Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್ ಮಾಡಿಕೊಂಡ ಮಹಿಳೆ
ಮಹಿಳೆಯೋರ್ವಳು ಶಾಪಿಂಗ್ ಮಾಡಲು ಸೂಪರ್ ಮಾರ್ಕೇಟ್ಗೆ ಬಂದಿದ್ದಳು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್ ಮರೆತು ಬಂದಿದ್ದಾಳೆ.
ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮಾಸ್ಕ್ ಧರಿಸುವುದನ್ನು ಎಲ್ಲ ಸರ್ಕಾರಗಳು ಕಡ್ಡಾಯ ಮಾಡಿವೆ. ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವಾದ್ಯಂತ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಆದರೆ, ಬಹುತೇಕರಿಗೆ ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸೋದು ಮರೆತೇ ಹೋಗುತ್ತದೆ. ದಂಡ ಬೀಳುತ್ತದೆ ಎನ್ನುವ ಕಾರಣಕ್ಕೆ ಕೆಲವರು ಹೊಸ ಮಾಸ್ಕ್ ಖರೀದಿ ಮಾಡಿದರೆ, ಕೆಲವರು ತಮ್ಮ ಬಳಿ ಇರುವ ವೇಲ್, ಕರ್ಚೀಫ್ಅನ್ನೇ ಮಾಸ್ಕ್ ಮಾಡಿಕೊಂಡ ಉದಾಹರಣೆಯೂ ಇದೆ. ಆದರೆ, ಇಲ್ಲೋರ್ವ ಮಹಿಳೆ ತನ್ನ ಒಳಉಡುಪನ್ನೇ ಮಾಸ್ಕ್ ಮಾಡಿಕೊಂಡಿದ್ದಾರೆ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ.. ಮಹಿಳೆಯೊಬ್ಬರು ಶಾಪಿಂಗ್ ಮಾಡಲು ಸೂಪರ್ ಮಾರ್ಕೇಟ್ಗೆ ಬಂದಿದ್ದರು. ಮನೆಯಿಂದ ಹೊರಡುವ ತರಾತುರಿಯಲ್ಲಿ ಮಾಸ್ಕ್ ಮರೆತು ಬಂದಿದ್ದಾಳೆ. ಯಾರೂ ಕೇಳುವುದಿಲ್ಲ ಎನ್ನುವ ಧೈರ್ಯದಲ್ಲೇ ಆಕೆ ಸೂಪರ್ ಮಾರ್ಕೆಟ್ ಒಳಗೆ ತೆರಳಿದ್ದಾರೆ. ಸೂಪರ್ ಮಾರ್ಕೆಟ್ ಒಳಗೆ ಹೋಗುವಾಗ ಭದ್ರತಾ ಸಿಬ್ಬಂದಿ ಆಕೆಯನ್ನು ಪ್ರಶ್ನೆ ಮಾಡಿಲ್ಲ. ಹೀಗಾಗಿ, ಖರೀದಿ ಮಾಡಲು ಶುರು ಮಾಡಿದ್ದಾರೆ.
ಆದರೆ, ಸೂಪರ್ ಮಾರ್ಕೆಟ್ನ ಮಾಲೀಕ ಮಾಸ್ಕ್ ಧರಿಸದಿದ್ದರೆ ನಾವು ಇಲ್ಲಿ ಖರೀದಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾನೆ. ಆಕೆ, ಪರವಾಗಿಲ್ಲ ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲ ಎಂದು ಮಾಲೀಕ ಕಟುವಾಗಿ ಹೇಳಿದ್ದ. ಅಲ್ಲದೆ, ಮಾಸ್ಕ್ ಧರಿಸದಿದ್ದರೆ ಶಾಪ್ನಿಂದ ಹೊರಗೆ ಹಾಕುತ್ತೇವೆ ಎಂದೂ ಧಮ್ಕಿ ಕೂಡ ಹಾಕಿದ್ದ.
ಇದರಿಂದ ಅವಮಾನಕ್ಕೆ ಒಳಗಾದ ಮಹಿಳೆ ತಡ ಮಾಡಲಿಲ್ಲ. ಎಲ್ಲರ ಎದುರೇ ತನ್ನ ಪ್ಯಾಂಟಿಯನ್ನು ತೆಗೆದು, ಅದನ್ನು ಮಾಸ್ಕ್ ರೀತಿಯಲ್ಲಿ ಧರಿಸಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ನಲ್ಲಿ ಈ ವಿಡಿಯೋ ಬರೋಬ್ಬರಿ 2.2 ಲಕ್ಷ ಬಾರಿ ವೀಕ್ಷಣೆ ಕಂಡಿದೆ.
ಒಳ ಉಡುಪನ್ನು ತೆಗೆದು ಮಾಸ್ಕ್ ಮಾಡಿಕೊಂಡಿದ್ದು ಇದೇ ಮೊದಲೇನಲ್ಲ. ಕಳೆದ ಮೇ ತಿಂಗಳಲ್ಲಿ ಮತ್ತೊಬ್ಬ ಮಹಿಳೆ ಉಕ್ರೇನ್ನಲ್ಲಿ ತನ್ನ ಅಂಡರ್ವೇರ್ ತೆಗೆದು ಮಾಸ್ಕ್ ಮಾಡಿಕೊಂಡಿದ್ದ ವಿಡಿಯೋ ಸಹ ಭಾರೀ ವೈರಲ್ ಆಗಿತ್ತು.
We as South Africans are truly one of a kind ?? pic.twitter.com/hhDdkmapQk
— JLN (@YB_JLN) February 23, 2021
ಇದನ್ನೂ ಓದಿ: ಸ್ವಂತ ವಾಹನದಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ಹಾಕುವಂತಿಲ್ಲ! ಮುಂಬೈನಲ್ಲಿ ಜಾರಿಗೆ ಬಂತು ಹೊಸ ನಿಯಮ; ಬೆಂಗಳೂರಿನಲ್ಲಿ ಯಾವಾಗ?
Published On - 2:13 pm, Sat, 27 February 21