Covid News ಕೇರಳದಲ್ಲಿ ಸೋಂಕಿತರು ಮ್ಯೂಸಿಕ್ ಕೇಳಬಾರದು-ಪುಸ್ತಕ ಓದಬಾರದಂತೆ!

| Updated By: ಸಾಧು ಶ್ರೀನಾಥ್​

Updated on: Jun 25, 2020 | 12:53 PM

ದೇಶದಲ್ಲಿ ಕೊರೊನಾ ಸೋಂಕು ಎಗ್ಗು ಸಿಗ್ಗಿಲ್ಲದೆ ಕಂಡ ಕಂಡವ್ರ ದೇಹ ಹೊಕ್ಕುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಡೆಡ್ಲಿ ವೈರಸ್ ವ್ಯಾಪಿಸ್ತಿದ್ದು, 4 ಲಕ್ಷದ 73 ಸಾವಿರದ 105 ಜನರಿಗೆ ಸೋಂಕು ತಗುಲಿದೆ. ಇನ್ನು ಇದುವರೆಗೆ ಹೆಮ್ಮಾರಿ ವೈರಸ್​ಗೆ ದೇಶದಲ್ಲಿ 14 ಸಾವಿರದ 894 ಜನರು ಬಲಿಯಾಗಿದ್ದಾರೆ. ಸೋಂಕಿತರ ಪೈಕಿ 2 ಲಕ್ಷದ 71 ಸಾವಿರದ 697 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ 1 ಲಕ್ಷದ 86ಸಾವಿರದ 514 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ […]

Covid News  ಕೇರಳದಲ್ಲಿ ಸೋಂಕಿತರು ಮ್ಯೂಸಿಕ್ ಕೇಳಬಾರದು-ಪುಸ್ತಕ ಓದಬಾರದಂತೆ!
ಪ್ರಾತಿನಿಧಿಕ ಚಿತ್ರ
Follow us on

ದೇಶದಲ್ಲಿ ಕೊರೊನಾ ಸೋಂಕು ಎಗ್ಗು ಸಿಗ್ಗಿಲ್ಲದೆ ಕಂಡ ಕಂಡವ್ರ ದೇಹ ಹೊಕ್ಕುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಡೆಡ್ಲಿ ವೈರಸ್ ವ್ಯಾಪಿಸ್ತಿದ್ದು, 4 ಲಕ್ಷದ 73 ಸಾವಿರದ 105 ಜನರಿಗೆ ಸೋಂಕು ತಗುಲಿದೆ. ಇನ್ನು ಇದುವರೆಗೆ ಹೆಮ್ಮಾರಿ ವೈರಸ್​ಗೆ ದೇಶದಲ್ಲಿ 14 ಸಾವಿರದ 894 ಜನರು ಬಲಿಯಾಗಿದ್ದಾರೆ. ಸೋಂಕಿತರ ಪೈಕಿ 2 ಲಕ್ಷದ 71 ಸಾವಿರದ 697 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ 1 ಲಕ್ಷದ 86ಸಾವಿರದ 514 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ 16,000 ಕೇಸ್
ದೇಶದ ಎಲ್ಲಾ ರಾಜ್ಯಗಳಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 16 ಸಾವಿರದ 922 ಜನರಿಗೆ ಸೋಂಕು ತಗುಲಿದೆ. ಅದ್ರಲ್ಲೂ ಮಹಾರಾಷ್ಟ್ರದಲ್ಲಿ ವೈರಸ್ ಅಬ್ಬರಿಸ್ತಿದ್ದು, ಒಂದೇ ದಿನ 3 ಸಾವಿರದ 890 ಜನರಿಗೆ ಪಾಸಿಟಿವ್ ಬಂದಿದೆ. ಇದೇ ವೇಳೆ ಮಹಾರಾಷ್ಟ್ರ ಒಂದ್ರಲ್ಲೇ 208 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇದ್ರ ಜೊತೆಗೆ ದೆಹಲಿ, ತಮಿಳುನಾಡು ಹಾಗೂ ಗುಜರಾತ್​ನಲ್ಲೂ ಕೊರೊನಾ ಅಟ್ಟಹಾಸ ಮೆರಯುತ್ತಿದೆ.

ಜುಲೈ 31ವರೆಗೆ ಲಾಕ್​ಡೌನ್
ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್​ಡೌನ್ ಮುಂದುವರಿಸಿ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಸದ್ಯ ಜಾರಿಯಲ್ಲಿದ್ದ ಲಾಕ್​ಡನ್ ಜೂನ್ 30ಕ್ಕೆ ಅಂತ್ಯವಾಬೇಕಿತ್ತು. ಆದ್ರೆ ಕೊರೊನಾ ಪ್ರಕರಣ ಹೆಚ್ಚಳವಾಗ್ತಿರೋ ಹಿನ್ನೆಲೆಯಲ್ಲಿ ಲಾಕ್​ಡೌನ್ ಜುಲೈ 31ರವರೆಗೆ ಮುಂದುವರಿಸಲಾಗಿದೆ.. ಸದ್ಯ ರಾಜ್ಯದಲ್ಲಿ 15ಸಾವಿರದ 173 ಜನರಿಗೆ ಸೋಂಕು ತಗುಲಿದೆ. ಇದುವರೆಗೆ ಕೊರೊನಾಗೆ 591 ಜನರು ಮೃತಪಟ್ಟಿದ್ದಾರೆ.

ಇದೆಂಥಾ ವಿಚಿತ್ರ ನಿಯಮ?
ಕೊರೊನಾ ಪೀಡಿತರಾಗಿ ಆಸ್ಪತ್ರೆ ಸೇರಿರೋ ಸೋಂಕಿತರಿಗೆ ಮ್ಯೂಸಿಕ್ ಕೇಳಿಸಿಕೊಳ್ಳೋದು ಹಾಗೂ ಪುಸ್ತಕಗಳನ್ನು ಓದೋದಕ್ಕೆ ಅವಕಾಶ ನಿರಾಕರಿಸಲಾಗಿದೆ. ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದ್ದು, ಸೊಂಕಿತರು ಮ್ಯೂಸಿಕ್ ಕೇಳಬಾರದು ಹಾಗೂ ಪುಸ್ತಕಗಳನ್ನೂ ಓದಬಾರದು ಅಂತಾ ಆಡಳಿತ ಮಂಡಳಿ ವಿಚಿತ್ರ ಫರ್ಮಾನು ಹೊರಡಿಸಿದೆ. ಈ ನಿರ್ಧಾರದ ಬಗ್ಗೆ ಸೋಂಕಿತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ
ಭಾರತದ ಚೀನಾ ಗಡಿ ವಿವಾದ ಹಾಗೂ ಕೊರೊನಾ ಬಿಕ್ಕಟ್ಟು ಸಂಬಂಧ ರಾಜ್ಯಮಟ್ಟದ ಕಾಂಗ್ರೆಸ್ ಅಧ್ಯಕ್ಷರ ಜೊತೆಗೆ ರಾಹುಲ್ ಗಾಂಧಿ ಚರ್ಚೆ ಮಾಡಿದ್ರು. ಗಡಿ ವಿವಾದ ಹಾಗೂ ಕೊರೊನಾ ಸೋಂಕು ಹರಡೋದನ್ನು ತಡೆಗಟ್ಟೋ ವಿಚಾರದಲ್ಲಿ ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಿಲ್ಲ ಅಂತಾ ರಾಹುಲ್ ಕಿಡಿಕಾರಿದ್ರು. ಈ ಎರಡೂ ವಿಚಾರಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.

ಅಂತರಕ್ಕೂ ಬಂತು ಯಂತ್ರ!
ಕೊರೊನಾ ಸೋಂಕು ನಿಯಂತ್ರಿಸೋ ನಿಟ್ಟಿನಲ್ಲಿ ದೈಹಿಕ ಅಂತರ ಕಾಪಾಡಿ ಅಂತಾ ಸರ್ಕಾರ ಎಷ್ಟು ಹೇಳಿದ್ರೂ ಜನರು ಕ್ಯಾರೇ ಮಾಡ್ತಿರಲಿಲ್ಲ. ಹೀಗಾಗಿ ಮಧ್ಯಪ್ರದೇಶದ ಇಂದೋರ್ ಏರ್​ಪೋರ್ಟ್​ನಲ್ಲಿ ಹೊಸ ಐಡಿಯಾ ಮಾಡಲಾಗಿದೆ. ಏರ್​ಪೋರ್ಟ್​ಗೆ ಬರೋ ಪ್ರಯಾಣಿಕರ ನಡುವೆ ಅಂತರ ಕಾಪಾಡೋ ನಿಟ್ಟಿನಲ್ಲಿ ಎಚ್ಚರಿಸಲು ಸೆನ್ಸಾರ್ ಆಧಾರಿತ ಮಷೀನ್ ಅಳವಡಿಸಲಾಗಿದೆ.

ಕೊರೊನಾ ನಡುವೆ ಭೂಕಂಪನ
ದೇಶಾದ್ಯಂತ ಕೊರೊನಾ ಹೆಮ್ಮಾರಿ ಅಟ್ಟಹಾಸ ಮರಯುತ್ತಿದೆ. ಇದ್ರ ಜೊತೆಯಲ್ಲೇ ಉತ್ತರ ಭಾರತದ ಅಲ್ಲಲ್ಲಿ ಭುಕಂಪಗಳು ನಡೀತಿವೆ. ದೆಹಲಿ ಗುಜರಾತ್ ಬಳಿಕ ಇದೀಗ ಮಿಜೋರಾಮ್ ಹಾಗೂ ನಾಗಾಲ್ಯಾಂಡ್​ನಲ್ಲೂ ಭೂಮಿ ಕಂಪಿಸಿದೆ. ನಾಗಾಲ್ಯಾಂಡ್​ನಲ್ಲಿ ಉಂಟಾದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8ಷ್ಟು ದಾಖಲಾಗಿದೆ. ಇನ್ನು ಮಿಜೋರಾಮ್​ನಲ್ಲೂ ಭೂಕಂಪದ ತೀವ್ರತೆ 4.5ರಷ್ಟಿತ್ತು.

ಜೇಬು ಸುಡುತ್ತಿದೆ ಇಂ‘ಧನ’
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ ಎರಡು ವಾರಗಳಿಂದ ಏರುತ್ತಲೇ ಇದೆ. ಇಂದು ಮತ್ತೆ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪ್ರೆಟೋಲ್ ಬೆಲೆ 16 ಪೈಸೆ ಏರಿಕೆಯಾದ್ರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 14 ಪೈಸೆಯಷ್ಟು ಏರಿಕೆಯಾಗಿದೆ.

ಡೀಸೆಲ್ ದಾಖಲೆ ಬೆಲೆ
ಪೆಟ್ರೋಲ್​ಗಿಂತ ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಮೊದಲ ಬಾರಿಗೆ ಪೆಟ್ರೋಲ್ ಬೆಲೆಗಿಂತಾ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 79 ರೂಪಾಯಿ 92 ಪೈಸೆ ಇದ್ದರೆ, ಡೀಸೆಲ್ ಬೆಲೆ 80 ರೂಪಾಯಿ 2 ಪೈಸೆಗೆ ಏರಿಕೆಯಾಗಿದೆ. ಮಾರ್ಚ್ 14ರಂದು ಕೇಂದ್ರ ಸರ್ಕಾರ ಸುಂಕ ಹೆಚ್ಚಳ ಮಾಡಿದ್ದೇ ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ.

Published On - 12:34 pm, Thu, 25 June 20