ಮಹೇಶ್​ ಬಾಬು ಸ್ಥಾನ ಆಕ್ರಮಿಸಿಕೊಂಡ ಚಿರಂಜೀವಿ; ‘ಆಚಾರ್ಯ’ ಹೊಸ ರಿಲೀಸ್​ ದಿನಾಂಕ ಪ್ರಕಟ

Acharya Movie Release Date: ಮೂಲಗಳ ಪ್ರಕಾರ ‘ಸರ್ಕಾರು ವಾರಿ ಪಾಟ’ ಚಿತ್ರದ ಕೆಲಸಗಳು ಇನ್ನೂ ಬಾಕಿ ಇದೆ. ಹಾಗಾಗಿ ಅದರ ರಿಲೀಸ್​ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಆ ಕಾರಣದಿಂದಲೇ ಏ.1ಕ್ಕೆ ‘ಆಚಾರ್ಯ’ ಆಗಮಿಸುತ್ತಿದೆ ಎನ್ನಲಾಗಿದೆ.

ಮಹೇಶ್​ ಬಾಬು ಸ್ಥಾನ ಆಕ್ರಮಿಸಿಕೊಂಡ ಚಿರಂಜೀವಿ; ‘ಆಚಾರ್ಯ’ ಹೊಸ ರಿಲೀಸ್​ ದಿನಾಂಕ ಪ್ರಕಟ
ಮಹೇಶ್ ಬಾಬು, ಚಿರಂಜೀವಿ
TV9kannada Web Team

| Edited By: Madan Kumar

Jan 17, 2022 | 9:39 AM

ಕೊರೊನಾದ ಕಣ್ಣಾಮುಚ್ಚಾಲೆಯಿಂದಾಗಿ ಎಲ್ಲ ಉದ್ಯಮಗಳಿಗೂ ತೊಂದರೆ ಆಗಿದೆ. ನಾಳೆ ಏನಾಗಲಿದೆ ಎಂಬ ಅನಿಶ್ಚಿತತೆ ಕಾಡುತ್ತಿದೆ. ಚಿತ್ರರಂಗ ಕೂಡ ನೈಟ್​ ಕರ್ಫ್ಯೂ ಮತ್ತು ವೀಕೆಂಡ್​ ಕರ್ಫ್ಯೂ ಕಾರಣದಿಂದ ಸೊರಗಿದೆ. ಅನೇಕ ಬಿಗ್​ ಬಜೆಟ್​ ಸಿನಿಮಾಗಳು ರಿಲೀಸ್​ ದಿನಾಂಕ ಮುಂದೂಡಿಕೊಂಡಿವೆ. ಹೊಸ ರಿಲೀಸ್​ ಡೇಟ್​ಗಾಗಿ ಸ್ಟಾರ್​ ನಟರ ನಡುವೆ ಪೈಪೋಟಿ ಇದೆ. ಈ ವರ್ಷ ಆರಂಭದಲ್ಲಿ ರಿ​ಲೀಸ್​ ಆಗಬೇಕಿದ್ದ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಹಾಗೂ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಚಿತ್ರಗಳ ರಿಲೀಸ್​ ದಿನಾಂಕ ಪೋಸ್ಟ್​ಪೋನ್​ ಆಯಿತು. ಫೆ.4ರಂದು ತೆರೆಕಾಣಬೇಕಿದ್ದ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ನಟನೆಯ ‘ಆಚಾರ್ಯ’ ಚಿತ್ರದ ಬಿಡುಗಡೆ ದಿನಾಂಕವೂ ಮುಂದೂಡಲ್ಪಟ್ಟಿದೆ. ಈಗ ‘ಆಚಾರ್ಯ’ (Acharya Movie) ತಂಡ ಹೊಸ ದಿನಾಂಕದ ಮೇಲೆ ಕಣ್ಣಿಟ್ಟಿದೆ. ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಅದಲ್ಲಿ ಏ.1ರಂದು ರಿಲೀಸ್​ ಎಂಬ ಮಾಹಿತಿ ನೀಡಲಾಗಿದೆ. ಮಹೇಶ್​ ಬಾಬು (Mahesh Babu) ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಕೂಡ ಅದೇ ದಿನಾಂಕದಲ್ಲಿ ರಿಲೀಸ್​ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಈಗ ಪ್ಲ್ಯಾನ್​ ಬದಲಾದಂತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರ ಸಂಕ್ರಾಂತಿ ಹಬ್ಬಕ್ಕೆ ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕವನ್ನು ಏಪ್ರಿಲ್​ 1ಕ್ಕೆ ಮುಂದೂಡಲಾಯಿತು. ಆದರೆ ಈಗ ಅದೇ ದಿನಾಂಕದಲ್ಲಿ ‘ಆಚಾರ್ಯ’ ಬಿಡುಗಡೆ ಆಗುತ್ತಿರುವುದಾಗಿ ಹೇಳಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ‘ಸರ್ಕಾರು ವಾರಿ ಪಾಟ’ ಜೊತೆ ‘ಆಚಾರ್ಯ’ ಫೈಟ್​ ಮಾಡಲಿದೆಯೇ ಅಥವಾ ‘ಸರ್ಕಾರು ವಾರಿ ಪಾಟ’ ಸಿನಿಮಾದ ರಿಲೀಸ್​ ಡೇಟ್​ ಮುಂದೂಡಿಕೆ ಆಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮೂಲಗಳ ಪ್ರಕಾರ ‘ಸರ್ಕಾರು ವಾರಿ ಪಾಟ’ ಚಿತ್ರದ ಕೆಲಸಗಳು ಇನ್ನೂ ಬಾಕಿ ಇದೆ. ಹಾಗಾಗಿ ಅದರ ರಿಲೀಸ್​ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಆ ಕಾರಣದಿಂದಲೇ ಏ.1ಕ್ಕೆ ‘ಆಚಾರ್ಯ’ ಆಗಮಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ರಿಲೀಸ್​ ಡೇಟ್​ ಬದಲಾವಣೆ ಬಗ್ಗೆ ‘ಸರ್ಕಾರು ವಾರಿ ಪಾಟ’ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಏಪ್ರಿಲ್​ 2ರಂದು ಯುಗಾದಿ ಹಬ್ಬ ಇದೆ. ಆ ಸಮಯದಲ್ಲಿ ಸಿನಿಮಾ ಬಿಡುಗಡೆಯಾದರೆ ಒಳ್ಳೆಯ ಕಲೆಕ್ಷನ್​ ಆಗಲಿದೆ. ಹಾಗಾಗಿ ಅದು ಚಿತ್ರತಂಡಗಳ ಪಾಲಿಗೆ ಸೂಕ್ತ ಡೇಟ್​ ಆಗಿರಲಿದೆ. ಆ ಕಾರಣದಿಂದಲೇ ‘ಆಚಾರ್ಯ’ ತಂಡ ಏ.1ರ ದಿನಾಂಕದ ಮೇಲೆ ಕಣ್ಣಿಟ್ಟಿದೆ. ಈ ಚಿತ್ರದಲ್ಲಿ ರಾಮ್​ ಚರಣ್​ ಕೂಡ ನಟಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

ಕೊವಿಡ್​ ಇದ್ದರೂ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋದರಾ ಮಹೇಶ್​ ಬಾಬು? ವೈರಲ್​ ಆದ ಫೋಟೋದ ಅಸಲಿಯತ್ತೇನು?  

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada