AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಇಂದಿನಿಂದ ಹೊಸ ಹಂತದ ಲಸಿಕೆ ಅಭಿಯಾನ; 15-18 ವರ್ಷದವರಿಗೆ ಕೊವ್ಯಾಕ್ಸಿನ್ ವ್ಯಾಕ್ಸಿನ್​​ ನೀಡಿಕೆ ಪ್ರಾರಂಭ

ಸದ್ಯ ದೇಶಾದ್ಯಂತ ಇರುವ ಕೊವಿಡ್​ 19 ಲಸಿಕಾ ಕೇಂದ್ರಗಳಲ್ಲಿಯೇ ಇಂದಿನಿಂದ 15-18ವರ್ಷದವರೆಗಿನವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತದೆ. ಆದರೆ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರವನ್ನೂ ನಿರ್ಮಿಸಿಕೊಳ್ಳಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಇಂದಿನಿಂದ ಹೊಸ ಹಂತದ ಲಸಿಕೆ ಅಭಿಯಾನ; 15-18 ವರ್ಷದವರಿಗೆ ಕೊವ್ಯಾಕ್ಸಿನ್ ವ್ಯಾಕ್ಸಿನ್​​ ನೀಡಿಕೆ ಪ್ರಾರಂಭ
ಕೊವ್ಯಾಕ್ಸಿನ್​
TV9 Web
| Updated By: Lakshmi Hegde|

Updated on:Jan 03, 2022 | 7:47 AM

Share

ದೇಶದಲ್ಲಿ ಇಂದು ಮತ್ತೊಂದು ಹಂತದ ಕೊವಿಡ್​ 19 ಲಸಿಕೆ ಅಭಿಯಾನ ಶುರುವಾಗುತ್ತಿದೆ. 15-18ವರ್ಷದವರಿಗೆ ಇಂದಿನಿಂದ ಕೊವ್ಯಾಕ್ಸಿನ್​​ ಲಸಿಕೆ (Covaxin Vaccine) ನೀಡಲು ದೇಶಾದ್ಯಂತ ಸಿದ್ಧತೆಗಳು ನಡೆದಿವೆ. ಜ.1ರಿಂದಲೇ ಕೊವಿನ್​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಹೀಗಾಗಿ ಭಾನುವಾರ ಸಂಜೆ ಹೊತ್ತಿಗೆ ಕೊವಿಡ್​ 19 ಲಸಿಕೆಗಾಗಿ ಕೊವಿನ್​ ಆ್ಯಪ್(CoWin Portal)​​ನಲ್ಲಿ 6.35 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನವರಿಗೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ಮಾತ್ರ ನೀಡಲಾಗುತ್ತದೆ. ಯಾಕೆಂದರೆ 15-18 ವಯಸ್ಸಿನವರಿಗೆ ತುರ್ತು ಬಳಕೆಗೆ ಕೊವ್ಯಾಕ್ಸಿನ್​ ಬಿಟ್ಟು ಇನ್ಯಾವುದೇ ಲಸಿಕೆಗೂ ಅನುಮೋದನೆ ಸಿಕ್ಕಿಲ್ಲ. ಇಂದಿನಿಂದ ಶುರುವಾಗುತ್ತಿರುವ ಹೊಸ ಹಂತದ ಲಸಿಕಾ ಅಭಿಯಾನಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ, ಅಲ್ಲಿನ ಜನಸಂಖ್ಯೆ ಆಧಾರದ ಮೇಲೆ ಹೆಚ್ಚುವರಿಯಾಗಿ ಕೊವ್ಯಾಕ್ಸಿನ್​ ಲಸಿಕೆ ಕಳಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.   

15-18 ವರ್ಷದವರಿಗಿನ ಎಲ್ಲರೂ ಕೊವಿಡ್​ 19 ಲಸಿಕೆಯನ್ನು ಈ ಹಂತದಲ್ಲಿ ಪಡೆಯಬಹುದು. 15 ವರ್ಷವಾಗಿದೆಯಾ ಎಂಬ ಬಗ್ಗೆ ಯಾವುದೇ ಗೊಂದಲ ಬೇಡ. 2007ನೇ ಇಸ್ವಿಯಲ್ಲಿ ಜನಿಸಿದ ಎಲ್ಲರೂ ಕೊರೊನಾ ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.  ಇದೀಗ ವಯಸ್ಕರಿಗೆ ನೀಡಲಾಗುತ್ತಿರುವ ಕೇಂದ್ರದಲ್ಲೇ ಮಕ್ಕಳಿಗೆ ಕೊವ್ಯಾಕ್ಸಿನ್ ನೀಡಿದರೆ ಸ್ವಲ್ಪ ಗೊಂದಲ ಆಗಬಹುದು. ಹಾಗಾಗಿ ಅವರಿಗೆ ಕೊವಿಡ್​ 19 ಲಸಿಕೆ ನೀಡಲು ಪ್ರತ್ಯೇಕ ತಂಡ ಇರಬೇಕು. 15-18 ವರ್ಷದವರು ಪ್ರತ್ಯೇಕ ಸಾಲುಗಳಲ್ಲಿಯೇ ನಿಲ್ಲಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಎಲ್ಲಿ ಲಸಿಕೆ ಪಡೆಯಬಹದು ಸದ್ಯ ದೇಶಾದ್ಯಂತ ಇರುವ ಕೊವಿಡ್​ 19 ಲಸಿಕಾ ಕೇಂದ್ರಗಳಲ್ಲಿಯೇ ಇಂದಿನಿಂದ 15-18ವರ್ಷದವರೆಗಿನವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತದೆ. ಆದರೆ ಮಕ್ಕಳಿಗಾಗಿ ಪ್ರತ್ಯೇಕ ಕೇಂದ್ರವನ್ನೂ ನಿರ್ಮಿಸಿಕೊಳ್ಳಬಹುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ, ಸ್ಥಳೀಯ ಆಡಳಿತಗಳು ಎಲ್ಲಿ ವ್ಯವಸ್ಥೆ ಮಾಡಿವೆ ಎಂಬುದನ್ನು ಅವರೇ ತಿಳಿಸುತ್ತಾರೆ. ವಿವಿಧ ವಯೋಮಾನಗಳವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಲ್ಲಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಈಗಿರುವ ಕೊರೊನಾ ಲಸಿಕೆ ಕೇಂದ್ರದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕ್ಯೂ ಮಾಡಲು ಹೇಳಲಾಗಿದೆ.   ಇನ್ನುಳಿದಂತೆ ವಯಸ್ಕರ ಕೊವಿಡ್​ 19 ಲಸಿಕೆ ಅಭಿಯಾನಕ್ಕಾಗಿ ಮಾಡಲಾದಂಥ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ.

ಇದನ್ನೂ ಓದಿ: ನವೀಕರಣಗೊಂಡ ಕಾಶಿ ವೈಭವ ನೋಡಲು ಹೊಸವರ್ಷದ ಮೊದಲ ದಿನ 5 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ; ಶಿವರಾತ್ರಿಯಲ್ಲೂ ಇಷ್ಟು ಜನರು ಬಂದಿರಲಿಲ್ಲ !

Published On - 7:33 am, Mon, 3 January 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್