ಸೈಲೆಂಟ್ ಆಗಿ ಸೆಟ್ಟೇರಿದ ಮಹೇಶ್ ಬಾಬು ಹೊಸ ಸಿನಿಮಾ; ಫ್ಯಾನ್ಸ್ಗೆ ಬೇಸರ ತಂದ ವಿಚಾರ
ಇಂದು (ಫೆಬ್ರವರಿ 3) ಮಹೇಶ್ ಬಾಬು ಹೊಸ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮಹೇಶ್ ಬಾಬುಗೆ (Mahesh Babu) ಟಾಲಿವುಡ್ನಲ್ಲಿ ದೊಡ್ಡ ಬೇಡಿಕೆ ಇದೆ. ಹೆಚ್ಚು ಅನುಭವಿ ನಿರ್ದೇಶಕರ ಜತೆ ಕೆಲಸ ಮಾಡೋಕೆ ಅವರು ಆದ್ಯತೆ ನೀಡುತ್ತಾರೆ. ಹೊಸಬರಿಗೆ ಆದ್ಯತೆ ನೀಡಿದರೆ ಸ್ಟಾರ್ ನಟನ ಚಿತ್ರವನ್ನು ಹ್ಯಾಂಡಲ್ ಮಾಡುವುದು ಕಷ್ಟವಾಗಬಹುದು. ಹೀಗಾಗಿ, ಹಿಟ್ ಚಿತ್ರಗಳನ್ನು ನೀಡಿದ ಡೈರೆಕ್ಟರ್ಗಳ ಜತೆ ಕೆಲಸ ಮಾಡೋಕೆ ಮಹೇಶ್ ಬಾಬು ಹೆಚ್ಚು ಆಸಕ್ತಿ ತೋರುತ್ತಾರೆ. ಈ ಬಾರಿ ಅವರು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli)ಜತೆ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರ ಈಗ ಸುಳ್ಳಾಗಿದೆ. ಅವರ ಹೊಸ ಸಿನಿಮಾ ಸದ್ದಿಲ್ಲದೆ (Mahesh Babu New Movie) ಸೆಟ್ಟೇರಿದೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಖುಷಿಪಡಬೇಕೋ ಅಥವಾ ಬೇಸರ ಮಾಡಿಕೊಳ್ಳಬೇಕೋ ಎಂಬುದು ತಿಳಿಯುತ್ತಿಲ್ಲ.
ರಾಜಮೌಳಿ ಜತೆ ಮಹೇಶ್ ಬಾಬು ಕೈ ಜೋಡಿಸುತ್ತಿದ್ದಾರೆ ಎನ್ನುವ ಮಾತು ಈ ಮೊದಲಿನಿಂದಲೂ ಚರ್ಚೆಯಲ್ಲಿರುವ ವಿಚಾರ ಆಗಿತ್ತು. ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮೇ 12ರಂದು ತೆರೆಗೆ ಬರುತ್ತಿದೆ. ಇನ್ನು, ರಾಜಮೌಳಿ ಅವರು ‘ಆರ್ಆರ್ಆರ್’ ಚಿತ್ರವನ್ನು ಮಾರ್ಚ್ 25ರಂದು ತೆರೆಗೆ ತರುತ್ತಿದ್ದಾರೆ. ಇಬ್ಬರೂ ಮುಂದಿನ ಚಿತ್ರಕ್ಕೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿತ್ತು. ಆದರೆ, ಅದು ಈಗ ಹುಸಿಯಾಗಿದೆ.
A new chapter unfolds! #Trivikram @hegdepooja @MusicThaman @vamsi84 @haarikahassine pic.twitter.com/SrfnrwIUqv
— Mahesh Babu (@urstrulyMahesh) February 3, 2022
ಇಂದು (ಫೆಬ್ರವರಿ 3) ಮಹೇಶ್ ಬಾಬು ಹೊಸ ಸಿನಿಮಾ ಸದ್ದಿಲ್ಲದೆ ಸೆಟ್ಟೇರಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ‘ಅತಡು’ ಹಾಗೂ ‘ಖಲೇಜ’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈಗ 12 ವರ್ಷಗಳ ಬಳಿಕ ಇಬ್ಬರೂ ಮೂರನೇ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ, ರಾಜಮೌಳಿ ಜತೆಗಿನ ಸಿನಿಮಾ ಸೆಟ್ಟೇರಿಲ್ಲವಲ್ಲ ಎನ್ನುವ ಬೇಸರವೂ ಕಾಡಿದೆ. ಹಾರಿಕಾ ಹಾಸಿನಿ ಕ್ರಿಯೇಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಈ ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಕೆಲ ದಿನಗಳ ಹಿಂದೆ ಚರ್ಚೆ ನಡೆದಿತ್ತು. ಟಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಂಡಿರುವ ಸಮಂತಾ ಅವರು ಈ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಪಾತ್ರ ವರ್ಗವನ್ನು ಇನ್ನೂ ಅಧಿಕೃತ ಮಾಡಿಲ್ಲ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಆ ಬಳಿಕ ಪಾತ್ರವರ್ಗದ ಬಗ್ಗೆ ಅಪ್ಡೇಟ್ ಸಿಗಲಿದೆ.
‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರ ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್ 1ಕ್ಕೆ ಮುಂದೂಡಲಾಯಿತು. ಈಗ ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಮೇ 12ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿತ್ತು.
ಇದನ್ನೂ ಓದಿ: ಬಿಡುಗಡೆ ಆಗ್ತಿದೆ ಸಾಲುಸಾಲು ಸ್ಟಾರ್ ಚಿತ್ರಗಳು; ಇಲ್ಲಿದೆ ಪ್ರಮುಖ 9 ಸಿನಿಮಾಗಳ ರಿಲೀಸ್ ದಿನಾಂಕ
ಮಹೇಶ್ ಬಾಬು ಸ್ಥಾನ ಆಕ್ರಮಿಸಿಕೊಂಡ ಚಿರಂಜೀವಿ; ‘ಆಚಾರ್ಯ’ ಹೊಸ ರಿಲೀಸ್ ದಿನಾಂಕ ಪ್ರಕಟ