‘ಕೊರೊನಾ ಸುಳ್ಳು, ಇದೊಂದು ಮೆಡಿಕಲ್ ಮಾಫಿಯಾ’; ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್​​ ಹೇಳಿಕೆ

ಕೊವಿಡ್​ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ಕೊರೊನಾ ಕಾಣಿಸಿಕೊಂಡಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ ಇದು ಎಂದು ಈ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

‘ಕೊರೊನಾ ಸುಳ್ಳು, ಇದೊಂದು ಮೆಡಿಕಲ್ ಮಾಫಿಯಾ’; ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್​​ ಹೇಳಿಕೆ
ಅಗ್ನಿ ಶ್ರೀಧರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 13, 2022 | 8:33 PM

ದೇಶದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಈಗ ಮೂರನೇ ಅಲೆಯ ಭಯದಲ್ಲಿ ಎಲ್ಲರೂ ಇದ್ದಾರೆ. ಕೊರೊನಾ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಆತಂಕ ಮೂಡಿದೆ. ಅನೇಕ ಇಂಡಸ್ಟ್ರಿಗಳು ಅನಿಶ್ಚಿತತೆ ಎದುರಿಸುತ್ತಿವೆ. ಚಿತ್ರರಂಗಕ್ಕೆ ಕೊರೊನಾ ದೊಡ್ಡ ಹೊಡೆತ ನೀಡಿದೆ. ಸಿನಿಮಾ ಕೆಲಸಗಳು ನಿಂತಿವೆ. ಕೊವಿಡ್ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಅವಕಾಶದ ನಿಯಮ ಬಂದಿರುವುದರಿಂದ ಯಾವ ಚಿತ್ರಗಳೂ ರಿಲೀಸ್​ ಆಗುತ್ತಿಲ್ಲ. ಈ ಮಧ್ಯೆ, ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ (Agni Shridhar) ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದೆ. ‘ಕೊವಿಡ್​ ಇಲ್ಲ. ಇದೊಂದು ಮೆಡಿಕಲ್​ ಮಾಫಿಯಾ’ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

ಕೊವಿಡ್​ ಇದೆ ಮತ್ತು ಇಲ್ಲ ಎನ್ನುವ ಬಗ್ಗೆ ಕೊರೊನಾ ಕಾಣಿಸಿಕೊಂಡಾಗಿನಿಂದಲೂ ಚರ್ಚೆ ನಡೆಯುತ್ತಿದೆ. ಹಣ ಮಾಡಿಕೊಳ್ಳೋಕೆ ನಡೆಯುತ್ತಿರುವ ದಂಧೆ ಇದು ಎಂದು ಈ ಮೊದಲಿನಿಂದಲೂ ಹಲವರು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅಗ್ನಿ ಶ್ರೀಧರ್​​ ಅವರು ಮಾಡಿರುವ ಗಂಭೀರ ಆರೋಪ ಸಂಚಲನ ಸೃಷ್ಟಿಸಿದೆ.

‘ಕೊರೊನಾ ಎಂಬುದೇ ಸುಳ್ಳು. ಇದೊಂದು ಮೆಡಿಕಲ್​ ಮಾಫಿಯಾ. ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರಿಗೂ ನಾನು ಇದನ್ನೇ ಹೇಳಿದ್ದೇನೆ. ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸಿದ್ದಾರೆ’ ಎಂದು ಅಗ್ನಿ ಶ್ರೀಧರ್​​ ಅವರು ‘ಕ್ರೀಂ‌’‌ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

‘ನನ್ನ ಕುಟುಂಬದ ಯಾರೊಬ್ಬರೂ ಕೊವಿಡ್​ ಲಸಿಕೆ ತೆಗೆದುಕೊಂಡಿಲ್ಲ. ನನಗೆ ಗೊತ್ತಿದೆ ಶೇ. 60 ವೈದ್ಯರು ಈ ಲಸಿಕೆ ಪಡೆದಿಲ್ಲ. ಇದು ಫ್ಯಾಕ್ಟ್​. ಯಾರೂ ಕೊವಿಡ್​ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್​ ಇದೆ. ಇದನ್ನು ಹೈಲೈಟ್​ ಮಾಡಲಾಗಿದೆ. ಇದು ನನ್ನ ಅಭಿಪ್ರಾಯ’ ಎಂದು ಅಗ್ನಿ ಶ್ರೀಧರ್​​ ಹೇಳಿದ್ದಾರೆ.

ಇದನ್ನೂ ಓದಿ: ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ವೈರಲ್​ ಆಯ್ತು ವಿಡಿಯೋ

Arjun Sarja: ಶ್ರುತಿ ಹರಿಹರನ್​ ಮೀಟೂ ಪ್ರಕರಣ: ಅರ್ಜುನ್​ ಸರ್ಜಾಗೆ ಜಯ

Published On - 5:11 pm, Thu, 13 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ