AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು ಮಹೇಶ್​ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್​ ಗರಂ

Sarkaru Vaari Paata Trailer Leak: ‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಲೀಕ್​ ಸಮಸ್ಯೆ ಕಾಡುತ್ತಿರುವುದು ಇದೇ ಮೊದಲೇನಲ್ಲ. ‘ಕಲಾವತಿ..’ ಸಾಂಗ್​ ಕೂಡ ಲೀಕ್​ ಆಗಿತ್ತು.

ಬಿಡುಗಡೆಗೂ ಮುನ್ನವೇ ಲೀಕ್​ ಆಯ್ತು ಮಹೇಶ್​ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್​ ಗರಂ
ಮಹೇಶ್ ಬಾಬು
TV9 Web
| Updated By: ರಾಜೇಶ್ ದುಗ್ಗುಮನೆ|

Updated on:May 02, 2022 | 5:09 PM

Share

ಸಿನಿಮಾ ಮಾಡುವುದು ಕಷ್ಟದ ಕೆಲಸ. ಅದೇ ಸಿನಿಮಾವನ್ನು ಪೈರಸಿಯಿಂದ ಕಾಪಾಡುವುದು ಇನ್ನೂ ಕಷ್ಟದ ಕೆಲಸ. ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಕೂಡ ಈ ಪಿಡುಗಿಗೆ ಬಲಿ ಆದ ಉದಾಹರಣೆ ಇದೆ. ಈಗ ಮಹೇಶ್​ ಬಾಬು (Mahesh Babu) ಅಭಿಮಾನಿಗಳಿಗೆ ಪೈರಸಿ ವಿಚಾರಲ್ಲಿ ಚಿಂತೆ ಶುರುವಾಗಿದೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ‘ಪ್ರಿನ್ಸ್​’ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ( Sarkaru Vaari Paata) ಸಿನಿಮಾ ಮೇಲೆ ಸಿನಿಪ್ರಿಯರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೇ 12ರಂದು ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಪೋಸ್ಟರ್​, ಟೀಸರ್​ ಮತ್ತು ಹಾಡುಗಳ ಮೂಲಕ ಗಮನ ಸೆಳೆಯಲಾಗಿದೆ. ಮೇ 2ರಂದು ಟ್ರೇಲರ್​ ರಿಲೀಸ್​ ಮಾಡಿ, ಆ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್​ ಆಗಿತ್ತು. ಆದರೆ ಟ್ರೇಲರ್​ (Sarkaru Vaari Paata Trailer) ರಿಲೀಸ್​ ಆಗೋದಕ್ಕಿಂತಲೂ ಮುನ್ನವೇ ಈ ಸಿನಿಮಾದ ಕೆಲವು ಸೀನ್​ಗಳು ಲೀಕ್​ ಆಗಿವೆ. ಇದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಸೋಶಿಯಲ್​ ಮೀಡಿಯಾ ಮೂಲಕ ಮಹೇಶ್​ ಬಾಬು ಫ್ಯಾನ್ಸ್​ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಲೀಕ್​ ಸಮಸ್ಯೆ ಕಾಡುತ್ತಿರುವುದು ಇದೇ ಮೊದಲೇನಲ್ಲ. ‘ಕಲಾವತಿ..’ ಸಾಂಗ್​ ಕೂಡ ಲೀಕ್​ ಆಗಿತ್ತು. ಈ ರೀತಿ ಸೋರಿಕೆ ಮಾಡುವುದರಿಂದ ಜನರಿಗೆ ಸಿನಿಮಾ ಮೇಲಿನ ಕ್ರೇಜ್​ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವೇ ಪೈರಸಿಗೆ ಒಳಗಾಗುವ ಅಪಾಯ ದಟ್ಟವಾಗಿರುತ್ತದೆ. ಇದು ಮಹೇಶ್​ ಬಾಬು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.

ತೆಲುಗು ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಬ್ಯಾನರ್​ ಮೂಲಕ ‘ಸರ್ಕಾರು ವಾರಿ ಪಾಟ’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿಯೇ ಈ ರೀತಿ ದೃಶ್ಯಗಳು ಲೀಕ್​ ಆಗಿವೆ ಎಂದು ಫ್ಯಾನ್ಸ್​ ಆರೋಪಿಸುತ್ತಿದ್ದಾರೆ. ಈ ಬಗ್ಗೆ ‘ಮೈತ್ರಿ ಮೂವೀ ಮೇಕರ್ಸ್​’ ಕಡೆಯಿಂದ ಸ್ಪಷ್ಟನೆ ಬರಬೇಕಿದೆ. ‘ಉಪ್ಪೆನಾ’, ‘ರಂಗಸ್ಥಲಂ’, ‘ಪುಷ್ಪ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಈ ಸಂಸ್ಥೆಗಿದೆ. ಮೇ 2ರಂದು ಸಂಜೆ 4 ಗಂಟೆಗೆ ‘ಸರ್ಕಾರು ವಾರಿ ಪಾಟ’ ಟ್ರೇಲರ್​ ಬಿಡುಗಡೆ ಆಗಲಿದೆ.

ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಬಂದ ‘ಕಲಾವತಿ..’ ಹಾಡನ್ನು ನೋಡಿ ಜನರು ಸಖತ್​ ಇಷ್ಟಪಟ್ಟಿದ್ದಾರೆ. ಕೀರ್ತಿ ಸುರೇಶ್ ಅವರಿಗೂ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಎಸ್​. ತಮನ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ದೊಡ್ಡ ಓಪನಿಂಗ್​ ಸಿಗುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ನಿರ್ಮಾಪಕರು ಪೈರಸಿ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಮಹೇಶ್​ ಬಾಬು ಅಭಿಮಾನಿಗಳು ಕಿವಿಮಾತು ಹೇಳುತ್ತಿದ್ದಾರೆ. (Source)

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ತಂದೆ ಮಹೇಶ್​ ಬಾಬು ಡ್ಯಾನ್ಸ್​ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್​ ಆಗಿ ಸ್ಟೆಪ್​ ಹಾಕಿದ ಮಗಳು ಸಿತಾರಾ

‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

Published On - 12:22 pm, Mon, 2 May 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು