IPL 2022: ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೊದಲು ಅಳತೆ ಟೇಪ್ ಮೊರೆ ಹೋದ ಶಮಿ

IPL 2022: ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಮೊದಲು ಅಳತೆ ಟೇಪ್ ಮೊರೆ ಹೋದ ಶಮಿ
Mohammed Shami

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಆರ್​ಸಿಬಿ ವಿರಾಟ್ ಕೊಹ್ಲಿಯ 58 ರನ್ ಹಾಗೂ ರಜತ್ ಪಾಟಿದಾರ್ ಅವರ 52 ರನ್​ಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿದೆ. ಈ ಮೂಲಕ ಗುಜರಾತ್ ಟೈಟನ್ಸ್​ಗೆ 171 ರನ್​ಗಳ ಟಾರ್ಗೆಟ್ ನೀಡಿದೆ.

TV9kannada Web Team

| Edited By: Zahir PY

Apr 30, 2022 | 6:00 PM

IPL 2022: ಐಪಿಎಲ್​ನ 43ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಆರ್​ಸಿಬಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ನಾಯಕ ಡುಪ್ಲೆಸಿಸ್​ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಕಳೆದ ಕೆಲ ಪಂದ್ಯಗಳಲ್ಲಿ ಸತತವಾಗಿ ವೈಫಲ್ಯ ಹೊಂದಿದ್ದ ವಿರಾಟ್ ಕೊಹ್ಲಿ ಈ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅತ್ಯುತ್ತಮ ಬೌಲಿಂಗ್ ಲೈನಪ್ ಹೊಂದಿರುವ ಗುಜರಾತ್ ಟೈಟನ್ಸ್ ವಿರುದ್ದ 45 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ತಮ್ಮ ಹಳೆಯ ಖದರ್ ತೋರಿಸಿದರು.

ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ 16 ಓವರ್​ವರೆಗೂ ವಿರಾಟ್ ಕೊಹ್ಲಿಯ ವಿಕೆಟ್​ಗಾಗಿ ನಾನಾ ತಂತ್ರಗಳನ್ನು ಹೆಣೆದರೂ ಫಲ ನೀಡಲಿಲ್ಲ. ಹಲವು ಬಾರಿ ಬೌಲಿಂಗ್ ಬದಲಿಸಿದರೂ ಕೊಹ್ಲಿ ಆತ್ಮ ವಿಶ್ವಾಸದಿಂದಲೇ ಬ್ಯಾಟಿಂಗ್ ಮುಂದುವರೆಸಿದರು. ಇದೇ ವೇಳೆ 17ನೇ ಓವರ್​ನಲ್ಲಿ ಪಾಂಡ್ಯ ಮತ್ತೆ ಮೊಹಮ್ಮದ್ ಶಮಿಗೆ ಚೆಂಡು ನೀಡಿದ್ದರು. ಆದರೆ ಅದಾಗಲೇ 58 ರನ್​ ಬಾರಿಸಿ ಕ್ರೀಸ್ ಕಚ್ಚಿ ನಿಂತಿದ್ದ ಕೊಹ್ಲಿಗಾಗಿ ಶಮಿ ಕೂಡ ಹೊಸ ತಂತ್ರ ರೂಪಿಸಿದರು.

ವಿರಾಟ್ ಕೊಹ್ಲಿಗೆ ಮೊದಲ ಓವರ್‌ನ ಮೊದಲ ಎಸೆತವನ್ನು ಬೌಲ್ ಮಾಡಿದ ನಂತರ, ಶಮಿ ಎರಡನೇ ಎಸೆತವನ್ನು ಬೌಲ್ ಮಾಡಲು ರನ್-ಅಪ್ ತೆಗೆದುಕೊಂಡು ಆ ಬಳಿಕ ನಿಲ್ಲಿಸಿದರು. ಅಲ್ಲದೆ ಡಗೌಟ್ ಕಡೆಯಿಂದ ಅಳತೆ ಟೇಪ್ ತರುವಂತೆ ಸೂಚಿಸಿದರು. ಅಳತೆ ಟೇಪ್​ನೊಂದಿಗೆ ಬಂದ ಡೊಮಿನಿಕ್ ಡ್ರೇಕ್ಸ್ ಜೊತೆ ರನ್ನಿಂಗ್ ಸ್ಟೆಪ್ಸ್ ದೂರವನ್ನು ನಿರ್ಧರಿಸಿದರು. ಈ ಓವರ್​ನಲ್ಲಿ ಶಮಿಗೆ ವಿರಾಟ್ ಕೊಹ್ಲಿಯ ವಿಕೆಟ್ ಸಿಕ್ಕಿರಲಿಲ್ಲ. ಆದರೆ 17ನೇ ಓವರ್​ನಲ್ಲಿ ಮರಳಿದ್ದ ಶಮಿ ಅತ್ಯುತ್ತಮ ಯಾರ್ಕರ್​ ಮೂಲಕ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ್ದರು. ಈ ಮೂಲಕ ಶಮಿ ಗುಜರಾತ್ ಟೈಟನ್ಸ್​ಗೆ ಯಶಸ್ಸು ತಂದುಕೊಟ್ಟಿದ್ದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಆರ್​ಸಿಬಿ ವಿರಾಟ್ ಕೊಹ್ಲಿಯ 58 ರನ್ ಹಾಗೂ ರಜತ್ ಪಾಟಿದಾರ್ ಅವರ 52 ರನ್​ಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿದೆ. ಈ ಮೂಲಕ ಗುಜರಾತ್ ಟೈಟನ್ಸ್​ಗೆ 171 ರನ್​ಗಳ ಟಾರ್ಗೆಟ್ ನೀಡಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada