ನ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದಾದ ನಂತರ ಮುಂದಿನ ಬಾಲ್ ನಲ್ಲೂ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.

  • 30 Apr 2022 09:02 PM (IST)

    ಬಟ್ಲರ್ ಸಿಕ್ಸರ್

    16ನೇ ಓವರ್ ಎಸೆದ ಹೃತಿಕ್ ಶೋಕಿನ್ ಅವರ ಮೊದಲ ಎಸೆತದಲ್ಲಿ ಬಟ್ಲರ್ ಸಿಕ್ಸರ್ ಬಾರಿಸಿದರು. ಬಟ್ಲರ್ ಮಿಡ್‌ವಿಕೆಟ್ ಮತ್ತು ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.

  • 30 Apr 2022 09:02 PM (IST)

    ಅಂತಿಮವಾಗಿ ಬಂತು ಫೋರ್

    15ನೇ ಓವರ್‌ನಲ್ಲಿ ರಾಜಸ್ಥಾನ ಅಂತಿಮವಾಗಿ ಒಂದು ಬೌಂಡರಿ ಪಡೆದರು.

  • 30 Apr 2022 09:01 PM (IST)

    ಮಿಚೆಲ್ ಔಟ್

    15ನೇ ಓವರ್‌ನಲ್ಲಿ ಡೇನಿಯಲ್ ಸ್ಯಾಮ್ಸ್ ಮೊದಲ ಎಸೆತದಲ್ಲಿಯೇ ಮಿಚೆಲ್ ಅವರನ್ನು ಔಟ್ ಮಾಡಿದರು. ಬಹುಕಾಲ ರಾಜಸ್ಥಾನದ ಖಾತೆಯಲ್ಲಿ ಬೌಂಡರಿ ಬರಲಿಲ್ಲ ಮತ್ತು ಮಿಚೆಲ್ ಅದಕ್ಕಾಗಿ ಪ್ರಯತ್ನಿಸಿದರು ಆದರೆ ಕವರ್‌ನಲ್ಲಿ ನಿಂತ ರೋಹಿತ್‌ಗೆ ಕ್ಯಾಚ್ ನೀಡಿದರು.

    ಮಿಚೆಲ್ – 17 ರನ್, 20 ಎಸೆತಗಳು 1×4

  • 30 Apr 2022 08:52 PM (IST)

    ಕಾರ್ತಿಕೇಯ ಉತ್ತಮ ಸ್ಪೆಲ್

    ಚೈನಾಮನ್ ಕಾರ್ತಿಕೇಯ ಅವರು ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡುತ್ತಿದ್ದು, ಅದ್ಭುತ ಬೌಲಿಂಗ್ ಮಾಡಿದ್ದಾರೆ. ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 19 ರನ್‌ಗಳಿಗೆ ಒಂದು ವಿಕೆಟ್ ಪಡೆದರು.

  • 30 Apr 2022 08:42 PM (IST)

    24 ಎಸೆತಗಳಲ್ಲಿ ಬೌಂಡರಿ ಇಲ್ಲ

    ರಾಜಸ್ತಾನ ತಂಡ ಬೌಂಡರಿಗಾಗಿ ಚಿಂತಿತವಾಗುತ್ತಿದೆ. 10ನೇ ಓವರ್‌ನ ಮೊದಲ ಎಸೆತದಲ್ಲಿ ತಂಡ ತನ್ನ ಕೊನೆಯ ಬೌಂಡರಿ ಗಳಿಸಿತು ಮತ್ತು ಈಗ 13 ಓವರ್‌ಗಳು ಮುಗಿದಿದೆ ಆದರೆ ಬಟ್ಲರ್ ಅಥವಾ ಮಿಚೆಲ್ ಬೌಂಡರಿ ಹೊಡೆಯಲು ಸಾಧ್ಯವಾಗಲಿಲ್ಲ.

  • 30 Apr 2022 08:41 PM (IST)

    ಕಾರ್ತಿಕೇಯ ಬ್ರಿಲಿಯಂಟ್ ಓವರ್

    ಕಾರ್ತಿಕೇಯ 12ನೇ ಓವರ್‌ನಲ್ಲಿ ಬಟ್ಲರ್, ಮಿಚೆಲ್ ಇಬ್ಬರನ್ನೂ ರನ್‌ಗಾಗಿ ಹಾತೊರೆಯುವಂತೆ ಮಾಡಿದರು. ಈ ಓವರ್‌ನಲ್ಲಿ ಕಾರ್ತಿಕೇಯ ಕೇವಲ ಮೂರು ರನ್ ನೀಡಿದರು.

  • 30 Apr 2022 08:29 PM (IST)

    ಮಿಚೆಲ್ ಫೋರ್

    ಮಿಚೆಲ್ 10ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮಿಚೆಲ್ ಆಫ್-ಸ್ಟಂಪ್‌ನಲ್ಲಿ ರಿವರ್ಸ್ ಸ್ವೀಪ್ ಆಡಿ ಥರ್ಡ್‌ಮ್ಯಾನ್​ನಲ್ಲಿ ನಾಲ್ಕು ರನ್ ಗಳಿಸಿದರು.

  • 30 Apr 2022 08:19 PM (IST)

    ಪೊಲಾರ್ಡ್​ಗೆ ಬೌಂಡರಿ ಸ್ವಾಗತ

    ಒಂಬತ್ತನೇ ಓವರ್ ಎಸೆದ ಕೀರನ್ ಪೊಲಾರ್ಡ್ ಅವರ ಮೊದಲ ಎಸೆತದಲ್ಲಿ ಬಟ್ಲರ್ ಬೌಂಡರಿ ಬಾರಿಸಿದರು. ಚೆಂಡು ಆಫ್-ಸ್ಟಂಪ್‌ನ ಹೊರಗಿತ್ತು, ಅದನ್ನು ಬಟ್ಲರ್ ಕಟ್ ಮಾಡಿ ನಾಲ್ಕು ರನ್‌ಗಳಿಗೆ ಕಳುಹಿಸಿದರು.

  • 30 Apr 2022 08:13 PM (IST)

    ಕಾರ್ತಿಕೇಯಗೆ ಮೊದಲ ಓವರ್‌ನಲ್ಲಿಯೇ ವಿಕೆಟ್

    ಚೈನಾಮನ್ ಕಾರ್ತಿಕೇಯ ಅವರು ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡುತ್ತಿದ್ದು, ತಮ್ಮ ಎರಡನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಖಾತೆ ತೆರೆದರು.

  • 30 Apr 2022 08:13 PM (IST)

    ಸ್ಯಾಮ್ಸನ್ ಸಿಕ್ಸರ್

    ಏಳನೇ ಓವರ್ ಬೌಲಿಂಗ್ ಮಾಡುತ್ತಿದ್ದ ಹೃತಿಕ್ ಶೋಕಿನ್ ಮೂರನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಮುಂದೆ ಹೋಗಿ ಆರು ರನ್‌ಗಳಿಗೆ ಚೆಂಡನ್ನು ಲಾಂಗ್ ಆನ್‌ಗೆ ಕಳುಹಿಸಿದರು. ಇದು ಈ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಆಗಿದೆ. ಸಂಜು ಕೂಡ ಸಿಕ್ಸರ್‌ನೊಂದಿಗೆ ಓವರ್‌ ಮುಗಿಸಿದರು.

  • 30 Apr 2022 08:01 PM (IST)

    ಬಟ್ಲರ್ ಬೌಂಡರಿ

    ಬಟ್ಲರ್ ಐದನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಐದನೇ ಎಸೆತದಲ್ಲಿ ಅವರು ಹೃತಿಕ್ ಅವರ ಚೆಂಡನ್ನು ನಾಲ್ಕು ರನ್‌ಗಳಿಗೆ ಕಳುಹಿಸಿದರು. ಮುಂದಿನ ಎಸೆತದಲ್ಲಿ ಬಟ್ಲರ್ ಕವರ್‌ಗಳ ದಿಕ್ಕಿನಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು.

  • 30 Apr 2022 08:00 PM (IST)

    ದೇವದತ್ ಔಟ್

    ದೇವದತ್ ಪಡಿಕ್ಕಲ್ ಔಟ್ ಆಗಿದ್ದಾರೆ. ಐದನೇ ಓವರ್ ಎಸೆದ ಆಫ್ ಸ್ಪಿನ್ನರ್ ಹೃತಿಕ್ ಶೋಕಿನ್ ಚೆಂಡನ್ನು ಲಾಂಗ್ ಆನ್ ನಲ್ಲಿ ಹೊಡೆಯಲು ಯತ್ನಿಸಿದರು ಆದರೆ ಚೆಂಡು ನೇರವಾಗಿ ಕೀರನ್ ಪೊಲಾರ್ಡ್ ಅವರ ಕೈ ಸೇರಿತು. ಇದು ಹೃತಿಕ್ ಅವರ ಮೊದಲ ವಿಕೆಟ್.

  • 30 Apr 2022 07:59 PM (IST)

    ಬಟ್ಲರ್ ಬಚಾವ್

    ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್ ಅವರನ್ನು ಬುಮ್ರಾ ಔಟ್ ಮಾಡಿದರು, ಆದರೆ ಈ ಚೆಂಡು ಫ್ರೀ ಹಿಟ್ ಆಗಿದ್ದರಿಂದ ಬಟ್ಲರ್ ಪೆವಿಲಿಯನ್‌ಗೆ ಮರಳಲಿಲ್ಲ.

  • 30 Apr 2022 07:59 PM (IST)

    ಪಡಿಕಲ್​ಗೆ ಜೀವದಾನ

    ದೇವದತ್ ಪಡಿಕ್ಕಲ್ ಜೀವದಾನ ಪಡೆದರು. ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಟಿಮ್ ಡೇವಿಡ್ ಕ್ಯಾಚ್ ಕೈಬಿಟ್ಟರು. ಚೆಂಡು ನಾಲ್ಕು ರನ್‌ಗಳಿಗೆ ಹೋಯಿತು.

  • 30 Apr 2022 07:58 PM (IST)

    ಬಟ್ಲರ್ ಬೌಂಡರಿ

    ಎರಡನೇ ಓವರ್ ಬೌಲಿಂಗ್ ಮಾಡುತ್ತಿದ್ದ ಬುಮ್ರಾ ನಾಲ್ಕನೇ ಎಸೆತವನ್ನು ಶಾರ್ಟ್ ಮಾಡಿ ಬಟ್ಲರ್ ಎಳೆದರು. ಫೈನ್ ಲೆಗ್‌ನಲ್ಲಿ ನಿಂತಿದ್ದ ಸ್ಯಾಮ್ಸ್ ತಲೆಯ ಮೇಲಿಂದ ಚೆಂಡು ನಾಲ್ಕು ರನ್‌ಗಳಿಗೆ ಹೋಯಿತು.

  • 30 Apr 2022 07:57 PM (IST)

    ಪಂದ್ಯ ಪ್ರಾರಂಭ

    ಮುಂಬೈ ಮತ್ತು ರಾಜಸ್ಥಾನ ನಡುವಿನ ಪಂದ್ಯ ಆರಂಭವಾಗಿದೆ. ಡೇನಿಯಲ್ ಸಾಮ್ಸ್ ಮೊದಲ ಓವರ್ ಬೌಲ್ ಮಾಡಿ ಕೇವಲ ಮೂರು ರನ್ ಬಿಟ್ಟುಕೊಟ್ಟರು.

  • 30 Apr 2022 07:57 PM (IST)

    ರಾಜಸ್ಥಾನ್ ರಾಯಲ್ಸ್

    ಜೋಸ್ ಬಟ್ಲರ್, ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರಯಾನ್ ಪರಾಗ್, ಡ್ಯಾರೆಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಬೌಲ್ಡ್, ಕುಲ್ದಿದ್ ಸೇನ್, ಪ್ರಸಿದ್ದ್ ಕೃಷ್ಣ, ಚಹಾಲ್.

  • 30 Apr 2022 07:56 PM (IST)

    ಮುಂಬೈ ಇಂಡಿಯನ್ಸ್

    ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಬ್ರೋವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪೊಲಾರ್ಡ್, ಶೋಕೀನ್, ಡೇನಿಯಲ್ ಸ್ಯಾಮ್, ಜಯದೇವ್ ಉನತ್ಕಾಟ್, ಮೆರಿಡಿಟ್, ಬುಮ್ರಾ.

  • 30 Apr 2022 07:23 PM (IST)

    ಮುಂಬೈ ಮೊದಲು ಬೌಲಿಂಗ್

    ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹುಟ್ಟುಹಬ್ಬದ ದಿನದಂದು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್ ಈ ಪಂದ್ಯಕ್ಕಾಗಿ ಎರಡು ಬದಲಾವಣೆಗಳನ್ನು ಮಾಡಿದೆ, ಟಿಮ್ ಡೇವಿಡ್ ಮರಳಿದ್ದಾರೆ,ಜೊತೆಗೆ ಕುಮಾರ್ ಕಾರ್ತಿಕೇಯ ಸಿಂಗ್ ಅವರು ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಜಸ್ಥಾನ ಯಾವುದೇ ಬದಲಾವಣೆ ಮಾಡಿಲ್ಲ.

  • 30 Apr 2022 07:09 PM (IST)

    ಹರ್ಷಲ್ ಬೆಸ್ಟ್ ಓವರ್

    17ನೇ ಓವರ್ ಎಸೆಯಲು ಬಂದ ಹರ್ಷಲ್ ಪಟೇಲ್ ಈ ಓವರ್​ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ಕೇವಲ ಏಳು ರನ್ ನೀಡಿದರು. ಅವರು ಡೇವಿಡ್ ಮಿಲ್ಲರ್ ಮತ್ತು ರಾಹುಲ್ ಟಿಯೋಟಿಯಾ ಅವರಿಗೆ ಸುಲಭವಾಗಿ ಸ್ಕೋರ್ ಮಾಡಲು ಬಿಡಲಿಲ್ಲ.

  • Published On - Apr 30,2022 7:06 PM

    Follow us
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ