Ramesh Babu: ಟಾಲಿವುಡ್ ನಟ ಮಹೇಶ್ ಬಾಬು ಹಿರಿಯ ಸೋದರ ರಮೇಶ್ ಬಾಬು ಇನ್ನಿಲ್ಲ; ಕಂಬನಿ ಮಿಡಿದ ಚಿತ್ರರಂಗ

Ramesh Babu passes away: ಟಾಲಿವುಡ್ ನಟ ಮಹೇಶ್ ಬಾಬು ಅವರ ಹಿರಿಯ ಸಹೋದರ ರಮೇಶ್ ಬಾವು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನಟನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಅವರು ಸೇವೆ ಸಲ್ಲಿಸಿದ್ದರು.

Ramesh Babu: ಟಾಲಿವುಡ್ ನಟ ಮಹೇಶ್ ಬಾಬು ಹಿರಿಯ ಸೋದರ ರಮೇಶ್ ಬಾಬು ಇನ್ನಿಲ್ಲ; ಕಂಬನಿ ಮಿಡಿದ ಚಿತ್ರರಂಗ
ರಮೇಶ್ ಬಾಬು, ಮಹೇಶ್ ಬಾಬು (ಸಂಗ್ರಹ ಚಿತ್ರ)
Follow us
| Updated By: shivaprasad.hs

Updated on:Jan 09, 2022 | 8:06 AM

ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಸಹೋದರ ರಮೇಶ್ ಬಾಬು (Ramesh Babu) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು. ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ರಮೇಶ್, ಶನಿವಾರ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಕುಟುಂಬಸ್ಥರು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿಗೆ ತಲುಪಿದಾಗ ವೈದ್ಯರು ರಮೇಶ್ ಅವರ ನಿಧನವನ್ನು ತಿಳಿಸಿದ್ದಾರೆ. ಸೋದರನ ನಿಧನದಿಂದ ಮಹೇಶ್ ಬಾಬು, ಕುಟುಂಬವರ್ಗ ಹಾಗೂ ಅಭಿಮಾನಿಗಳು ಶೋಕದಲ್ಲಿ ಮುಳುಗಿದ್ದಾರೆ.

ತೆಲುಗಿನ ಖ್ಯಾತ ನಟ ಕೃಷ್ಣ ಅವರ ಮಗ ರಮೇಶ್ ಬಾಬು ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಪ್ರಾರಂಭಿಸಿ, ಬಾಲನಟನಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಇಂಡಸ್ಟ್ರಿಗೆ ‘ಸಾಮ್ರಾಟ್’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ‘ನಾ ಇಲ್ಲೆ ನಾ ಸ್ವರ್ಗಂ’, ‘ಅಣ್ಣ ಚೆಲ್ಲುಲು’, ‘ಕಲಿಯುಗ ಕರ್ಣುಡು’, ‘ಮುಗ್ಗುರು ಕೊಡುಕುಲು’, ‘ಚಿನ್ನಿ ಕೃಷ್ಣುಡು’, ‘ಕೃಷ್ಣ ಗಾರಿ ಅಬ್ಬಾಯಿ’, ‘ಬ್ಲಾಕ್ ಟೈಗರ್’, ‘ಕಲಿಯುಗ ಅಭಿಮನ್ಯುಡು’ ಮೊದಲಾದ ಚಿತ್ರಗಳಲ್ಲಿ ರಮೇಶ್ ಬಾಬು ಗಮನಸೆಳೆದಿದ್ದರು. ಆದರೆ, ನಾಯಕನಾಗಿ ಅವರು ಗುರುತಿಸಿಕೊಂಡದ್ದಕ್ಕಿಂತ ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ಹೆಚ್ಚು. ಮಹೇಶ್ ಬಾಬು ಹಾಗೂ ಕೃಷ್ಣ ಅವರೊಂದಿಗೆ ಹಲವು ಚಿತ್ರಗಳಲ್ಲಿ ರಮೇಶ್ ಬಾಬು ತೆರೆಹಂಚಿಕೊಂಡಿದ್ದಾರೆ.

ಮಹೇಶ್ ಬಾಬು ಅಭಿನಯದ ‘ದೂಕುಡು’ ಚಿತ್ರದಲ್ಲಿ ಕತೆಯ ನಿರೂಪಣೆಯನ್ನು ಮಾಡಿದ್ದು ರಮೇಶ್ ಬಾಬು. 2004ರ ನಂತರ ನಿರ್ಮಾಪಕರಾಗಿ ರಮೇಶ್ ಬಾಬು ಗುರುತಿಸಿಕೊಂಡಿದ್ದರು. ‘ಅರ್ಜುನ್’, ‘ಅತಿಥಿ’ಯಂತಹ ಬ್ಲಾಕ್​ಬಸ್ಟರ್ ಚಿತ್ರಗಳನ್ನು ಅವರು ನೀಡಿದ್ದರು. ರಮೇಶ್ ಬಾಬು ನಿಧನದಿಂದ ತೆಲುಗು ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದಂತಾಗಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.

ರಮೇಶ್ ಬಾಬು ಅವರ ನಿಧನದ ಕುರಿತು ಕುಟುಂಬದ ಹೇಳಿಕೆ:

ಇದನ್ನೂ ಓದಿ:

‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

Samantha: ಸಮಂತಾ ಪವರ್​ಫುಲ್​ ವರ್ಕೌಟ್; ವೈರಲ್​ ಆಗುತ್ತಿದೆ ಹೊಸ ವಿಡಿಯೋ

Published On - 8:05 am, Sun, 9 January 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ