AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1ನೇ ಸೀಸನ್​ಗೆ 40 ಲಕ್ಷ ರೂ, 2ನೇ ಸೀಸನ್​ಗೆ 20 ಕೋಟಿ ರೂ. ಸಂಬಳ ಪಡೆದ ‘ಪಾತಾಳ್​ ಲೋಕ್​’ ನಟ

Jaideep Ahlawat remuneration: ಇತ್ತೀಚೆಗಷ್ಟೇ ‘ಪಾತಾಳ್​ ಲೋಕ್​ 2’ ಘೋಷಣೆ ಆಯಿತು. ಅದರ ಬೆನ್ನಲ್ಲೇ ನಟ ಜೈದೀಪ್​ ಅಹ್ಲಾವತ್​ ಅವರ ಸಂಭಾವನೆ ವಿಷಯ ಭಾರಿ ಸದ್ದು ಮಾಡುತ್ತಿದೆ.

1ನೇ ಸೀಸನ್​ಗೆ 40 ಲಕ್ಷ ರೂ, 2ನೇ ಸೀಸನ್​ಗೆ 20 ಕೋಟಿ ರೂ. ಸಂಬಳ ಪಡೆದ ‘ಪಾತಾಳ್​ ಲೋಕ್​’ ನಟ
ಜೈದೀಪ್ ಅಹ್ಲಾವತ್
TV9 Web
| Edited By: |

Updated on: May 02, 2022 | 10:06 AM

Share

ಕಲಾವಿದರ ಬೇಡಿಕೆ ಹೆಚ್ಚಿದಂತೆಲ್ಲ ಅವರ ಸಂಭಾವನೆ ಮೊತ್ತ ಕೂಡ ಹೆಚ್ಚುತ್ತದೆ. ಈ ಹಿಂದೆ ಮಾಡಿದ ಕೆಲಸಗಳಿಗೆ ಭರ್ಜರಿ ಗೆಲುವು ಸಿಕ್ಕಿದ್ದರೆ ಮುಂಬರುವ ಪ್ರಾಜೆಕ್ಟ್​ಗಳಲ್ಲಿ ಸಂಬಳ ಏರಿಕೆ ಆಗುತ್ತದೆ. ಅದು ಸಹಜ. ಆದರೆ ಅದಕ್ಕೂ ಒಂದು ಲೆಕ್ಕಾಚಾರ ಇರುತ್ತದೆ. ಅಚ್ಚರಿ ಎಂದರೆ ‘ಪಾತಾಳ್​ ಲೋಕ್​’ ವೆಬ್​ ಸಿರೀಸ್​ ನಟ ಜೈದೀಪ್​ ಅಹ್ಲಾವತ್​ (Jaideep Ahlawat) ಅವರು ಲೆಕ್ಕಾಚಾರ ಮೀರಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಹೌದು, ಅವರಿಗೆ ಈಗ ಬರೋಬ್ಬರಿ 50 ಪಟ್ಟು ಸಂಬಳ ಹೆಚ್ಚಾಗಿದೆ. ಜೈದೀಪ್​ ಅಹ್ಲಾವತ್​ ಅವರು ‘ಪಾತಾಳ್​ ಲೋಕ್​’ ವೆಬ್​ ಸಿರೀಸ್​ (Paatal Lok Web Series) ಮೊದಲ ಸೀಸನ್​ನಲ್ಲಿ ಹಾತಿರಾಮ್​ ಚೌಧರಿ ಎಂಬ ಪಾತ್ರ ಮಾಡಿದ್ದರು. ಪೊಲೀಸ್​ ಅಧಿಕಾರಿಯಾಗಿ ಅವರ ನಟನೆ ಗಮನ ಸೆಳೆದಿತ್ತು. ಇಡೀ ವೆಬ್​ ಸಿರೀಸ್​ನಲ್ಲಿ ಅವರ ಪಾತ್ರವೇ ಮುಖ್ಯವಾಗಿತ್ತು. ಅದಕ್ಕಾಗಿ ಅವರು 40 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಈಗ ‘ಪಾತಾಳ್​ ಲೋಕ್​ 2’ (Paatal Lok 2) ಬರುತ್ತಿದೆ. ಈ ಎರಡನೇ ಸೀಸನ್​ಗಾಗಿ ಜೈದೀಪ್​ ಅಹ್ಲಾವತ್ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಆಗಿದೆ.

ದಿನದಿಂದ ದಿನಕ್ಕೆ ಒಟಿಟಿ ಜಗತ್ತು ಹಿರಿದಾಗುತ್ತಿದೆ. ಒಂದಕ್ಕಿಂತ ಒಂದು ಭಿನ್ನವಾದ ವೆಬ್​ ಸರಣಿಗಳು ರಿಲೀಸ್​ ಆಗುತ್ತಿವೆ. ಈ ವೆಬ್​ ಸಿರೀಸ್​ಗಳಲ್ಲಿ ಕೆಲಸ ಮಾಡುವ ಕಲಾವಿದರು ಮತ್ತು ತಂತ್ರಜ್ಞರಿಗೂ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ‘ಪಾತಾಳ್​ ಲೋಕ್​’ ನಟ ಜೈದೀಪ್​ ಅಹ್ಲಾವತ್​ ಅವರೇ ಸಾಕ್ಷಿ. ಅವರು 50 ಪಟ್ಟು ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ.

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ‘ಪಾತಾಳ್​ ಲೋಕ್​’ ವೆಬ್​ ಸಿರೀಸ್​ ಮೂಡಿಬಂದಿತ್ತು, ಅನುಷ್ಕಾ ಶರ್ಮಾ ಅವರ ‘ಕ್ಲೀನ್​​ ಸ್ಲೇಟ್​ ಫಿಲ್ಮ್ಸ್​’ ಬ್ಯಾನರ್​ ಮೂಲಕ ನಿರ್ಮಾಣ ಆಗಿತ್ತು. ಕೆಲವೇ ದಿನಗಳ ಹಿಂದೆ ‘ಅಮೇಜಾನ್​ ಪ್ರೈಂ ವಿಡಿಯೋ’ ಕಡೆಯಿಂದ ‘ಪಾತಾಳ್​ ಲೋಕ್​ 2’ ಘೋಷಣೆ ಆಯಿತು. ಅದರ ಬೆನ್ನಲ್ಲೇ ಜೈದೀಪ್​ ಅಹ್ಲಾವತ್​ ಅವರ ಸಂಭಾವನೆ ವಿಷಯ ಭಾರಿ ಸದ್ದು ಮಾಡುತ್ತಿದೆ.

ಮೊದಲ ಲಾಕ್​ಡೌನ್​ ಬಳಿಕ ಒಟಿಟಿ ಪ್ಲಾಟ್​ ಫಾರ್ಮ್​ಗಳ ಪ್ರಭಾವ ಹೆಚ್ಚಿತು. ಮನೆಯಲ್ಲೇ ಕುಳಿತು ಹೊಸ ಬಗೆಯ ಮನರಂಜನೆ ಪಡೆಯುವುದಕ್ಕೆ ಜನರು ಹೊಂದಿಕೊಂಡರು. ಹಾಗಾಗಿ ಒಟಿಟಿ ಪ್ಲಾಟ್​ಫಾರ್ಮ್​ಗಳ ವ್ಯಾಪಿ ಹಿಗ್ಗುತ್ತಾ ಹೋಯಿತು. ಈಗಂತೂ ಒಟಿಟಿ ಸಂಸ್ಥೆಗಳ ನಡುವೆ ಭರ್ಜರಿ ಪೈಪೋಟಿ ಇದೆ. ಜನರನ್ನು ಆಕರ್ಷಿಸಲು ಬಗೆಬಗೆಯ ವೆಬ್​ ಸೀರಿಸ್​ಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಫೇಮಸ್​ ಆಗಿರುವ ವೆಬ್​ ಸರಣಿಗಳಿಗೆ ಸೀಕ್ವೆಲ್​ಗಳು ಕೂಡ ಸಿದ್ಧವಾಗುತ್ತಿವೆ. ಆ ಪೈಕಿ ‘ಪಾತಾಳ್​ ಲೋಕ್​ 2’ ಹೆಚ್ಚು ಕೌತುಕ ಮೂಡಿಸಿದೆ.

ಕ್ರೈಂ ಥ್ರಿಲ್ಲರ್​ ಕಥೆಯನ್ನು ‘ಪಾತಾಳ್​ ಲೋಕ್’ ವೆಬ್ ಸರಣಿ ಹೊಂದಿತ್ತು. ಜೈದೀಪ್​ ಅಹ್ಲಾವತ್​ ಮಾತ್ರವಲ್ಲದೇ ಅಭಿಷೇಕ್​ ಬ್ಯಾನರ್ಜಿ, ನೀರಜ್​ ಮುಂತಾದವರು ಗಮನಾರ್ಹ ಅಭಿನಯ ನೀಡಿದ್ದರು. ಎಲ್ಲದರ ಪರಿಣಾಮವಾಗಿ ‘ಪಾತಾಳ್​ ಲೋಕ್’ ಸೂಪರ್​ ಹಿಟ್​ ಆಗಿತ್ತು. ಈಗ ‘ಪಾತಾಳ್​ ಲೋಕ್ 2’ ವೆಬ್​ ಸರಣಿಯಲ್ಲಿ ಯಾವ ಕಥೆಯನ್ನು ಹೇಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಕಾತರ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ

ತಾವೇ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ; ಅಂಥದ್ದೇನಾಯ್ತು?

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?