ಲಾಕ್ ಡೌನ್ ಮಾತ್ರವೇ ಕೊರೊನಾ ನಿಯಂತ್ರಣಕ್ಕೆ ಪರಿಹಾರ ಅಲ್ಲ: ರಾಹುಲ್
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ಸೋಂಕು ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಪ್ರಧಾನಿ ಮೋದಿ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ಕಂಟ್ರೋಲ್ ಮಾಡೊಕೆ ಸಾಧ್ಯವಿಲ್ಲ.. ಆದ್ರೆ ಮ್ಯಾನೇಜ್ ಮಾಡಬಹುದು ದೇಶದಲ್ಲಿ ಸಂದ್ಗಿಗ್ನ ಪರಿಸ್ಥಿತಿ ಎದುರಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಒಂದಾಗಿ ಕೆಲಸ ಮಾಡಬೇಕು. ಲಾಕ್ ಡೌನ್ ಹೊರತು ಇನ್ಯಾವುದೇ ಉಪಾಯ ಇಲ್ಲ. ವೈರಸ್ ತಡೆಯಲು ಲಾಕ್ ಡೌನ್ ಸೂಕ್ತ. ಆದ್ರೆ ಲಾಕ್ ಡೌನ್ ಮಾತ್ರವೇ ಕೊರೊನಾ ನಿಯಂತ್ರಣಕ್ಕೆ ಪರಿಹಾರ […]
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ಸೋಂಕು ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಪ್ರಧಾನಿ ಮೋದಿ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಕಂಟ್ರೋಲ್ ಮಾಡೊಕೆ ಸಾಧ್ಯವಿಲ್ಲ.. ಆದ್ರೆ ಮ್ಯಾನೇಜ್ ಮಾಡಬಹುದು ದೇಶದಲ್ಲಿ ಸಂದ್ಗಿಗ್ನ ಪರಿಸ್ಥಿತಿ ಎದುರಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಒಂದಾಗಿ ಕೆಲಸ ಮಾಡಬೇಕು. ಲಾಕ್ ಡೌನ್ ಹೊರತು ಇನ್ಯಾವುದೇ ಉಪಾಯ ಇಲ್ಲ. ವೈರಸ್ ತಡೆಯಲು ಲಾಕ್ ಡೌನ್ ಸೂಕ್ತ. ಆದ್ರೆ ಲಾಕ್ ಡೌನ್ ಮಾತ್ರವೇ ಕೊರೊನಾ ನಿಯಂತ್ರಣಕ್ಕೆ ಪರಿಹಾರ ಅಲ್ಲ ಎಂದು ಹೇಳಿದ್ದಾರೆ.
ಲಾಕ್ ಡೌನ್ ಜೊತೆ ಜೊತೆಗೆ ಪರೀಕ್ಷೆಗಳು ಹೆಚ್ಚಾಗಬೇಕು. ಹೆಚ್ಚು ಟೆಸ್ಟ್ ಮಾಡುವ ಗುರಿ ಹೊಂದಬೇಕಿದೆ. ಅಂದಾಜು 350 ಟೆಸ್ಟ್ ಗಳು ಪ್ರತಿ ಜಿಲ್ಲೆಯಲ್ಲಿಯೂ ಆಗುತ್ತಿದೆ. ಇದು ಸಾಕಾಗಲ್ಲ, ಮತ್ತಷ್ಟು ವೇಗವಾಗಿ ಪರೀಕ್ಷೆ ನಡೆಸಬೇಕು. ಕೇಂದ್ರ ಸರ್ಕಾರ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಇಡೀ ದೇಶ ಒಂದಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ರಾಹುಲ್ ಗಾಂಧಿ ಆಶಿಸಿದರು.
ರಾಜ್ಯಗಳಿಗೆ ಬಾಕಿ GST ಹಣ ನೀಡಬೇಕು. ರಾಜ್ಯಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಬೇಕು. ಆಹಾರ ಕೊರತೆ ಉಂಟಾಗಲಿದೆ. ಬಡವರಿಗೆ ಆಹಾರ ನೀಡಿ, ರೇಷನ್ ಕಾರ್ಡ್ ಇಲ್ಲದವರಿಗೂ ರೇಷನ್ ಪಡಿತರ ನೀಡಬೇಕು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಸರಕಾರದ ಬಳಿ ಇರುವ ಆಹಾರ ಬಡವರಿಗೆ ಸಿಗುತ್ತಿಲ್ಲ. ಇದು ನನಗೆ ಬೇಸರ ತರಿಸಿದೆ. ನಿರುದ್ಯೋಗದ ಬಗ್ಗೆಯೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಣ್ಣ ಉದ್ಯಮಗಳಿಗೆ ಪ್ಯಾಕೇಜ್ ತಯಾರು ಮಾಡಬೇಕು. ಸಣ್ಣ ಉದ್ಯಮದಾರರಿಗೆ ಸರ್ಕಾರ ಏನ್ ಮಾಡಲು ಹೊರಟಿದೆ ಎನ್ನುವುದನ್ದುನ ಬಹಿರಂಗಗೊಳಿಸಿ ಎಂದು ಅವರು ಕೇಂದ್ರವನ್ನು ಆಗ್ರಹಿಸಿದರು.
Published On - 1:53 pm, Thu, 16 April 20