ಬಿಗ್ ಬಾಸ್ನಲ್ಲಿ ಹೆದರಿಸೋಕೆ ಹೋಗುತ್ತಿದ್ದ ಶುಭಾ ಪೂಂಜಾ ಕೈಯಲ್ಲಿ ಈಗ ಹಾರರ್ ಸಿನಿಮಾ
ಇತ್ತೀಚೆಗೆ ಶುಭಾ ಪೂಂಜಾ ಗೆಳೆಯ ಸುಮಂತ್ ಜತೆ ಮದುವೆ ಆಗಿದ್ದಾರೆ. ಸಿಂಪಲ್ ಆಗಿ ಮದುವೆ ಆಗಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಮದುವೆಗೋಸ್ಕರ 15 ದಿನ ಮಾತ್ರ ರಜೆ ತೆಗೆದುಕೊಂಡಿದ್ದರು ಶುಭಾ ಪೂಂಜಾ.
‘ಕನ್ನಡ ಬಿಗ್ ಬಾಸ್ ಸೀಸನ್ 8’ರ ಸ್ಪರ್ಧಿ ಆಗಿ ತೆರಳುವ ಮೂಲಕ ಶುಭಾ ಪೂಂಜಾ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಅವರು ಮಕ್ಕಳಂತೆ ಇರುತ್ತಾರೆ ಎನ್ನುವ ವಿಚಾರ ಅವರ ಅಭಿಮಾನಿಗಳಿಗೆ ತಿಳಿದಿದೆ. ಶುಭಾ ಮಾಡುತ್ತಿದ್ದ ಚೇಷ್ಟೆಗಳು ಒಂದೆರಡಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಅಡಗಿ ಕುಳಿತುಕೊಂಡು ಇತರರನ್ನು ಹೆದರಿಸೋಕೆ ಅವರು ಪ್ರಯತ್ನಿಸುತ್ತಿದ್ದರು. ಆದರೆ, ಯಾರೊಬ್ಬರೂ ಭಯ ಬಿದ್ದಿರಲಿಲ್ಲ. ಈಗ ಅವರು ಸಿನಿಮಾ ಮೂಲಕ ಪ್ರೇಕ್ಷಕರನ್ನು ಭಯಬೀಳಿಸೋಕೆ ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ‘ಅಂಬುಜಾ’ ಸಿನಿಮಾ.
‘ಅಂಬುಜಾ’ ಸಿನಿಮಾ ಪಕ್ಕಾ ಹಾರರ್ ಶೈಲಿಯ ಸಿನಿಮಾ. ಈ ಚಿತ್ರದಲ್ಲಿ ರಿಪೋರ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ ಶುಭಾ ಪೂಂಜಾ. ಹಾಗಾದರೆ ಅವರು ಪ್ರೇಕ್ಷಕರನ್ನು ಹೆದರಿಸುತ್ತಾರಾ? ಆ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. ‘ನಾನು ನಟಿಸುತ್ತಿರುವ ಹೊಸ ಸಿನಿಮಾ ‘ಅಂಬುಜಾ’. ‘ಇದೊಂದು ಪಕ್ಕಾ ಹಾರರ್ ಶೈಲಿಯ ಸಿನಿಮಾ. ಈ ಚಿತ್ರದಲ್ಲಿ ನನ್ನದು ರಿಪೋರ್ಟರ್ ಪಾತ್ರ. ನಾನು ಸಿನಿಮಾದಲ್ಲಿ ಹೆದರಿಸುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಬಿಗ್ ಬಾಸ್ ಮನೆಯಲ್ಲಿ ಹೆದರಿಸೋಕೆ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ’ ಎಂದಿದ್ದಾರೆ ಅವರು.
ಶ್ರೀನಿ ಹನುಮಂತರಾಜು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ ಮಡಿವಾಳರ್ ಸಿನಿಮಾ ನಿರ್ಮಾಣ ಮಾಡುವುದರ ಜತೆಗೆ ಕಥೆ-ಸಾಹಿತ್ಯ ಬರೆದಿದ್ದಾರೆ. ಸಂತೋಷ್ ಮುಂದಿನಮನೆ ಸಂಭಾಷಣೆ ಬರೆದಿದ್ದಾರೆ. ಮುರಳೀಧರ್ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ತ್ಯಾಗರಾಜ್ ಹಿನ್ನೆಲೆ ಸಂಗೀತ, ವಿಜಯ್ ಎಂ. ಕುಮಾರ್ ಸಂಕಲನ ಚಿತ್ರಕ್ಕಿದೆ,
ರಜಿನಿ, ಕಾಮಿಡಿಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪದ್ಮಜಾರಾವ್, ನಿಶಾ ಹೆಗ್ಡೆ, ದೀಪಕ್ ಸುಬ್ರಮಣ್ಯ, ಜಗದೀಶ್ ಹಲ್ಕುಡೆ ಬೇಬಿ ಆಕಾಂಕ್ಷ, ಹಾಗೂ ಸಂದೇಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇತ್ತೀಚೆಗೆ ಶುಭಾ ಪೂಂಜಾ ಗೆಳೆಯ ಸುಮಂತ್ ಜತೆ ಮದುವೆ ಆಗಿದ್ದಾರೆ. ಸಿಂಪಲ್ ಆಗಿ ಮದುವೆ ಆಗಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಮದುವೆಗೋಸ್ಕರ 15 ದಿನ ಮಾತ್ರ ರಜೆ ತೆಗೆದುಕೊಂಡಿದ್ದರು ಶುಭಾ ಪೂಂಜಾ. ಈ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಮದುವೆ ಆದ ನಂತರ ಹಾಲಿಡೇಗೆ ಹೋಗಿಲ್ಲ. ನೇರವಾಗಿ ಸೆಟ್ಗೆ ಬಂದಿದ್ದೇನೆ. ಮದುವೆ ಕೆಲಸಕ್ಕೋಸ್ಕರ 15 ದಿನ ಮಾತ್ರ ರಜೆ ತೆಗೆದುಕೊಂಡಿದ್ದೆ’ ಎಂದಿದ್ದಾರೆ ಅವರು.
ಶುಭಾ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಸಿನಿಮಾದ ಕೆಲಸಗಳು ಯಾವಾಗ ಪೂರ್ಣಗೊಳ್ಳಲಿದೆ, ಚಿತ್ರ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ವಿವಾಹದ ಬಳಿಕ ಶುಭಾಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.
ಇದನ್ನೂ ಓದಿ:Shubha Poonja: ಸಿಂಪಲ್ ಆಗಿ ಗೆಳೆಯ ಸುಮಂತ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಟಿ ಶುಭಾ ಪೂಂಜ
Shubha Poonja: ಗೆಳೆಯ ಸುಮಂತ್ ಜತೆ ಶುಭಾ ಸಿಂಪಲ್ ಶಾದಿ; ಚಿತ್ರಗಳು ಇಲ್ಲಿವೆ
Published On - 6:30 am, Fri, 14 January 22