ತಂದೆ ಮಹೇಶ್​ ಬಾಬು ಡ್ಯಾನ್ಸ್​ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್​ ಆಗಿ ಸ್ಟೆಪ್​ ಹಾಕಿದ ಮಗಳು ಸಿತಾರಾ

‘ಸರ್ಕಾರು ವಾರಿ ಪಾಟ’ ಚಿತ್ರದ ‘ಕಲಾವತಿ..’  ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಾಂಗ್​ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗಿದೆ. ಈ ಹಾಡು ಈಗ ಕೋಟಿಕೋಟಿ ವೀಕ್ಷಣೆ ಕಾಣುತ್ತಿದೆ.

ತಂದೆ ಮಹೇಶ್​ ಬಾಬು ಡ್ಯಾನ್ಸ್​ ಮಾಡಿದ ‘ಕಲಾವತಿ..’ ಹಾಡಿಗೆ ಸಖತ್​ ಆಗಿ ಸ್ಟೆಪ್​ ಹಾಕಿದ ಮಗಳು ಸಿತಾರಾ
ಸಿತಾರಾ-ಮಹೇಶ್​ ಬಾಬು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 21, 2022 | 5:58 PM

ಮಹೇಶ್​ ಬಾಬು (Mahesh Babu) ಮಗಳು ಸಿತಾರಾ (Sitara)ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿದ್ದಾಳೆ. ಅವಳಿಗೆ ಇನ್ನೂ 9 ವರ್ಷ ವಯಸ್ಸು. ಈಗಲೇ ಆಕೆಯನ್ನು ಇನ್​ಸ್ಟಾಗ್ರಾಂನಲ್ಲಿ 5.89 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಸಿತಾರಾಗೆ ಯಾವುದೇ ಅಂಜಿಕೆ ಇಲ್ಲ. ಆಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿರುತ್ತಾಳೆ. ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಾಳೆ. ಈಗ ಸಿತಾರಾ ಹೊಸ ರೀಲ್ಸ್​ ಹಂಚಿಕೊಂಡಿದ್ದಾಳೆ. ಅವಳ ತಂದೆ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ಸೂಪರ್​ ಹಿಟ್​ ಹಾಡು ‘ಕಲಾವತಿ..’ಗೆ (Kalaavathi ) ಡ್ಯಾನ್ಸ್​ ಮಾಡಿದ್ದಾಳೆ. ಸದ್ಯ, ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಮಹೇಶ್​ ಬಾಬು ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತವೆ. ಈ ಕಾರಣಕ್ಕೆ ಅವರ ಚಿತ್ರಗಳು ತುಂಬಾನೇ ರಿಚ್​ ಆಗಿ ಮೂಡಿ ಬರುತ್ತವೆ. ಅವರ ಪ್ರತಿ ಸಿನಿಮಾದಲ್ಲೂ ಹಾಡಿಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುತ್ತದೆ. ಈಗ ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ‘ಕಲಾವತಿ..’  ಹಾಡು ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಾಂಗ್​ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗಿದೆ. ಈ ಹಾಡು ಈಗ ಕೋಟಿಕೋಟಿ ವೀಕ್ಷಣೆ ಕಾಣುತ್ತಿದೆ. ಈ ಹಾಡಿಗೆ ಈಗ ಸಿತಾರಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್​ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದಲೂ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ‘ಕಲಾವತಿ..’ ಹಾಡು ಸಖತ್​ ಟ್ರೆಂಡ್​ ಆಗುತ್ತಿದೆ.

ಥಮನ್​ ಎಸ್​. ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಸಂಗೀತ ಅನೇಕರಿಗೆ ಇಷ್ಟವಾಗಿದೆ. ಸಿದ್​​ ಶ್ರೀರಾಮ್​ ಅವರು ಈ ಹಾಡನ್ನು ಹಾಡಿದ್ದಾರೆ. ಮಹೇಶ್ ಬಾಬು ಡ್ಯಾನ್ಸ್ ಸ್ಟೆಪ್​ ಎಲ್ಲರಿಗೂ ಇಷ್ಟವಾಗಿದೆ. ಮಹೇಶ್​ ಬಾಬು ಹಾಗೂ ಕೀರ್ತಿ ಕೆಮಿಸ್ಟ್ರಿ​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರದ ಹಾಡು 3.8 ಕೋಟಿ ಬಾರಿ ವೀಕ್ಷಣೆ ಕಂಡಿದೆ.  ಕೀರ್ತಿ ಸುರೇಶ್​ ಅವರು ‘ಮಹಾನಟಿ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು. ಆದರೆ, ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಸಿಗಲಿಲ್ಲ. ಈಗ ಈ ಸಿನಿಮಾ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.

ಹಾಡಿನ ಮೂಲಕ ಸಿನಿಮಾ ಹಿಟ್​ ಆದ ಉದಾಹರಣೆ ಸಾಕಷ್ಟಿದೆ. ಈಗ ‘ಕಲಾವತಿ..’ಹಾಡಿನಿಂದ ‘ಸರ್ಕಾರು ವಾರಿ ಪಾಟ’ ಚಿತ್ರದ ಮೈಲೇಜ್​ ಹೆಚ್ಚಿದರೂ ಅಚ್ಚರಿ ಏನಿಲ್ಲ. ಮೇ 12ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾದು ಕೂತಿದ್ದಾರೆ. ಇದರ ಜತೆಗೆ ತ್ರಿವಿಕ್ರಂ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲೂ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಸೆಟ್ಟೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹೇಶ್​ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್​ ಮಧ್ಯೆ ವಾರ್​; ಕಾರಣ ಕೇಳಿದ್ರೆ ನಗ್ತೀರಾ

ಮಹೇಶ್​ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್​ ಆಯ್ತು ಫೋಟೋ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್