AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್​ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್​ ಆಯ್ತು ಫೋಟೋ

ಮಹೇಶ್​ ಬಾಬುಗೆ ಸಿತಾರಾ ತೊಂದರೆ ಕೊಡುತ್ತಿದ್ದಾಳೆ. ಈ ಫೋಟೋವನ್ನು ಅವಳು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಮಹೇಶ್​ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್​ ಆಯ್ತು ಫೋಟೋ
ಮಹೇಶ್​ ಬಾಬು-ಸಿತಾರಾ
TV9 Web
| Edited By: |

Updated on:Feb 13, 2022 | 7:01 PM

Share

ಟಾಲಿವುಡ್​ ನಟ ಮಹೇಶ್​ ಬಾಬು (Mahesh Babu) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಹೆಚ್ಚಿನ ಸಮಯವನ್ನು ಅವರು ಕುಟುಂಬದ ಜತೆ ಕಳೆಯುತ್ತಾರೆ. ಮಗಳು ಸಿತಾರಾ (Sitara), ಮಗ ಗೌತಮ್​ ಹಾಗೂ ಪತ್ನಿ ನಮ್ರತಾ ಜತೆ ಕಳೆದ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸಾಕಷ್ಟು ವೇದಿಕೆ ಮೇಲೆ ಅವರು ಕುಟುಂಬದ ಬಗ್ಗೆ ಮಾತನಾಡಿದ್ದಿದೆ. ಇನ್ನು, ಕುಟುಂಬದ ಜತೆಗೆ ಅವರು ಸಾಕಷ್ಟು ಕಡೆಗಳಲ್ಲಿ ಪ್ರವಾಸ ಕೂಡ ತೆರಳಿದ್ದಾರೆ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಹೇಗೆ ಬ್ಯಾಲೆನ್ಸ್​ ಮಾಡಿಕೊಂಡು ಹೋಗಬೇಕು ಎಂಬುದು ಅವರಿಗೆ ತಿಳಿದಿದೆ. ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಕುಟುಂಬಕ್ಕಾಗಿ ಅವರು ಸಮಯ ಮೀಸಲಿಡುತ್ತಾರೆ. ಈಗ ಮಗಳು ಸಿತಾರಾ ತಂದೆಯ ದಿನವನ್ನು ಹಾಳು ಮಾಡಿದ್ದಾಳೆ. ಈ ಫೋಟೋ ಈಗ ಸಖತ್​ ವೈರಲ್​ ಆಗುತ್ತಿದೆ.

ಮಹೇಶ್​ ಬಾಬುಗೆ ಸಿತಾರಾ ತೊಂದರೆ ಕೊಡುತ್ತಿದ್ದಾಳೆ. ಈ ಫೋಟೋವನ್ನು ಅವಳು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ‘ಅಪ್ಪನ ಒಳ್ಳೆಯ ದಿನವನ್ನು ಹಾಳುವ ಮಾಡುವ ಮಿಷನ್​ ಮೇಲೆ ಇದ್ದೇನೆ’ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ. ಇದಕ್ಕೆ ಮಹೇಶ್​ ಬಾಬು ಪತ್ನಿ ನಮ್ರತಾ ಶಿರೋಡ್ಕರ್​ ಕಮೆಂಟ್​ ಮಾಡಿದ್ದು, ನಗುವ ಎಮೋಜಿ ಹಾಕಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ.

ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಈ ಫೋಟೋ ತುಂಬಾನೇ ಕ್ಯೂಟ್​ ಆಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ‘ಮಿಷನ್​ ಯಶಸ್ವಿಯಾಗಿರಬೇಕು ಅಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್​ ಬಾಬು ನಟಿಸಿದ್ದಾರೆ. ಈ  ಸಿನಿಮಾವನ್ನು ಮೇ 12ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿತ್ತು. ಕೆಲ ದಿನಗಳ ಹಿಂದೆ ಮಹೇಶ್​ ಬಾಬು ನಟನೆಯ ಹೊಸ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿತ್ತು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಮೊದಲು ‘ಅತಡು’ ಹಾಗೂ ‘ಖಲೇಜ’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈಗ 12 ವರ್ಷಗಳ ಬಳಿಕ ಇಬ್ಬರೂ ಮೂರನೇ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: ಸೈಲೆಂಟ್​ ಆಗಿ ಸೆಟ್ಟೇರಿದ ಮಹೇಶ್​ ಬಾಬು ಹೊಸ ಸಿನಿಮಾ; ಫ್ಯಾನ್ಸ್​ಗೆ ಬೇಸರ ತಂದ​ ವಿಚಾರ

ಮಹೇಶ್​ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್​ ಮಧ್ಯೆ ವಾರ್​; ಕಾರಣ ಕೇಳಿದ್ರೆ ನಗ್ತೀರಾ

Published On - 5:41 pm, Sun, 13 February 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?