AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pegasus Spyware: ಪೆಗಾಸಸ್​ ಬೆನ್ನುಹತ್ತಿರುವ ಶಂಕೆಯಿದ್ದರೆ ಜ 7ರ ಒಳಗೆ ಸಂಪರ್ಕಿಸಿ: ಸುಪ್ರೀಂಕೋರ್ಟ್​ ರೂಪಿಸಿರುವ ಆಯೋಗ ಸೂಚನೆ

ತಮ್ಮ ಮೊಬೈಲ್​ಗೆ ಪೆಗಾಸಸ್ ಸ್ಪೈವೇರ್​ ಬಂದಿದೆ ಎಂದು ಅನುಮಾನಿಸಲು ಸಮರ್ಪಕ ಕಾರಣಗಳು ಇರುವ ಭಾರತದ ಯಾವುದೇ ನಾಗರಿಕ ಸಮಿತಿಯ ಎದುರು ತನ್ನ ಅಹವಾಲು ಸಲ್ಲಿಸಬಹುದು ಎಂದು ಸಮಿತಿಯು ಸೂಚಿಸಿದೆ.

Pegasus Spyware: ಪೆಗಾಸಸ್​ ಬೆನ್ನುಹತ್ತಿರುವ ಶಂಕೆಯಿದ್ದರೆ ಜ 7ರ ಒಳಗೆ ಸಂಪರ್ಕಿಸಿ: ಸುಪ್ರೀಂಕೋರ್ಟ್​ ರೂಪಿಸಿರುವ ಆಯೋಗ ಸೂಚನೆ
TV9 Web
| Edited By: |

Updated on: Jan 03, 2022 | 6:00 AM

Share

ದೆಹಲಿ: ಪೆಗಾಸಸ್ ಸ್ಪೈವೇರ್ ಮೂಲಕ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂಬ ಅನುಮಾನ ಇರುವವರು ತಮ್ಮನ್ನು ಜನವರಿ 7ರ ಮಧ್ಯಾಹ್ನದ ಒಳಗೆ ಸಂಪರ್ಕಿಸಬೇಕು ಎಂದು ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯು ಸೂಚಿಸಿದೆ. ತಮ್ಮ ಮೊಬೈಲ್​ಗೆ ಪೆಗಾಸಸ್ ಸ್ಪೈವೇರ್​ ಬಂದಿದೆ ಎಂದು ಅನುಮಾನಿಸಲು ಸಮರ್ಪಕ ಕಾರಣಗಳು ಇರುವ ಭಾರತದ ಯಾವುದೇ ನಾಗರಿಕ ಸಮಿತಿಯ ಎದುರು ತನ್ನ ಅಹವಾಲು ಸಲ್ಲಿಸಬಹುದು ಎಂದು ಸಮಿತಿಯು ಸೂಚಿಸಿದೆ. ನಿಮ್ಮ ಮೊಬೈಲ್​ ಪರಿಶೀಲಿಸಲು ತಾಂತ್ರಿಕ ಸಮಿತಿಗೆ ಅವಕಾಶ ಕೊಡುತ್ತೀರಾ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಮೂವರು ಸದಸ್ಯರ ಸಮಿತಿಯು ಕೆಲ ಪ್ರಮುಖ ದಿನ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲಿ ಸ್ಪಷ್ಟಪಡಿಸಿದೆ. ಜನರು ನೀಡುವ ಕಾರಣಗಳು ಪರಿಶೀಲನೆಗೆ ಅರ್ಹ ಎನಿಸಿದರೆ ಸಮಿತಿಯು ಫೋನ್​ಗಳನ್ನು ತಪಾಸಣೆಗೆ ನೀಡುವಂತೆ ವಿನಂತಿಸಬಹುದು

ಸಮಿತಿಯು ಅರ್ಜಿದಾರರು ಮತ್ತು ಅವರ ವಕೀಲರಿಗೆ ಪೆಗಾಸಸ್ ಸ್ಪೈವೇರ್​ನಿಂದ ಕಣ್ಗಾವಲು ಇರಿಸಲಾಗಿದೆ ಎಂಬ ಅನುಮಾನವಿದ್ದರೆ ಅವರ ಸಾಧನಗಳನ್ನು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಸಮಿತಿಗೆ ಒಪ್ಪಿಸಬೇಕು ಎಂದು ಸಮಿತಿಯು ಈ ಹಿಂದೆ, ನವೆಂಬರ್ 30ರಂದು ತಿಳಿಸಿತ್ತು.

ಸಮಿತಿಯಲ್ಲಿ ಗಾಂಧಿನಗರ ನ್ಯಾಷನಲ್ ಫೊರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿಯ ಡೀನ್ ಡಾ.ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಡಾ.ಪಿ.ಪ್ರಭಾಕರನ್, ಐಐಟಿ ಬಾಂಬೆಯ ಪ್ರಾಧ್ಯಾಪಕ ಡಾ.ಅಶ್ವಿನ್ ಅನಿಲ್ ಗುಮಾಸ್ತೆ ಈ ಸಮಿತಿಯಲ್ಲಿದ್ದಾರೆ. ಈ ಸಮಿತಿಯ ಕಾರ್ಯಚಟುವಟಿಕೆಗಳನ್ನು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಆರ್​.ವಿ.ರವೀಂದ್ರನ್ ಪರಿಶೀಲಿಸುತ್ತಿದ್ದಾರೆ.

ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಅಧಿಕಾರಿಗಳು ಹಾಗೂ ಕೆಲ ಕೇಂದ್ರ ಸಚಿವರ ಮೇಲೆ ಕಣ್ಗಾವಲು ಇರಿಸಲಲು ಪೆಗಾಸಸ್ ಬಳಕೆಯಾಗುತ್ತಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಕೆಲ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಈ ಸಂಬಂಧ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್​ ಮೆಟ್ಟಿಲು ಏರಿದ್ದರು. ಅಕ್ಟೋಬರ್ 27ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಮೂವರು ಸದಸ್ಯರಿರುವ ತಾಂತ್ರಿಕ ಸಮಿತಿ ಸಮತಿ ರಚಿಸಿತ್ತು. ಈ ಸಮಿತಿಯ ಕಾರ್ಯನಿರ್ವಹಣೆಯ ಉಸ್ತುವಾರಿ ಗಮನಿಸುವಂತೆ ನ್ಯಾಯಮೂರ್ತಿ ರವೀಂದ್ರನ್ ಅವರಿಗೆ ಸೂಚಿಸಿತ್ತು.

ಇದನ್ನೂ ಓದಿ: Pegasus Spyware: ದೇಶಕ್ಕಿಂತ ಪ್ರಧಾನಿ ಮೋದಿ ದೊಡ್ಡವರೇನಲ್ಲ’; ಪೆಗಾಸಸ್ ಕುರಿತ ಸುಪ್ರೀಂ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ ಇದನ್ನೂ ಓದಿ: ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಹಿನ್ನಡೆ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ