‘ಬಿಗ್​ ಬಾಸ್​ ತಮಿಳು 5’ ವಿನ್ನರ್​ ಆದ ರಾಜು ಜಯಮೋಹನ್​; ಟ್ರೋಫಿ ಜತೆ ಸಿಕ್ಕ ಹಣ ಎಷ್ಟು?

Bigg Boss Tamil 5 winner: ಕಮಲ್​ ಹಾಸನ್​ ನಡೆಸಿಕೊಟ್ಟ ಬಿಗ್​ ಬಾಸ್​ ತಮಿಳು 5ನೇ ಸೀಸನ್​ನಲ್ಲಿ ರಾಜು ಜಯಮೋಹನ್ ವಿನ್ನರ್​ ಆಗಿದ್ದಾರೆ. ಪ್ರಿಯಾಂಕಾ ದೇಶಪಾಂಡೆ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

‘ಬಿಗ್​ ಬಾಸ್​ ತಮಿಳು 5’ ವಿನ್ನರ್​ ಆದ ರಾಜು ಜಯಮೋಹನ್​; ಟ್ರೋಫಿ ಜತೆ ಸಿಕ್ಕ ಹಣ ಎಷ್ಟು?
ಕಮಲ್ ಹಾಸನ್, ರಾಜು ಜಯಮೋಹನ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 17, 2022 | 8:06 AM

ಅನೇಕ ಭಾಷೆಗಳಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಯಶಸ್ವಿ ಆಗಿದೆ. ಹಿಂದಿ, ಕನ್ನಡದ ಬಳಿಕ ಇತರೆ ಭಾಷೆಯ ಕಿರುತೆರೆ ವಾಹಿನಿಗಳಲ್ಲೂ ಈ ರಿಯಾಲಿಟಿ ಶೋ ಜನಪ್ರಿಯತೆ ಪಡೆದುಕೊಂಡಿದೆ. ತಮಿಳಿನಲ್ಲಿ ಕಮಲ್​ ಹಾಸನ್​ ಅವರು ಬಿಗ್​ ಬಾಸ್​ ನಿರೂಪಕನಾಗಿ ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಈಗ ತಮಿಳು ಬಿಗ್​ ಬಾಸ್​ 5ನೇ ಸೀಸನ್​ (Tamil Bigg Boss 5) ಮುಕ್ತಾಯ ಆಗಿದೆ. ಕೊವಿಡ್​ ಆತಂಕದ ನಡುವೆಯೂ ಯಶಸ್ವಿಯಾಗಿ ಈ ಸೀಸನ್​​ ಪೂರ್ಣಗೊಂಡಿದೆ. ಈ ಬಾರಿಯ ವಿನ್ನರ್​ ಆಗಿ ರಾಜು ಜಯಮೋಹನ್​ ಹೊರಹೊಮ್ಮಿದ್ದಾರೆ. ಜ.16ರ ಭಾನುವಾರ ರಾತ್ರಿ ಬಿಗ್​ ಬಾಸ್​ ಫಿನಾಲೆ ಅದ್ದೂರಿಯಾಗಿ ನಡೆಯಿತು. ಕಮಲ್​ ಹಾಸನ್​ (Kamal Haasan) ಅವರು ತುಂಬ ಲವಲವಿಕೆಯಿಂದ ಶೋ ನಡೆಸಿಕೊಟ್ಟರು. ಐವರು ಫೈನಲಿಸ್ಟ್​ಗಳ ಪೈಕಿ ಅತಿ ಹೆಚ್ಚು ವೋಟ್​ ಪಡೆಯುವ ಮೂಲಕ ರಾಜು ಜಯಮೋಹನ್​ (Raju Jeyamohan) ಅವರು ಬಿಗ್​ ಬಾಸ್​ ವಿನ್ನರ್​ ಪಟ್ಟಕ್ಕೆ ಏರಿದರು. ಆ ಮೂಲಕ ಬಿಗ್​ ಬಾಸ್​ ತಮಿಳು 5ನೇ ಸೀಸನ್​ಗೆ ತೆರೆ ಎಳೆಯಲಾಗಿದೆ.

ಎಂದಿನಂತೆ ಈ ಬಾರಿಯ ಫಿನಾಲೆಯಲ್ಲೂ ಸಖತ್​ ಹಣಾಹಣಿ ಏರ್ಪಟ್ಟಿತ್ತು. ರಾಜು ಜಯಮೋಹನ್​ ಜೊತೆಗೆ ಪ್ರಿಯಾಂಕಾ ದೇಶಪಾಂಡೆ, ಪಾವನಿ ರೆಡ್ಡಿ, ನಿರೂಪ್​ ನಂದಕುಮಾರ್​ ಹಾಗೂ ಆಮಿರ್​ ಅವರು ಅಂತಿಮ ಘಟ್ಟಕ್ಕೆ ಬಂದಿದ್ದರು. ಎಲ್ಲರ ನಡುವೆ ಟಫ್​ ಸ್ಪರ್ಧೆ ಏರ್ಪಟ್ಟಿತ್ತು. ಫಿನಾಲೆ ವೇದಿಕೆ ಮೇಲೆ ರಂಗುರಂಗಿನ ಕಾರ್ಯಕ್ರಮಗಳು ಕೂಡ ನಡೆದವು. ಭರ್ಜರಿ ಮನರಂಜನೆ ನೀಡುವುದರ ಜೊತೆ ಕಮಲ್​ ಹಾಸನ್​ ಅವರು ವಿನ್ನರ್​ ಹೆಸರು ಘೋಷಿಸಿದರು. ಪ್ರಿಯಾಂಕಾ ದೇಶಪಾಂಡೆ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದಿರುವ ರಾಜು ಜಯಮೋಹನ್​ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಈ ಸೀಸನ್​ನ 2ನೇ ಸ್ಪರ್ಧಿಯಾಗಿ ರಾಜು ಜಯಮೋಹನ್​ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದರು. ತಮ್ಮ ಪ್ರತಿಭೆಯ ಮೂಲಕ ಎಲ್ಲರನ್ನೂ ಸೆಳೆದುಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಸ್ಟ್ಯಾಂಡಪ್​ ಕಾಮಿಡಿಯನ್​ ಆದ ಅವರಿಗೆ ಬಹುಬೇಗ ಜನಾಕರ್ಷಣೆ ಸಿಕ್ಕಿತು. ಮಿಮಿಕ್ರಿ ಕಲೆಯಿಂದ ಹಾಗೂ ಪಂಚಿಂಗ್​ ಡೈಲಾಗ್​ಗಳಿಂದ ಅವರು ಎಲ್ಲರನ್ನೂ ರಂಜಿಸುತ್ತಿದ್ದರು.

ಈ ಸೀಸನ್​ನಲ್ಲಿ 5 ಬಾರಿ ರಾಜು ಜಯಮೋಹನ್​ ಅವರು ನಾಮಿನೇಟ್​ ಆಗಿದ್ದರು. ಆದರೂ ಕೂಡ ಜನರ ವೋಟ್​ ಪಡೆಯುವ ಮೂಲಕ ಅವರು ಸೇವ್​ ಆಗುತ್ತಲೇ ಬಂದರು. ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಭರ್ಜರಿ ಬೆಂಬಲ ಸೂಚಿಸಿದ್ದರು. ಅಂತಿಮವಾಗಿ ಅವರಿಗೆ ವೀಕ್ಷಕರು ವಿಜಯದ ಮಾಲೆ ಹಾಕಿದ್ದಾರೆ. ಆದಷ್ಟು ಬೇಗ ಬಿಗ್​ ಬಾಸ್​ ತಮಿಳು 6ನೇ ಸೀಸನ್​ ಆರಂಭಿಸುವುದಾಗಿ ಕಮಲ್​ ಹಾಸನ್​ ಹೇಳಿದ್ದಾರೆ. ಕಿರುತೆರೆಯಲ್ಲಿ ನಟಿಸಿರುವ ರಾಜು ಜಯಮೋಹನ್​ ಅವರಿಗೆ ಈಗ ಸಿನಿಮಾ ಆಫರ್​ಗಳು ಬರಲು ಆರಂಭಿಸಿವೆ.

ಇದನ್ನೂ ಓದಿ:

ಬಿಗ್​ ಬಾಸ್​ನಲ್ಲಿ ಹೆದರಿಸೋಕೆ ಹೋಗುತ್ತಿದ್ದ ಶುಭಾ ಪೂಂಜಾ ಕೈಯಲ್ಲಿ ಈಗ ಹಾರರ್​ ಸಿನಿಮಾ

ದಕ್ಷಿಣ ಭಾರತಕ್ಕೂ ಕಾಲಿಟ್ಟ ‘ಬಿಗ್​ ಬಾಸ್​ ಒಟಿಟಿ’; ಕನ್ನಡಿಗರಲ್ಲೂ ಹೆಚ್ಚಿತು ಕುತೂಹಲ