Corbevax Vaccine: ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ ಕಾರ್ಬ್​ವ್ಯಾಕ್ಸ್​ ಲಭ್ಯ; ಬೆಲೆ, ವಿಶೇಷತೆಗಳು ಹೀಗಿವೆ

| Updated By: ಸುಷ್ಮಾ ಚಕ್ರೆ

Updated on: Aug 12, 2022 | 8:45 AM

ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್​ನ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್​​ವ್ಯಾಕ್ಸ್ ಅನ್ನು ಅನುಮೋದಿಸಲಾಗಿದೆ.

Corbevax Vaccine: ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ ಕಾರ್ಬ್​ವ್ಯಾಕ್ಸ್​ ಲಭ್ಯ; ಬೆಲೆ, ವಿಶೇಷತೆಗಳು ಹೀಗಿವೆ
ಕಾರ್ಬ್​ವ್ಯಾಕ್ಸ್​ ಲಸಿಕೆ
Follow us on

ನವದೆಹಲಿ: ಇತ್ತೀಚೆಗೆ ಅನುಮೋದಿಸಲಾದ ಬಯೋಲಾಜಿಕಲ್ ಇ ಲಿಮಿಟೆಡ್ (ಬಿಇ)ನ ಕೊವಿಡ್ ಲಸಿಕೆಯಾದ ಕಾರ್ಬ್​​ವ್ಯಾಕ್ಸ್ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ (ಆಗಸ್ಟ್ 12) ಲಭ್ಯವಾಗಲಿದೆ. ಈ ಕಾರ್ಬ್​ವ್ಯಾಕ್ಸ್​ ಬೂಸ್ಟರ್​ ಡೋಸ್​ COWIN ಆ್ಯಪ್​ನಲ್ಲಿ ಲಭ್ಯವಿರಲಿದೆ. ಕೋವ್ಯಾಕ್ಸಿನ್ (Covaxin) ಅಥವಾ ಕೋವಿಶೀಲ್ಡ್​ನ (Covishield) ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಾದವರಿಗೆ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್​​ವ್ಯಾಕ್ಸ್ (Corbevax) ಅನ್ನು ಅನುಮೋದಿಸಲಾಗಿದೆ.

ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಕೊವಿಡ್-19 ವರ್ಕಿಂಗ್ ಗ್ರೂಪ್ ಇತ್ತೀಚೆಗೆ ಮಾಡಿದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಬ್​ವ್ಯಾಕ್ಸ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಜೂನ್ 4ರಂದು 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ COVID-19 ಬೂಸ್ಟರ್ ಡೋಸ್ ಆಗಿ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸಿದ ನಂತರ ಈ ಅನುಮೋದನೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಕೊವಿಡ್ ಲಸಿಕೆ ನೀಡಿಕೆಯಲ್ಲಿ 200 ಕೋಟಿ ಮೈಲುಗಲ್ಲು ದಾಟಿದ ಭಾರತ

5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯಾಲಾಜಿಕಲ್ ಇ (Biological E) ಸಂಸ್ಥೆಯ ಕಾರ್ಬ್​ವ್ಯಾಕ್ಸ್​ (Corbevax) ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಕೊರೊನಾ ಲಸಿಕೆಯ ಅನುಮೋದನೆಗಾಗಿ ವಿಷಯ ತಜ್ಞರ ಸಮಿತಿಗೆ ಕಂಪನಿಯಿಂದ ಡೇಟಾವನ್ನು ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೆ ವಿಷಯ ತಜ್ಞರ ಸಮಿತಿಯು 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್​ವ್ಯಾಕ್ಸ್‌ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಕಾರ್ಬ್​ವ್ಯಾಕ್ಸ್​ ಲಸಿಕೆಯನ್ನು 5ರಿಂದ 12 ವರ್ಷದೊಳಗಿನವರಿಗಾಗಿ ತಯಾರಿಸಲಾಗಿತ್ತು.
ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ (ಬಿಇ) ಇದುವರೆಗೆ 10 ಕೋಟಿ ಡೋಸ್ ಕಾರ್ಬ್​ವ್ಯಾಕ್ಸ್ ಅನ್ನು ಕೇಂದ್ರಕ್ಕೆ ತಲುಪಿಸಿದೆ. 12ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಬೂಸ್ಟರ್ ಡೋಸ್ ಲಸಿಕೆಯನ್ನು ಪ್ಯಾನ್-ಇಂಡಿಯಾ ರೋಲ್-ಔಟ್ ಮಾರ್ಚ್ 16ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ ಸುಮಾರು 7 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ: Corbevax Vaccine: ಕೊವಿಡ್ ಹೆಚ್ಚಳದ ನಡುವೆ 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್​ ಬಳಕೆಗೆ ಶಿಫಾರಸು

ಖಾಸಗಿ ಕೊವಿಡ್-19 ಲಸಿಕೆ ಕೇಂದ್ರಗಳಿಗೆ ಕಾರ್ಬ್​ವ್ಯಾಕ್ಸ್​ನ ಬೆಲೆ ಸರಕು ಮತ್ತು ಮಾರಾಟ ತೆರಿಗೆಯನ್ನು ಒಳಗೊಂಡಂತೆ 250 ರೂ. ಇತ್ತು. ತೆರಿಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳು ಸೇರಿದಂತೆ ಈ ಲಸಿಕೆಯ ಬೆಲೆ 400 ರೂ. ಆಗಿತ್ತು. ಕಾರ್ಬ್​ವ್ಯಾಕ್ಸ್​ ಆಗಸ್ಟ್ 12ರಿಂದ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಕೋವಿನ್ ಅಪ್ಲಿಕೇಶನ್‌ನಲ್ಲಿ ಬೂಸ್ಟರ್ ಡೋಸ್ ಆಗಿ ಲಭ್ಯವಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ