Covid 19 Vaccine: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ತಾತ್ಕಾಲಿಕ ಸ್ಥಗಿತ.. ಕೊವಿನ್​ ಆ್ಯಪ್​ ದೋಷವೇ ಕಾರಣವಾಯ್ತಾ?

| Updated By: Lakshmi Hegde

Updated on: Feb 27, 2021 | 3:10 PM

CoWin App: ಸದ್ಯ ಕೊವಿನ್​ ಆ್ಯಪ್​ನಲ್ಲಿ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿಲ್ಲ. ಇನ್ನು ಮುಂದಿನ ಹಂತದಲ್ಲಿ ಅದನ್ನು ಹೇಗೆ ಬದಲಾವಣೆ ಮಾಡಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Covid 19 Vaccine: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ತಾತ್ಕಾಲಿಕ ಸ್ಥಗಿತ.. ಕೊವಿನ್​ ಆ್ಯಪ್​ ದೋಷವೇ ಕಾರಣವಾಯ್ತಾ?
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ (Corona Vaccination) ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಆರೋಗ್ಯ ಸಿಬ್ಬಂದಿ, ಕೊರೊನಾ ಫ್ರಂಟ್​ಲೈನ್​ ವಾರಿಯರ್ಸ್​ ಹಾಗೂ ಆದ್ಯತೆಯ ಮೇರೆಗೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಕೊರೊನಾ ಲಸಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು (ಫೆಬ್ರವರಿ 27) ಮತ್ತು ನಾಳೆ (ಫೆಬ್ರವರಿ 28) ಕೊರೊನಾ ಲಸಿಕೆ ವಿತರಣೆಯನ್ನು ನಿಲ್ಲಿಸಿರುವುದಾಗಿ ಸರ್ಕಾರ ತಿಳಿಸಿದೆ.

ದೇಶಾದ್ಯಂತ ಫೆಬ್ರವರಿ 27 ಮತ್ತು 28ರಂದು ಲಸಿಕೆ ವಿತರಣೆ ನಡೆಯುವುದಿಲ್ಲ. ಕೊರೊನಾ ಲಸಿಕೆ ಕುರಿತಾದ ಮಾಹಿತಿಗಳನ್ನು ನೀಡುವ ಕೊವಿನ್​ ತಂತ್ರಾಂಶವನ್ನು (CoWin App) ಅಪ್​ಡೇಟ್​ ಮಾಡಲಾಗುತ್ತಿರುವ ಕಾರಣ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಮಾರ್ಚ್​ 1 ರಿಂದ ಮತ್ತೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸದ್ಯ ಕೊವಿನ್​ ಆ್ಯಪ್​ನಲ್ಲಿ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿಲ್ಲ. ಇನ್ನು ಮುಂದಿನ ಹಂತದಲ್ಲಿ ಅದನ್ನು ಹೇಗೆ ಬದಲಾವಣೆ ಮಾಡಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೊವಿನ್​ ಅಭಿವೃದ್ಧಿಪಡಿಸಿದ ನಂತರವೂ ಜನ ಸಾಮಾನ್ಯರಿಗೆ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವುದು ಕಷ್ಟವಿದೆಯಾದರೂ, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸೂಕ್ತ ದಾಖಲೆಗಳೊಂದಿಗೆ ಲಸಿಕೆ ವಿತರಣಾ ಕೇಂದ್ರಗಳಿಗೆ ತೆರಳಿದರೆ ಅವರ ವಿವರಗಳನ್ನು ಕೊವಿನ್​ನಲ್ಲಿ ದಾಖಲಿಸಲು ಸಹಕಾರಿಯಾಗುವಂತೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಸರ್ಕಾರ ಹಿರಿಯ ನಾಗರಿಕರ ಹೆಸರನ್ನು ಮತದಾರರ ಪಟ್ಟಿಯ ಸಹಾಯದೊಂದಿಗೆ ಕ್ರೋಢೀಕರಿಸಲು ಶುರುಮಾಡಿದೆ. ಈ ಮಧ್ಯೆ ಕೊವಿನ್​ ತಂತ್ರಾಂಶದತ್ತಲೂ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆ ವಿತರಣೆ ಇನ್ನೂ ವೇಗ ಪಡೆಯುವ ಸಾಧ್ಯತೆ ಇದೆ. ಈ ಮೊದಲು ಕೂಡ ಕೆಲ ರಾಜ್ಯಗಳು ವಾರಾಂತ್ಯದಲ್ಲಿ ಕೊರೊನಾ ಲಸಿಕೆ ನೀಡುತ್ತಿರಲಿಲ್ಲವಾದ್ದರಿಂದ ಈಗ ಆ್ಯಪ್​ ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಥಗಿತಗೊಳಿಸಿರುವುದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಕೊವಿನ್​ 2.0 (CoWIN 2.0) ಬಿಡುಗಡೆಯಾದ ನಂತರ ಸೋಮವಾರದಿಂದ ಯಥಾಪ್ರಕಾರ ಲಸಿಕೆ ಹಂಚಿಕೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ:
ಬೆಂಗಳೂರಿನ ಸಂಭ್ರಮ ಕಾಲೇಜ್ ಕ್ಯಾಂಪಸ್​ನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೊನಾ

ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ