ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ. ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ […]

ಕೊರೊನಾ ಕಾಲದಲ್ಲಿ ನಡುರಾತ್ರಿ ಕೋರ್ಟ್ ಬಾಗಿಲು ತೆರೆಸಿ, ನಡೆಯಿತು ವಿಶೇಷ ಮದುವೆ!
Follow us
ಸಾಧು ಶ್ರೀನಾಥ್​
|

Updated on: Apr 15, 2020 | 6:34 PM

ಚಂಡೀಗಢ: ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್​ಡೌನ್ ಆಗಿ ಎಲ್ಲರು ಮನೆಯಲ್ಲೇ ಇರುವಂತಾಗಿದೆ. ಆದ್ರೆ ಹರಿಯಾಣದ ಜಿಲ್ಲಾಧಿಕಾರಿ ಕಚೇರಿ ಮಾತ್ರ ಏ.13ರ ರಾತ್ರಿ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ. ಭಾಷಾ ತಜ್ಞರಾಗಿ ಕೆಲಸ ಮಾಡುತ್ತಿರುವ ನಿರಂಜನ್ ಕಶ್ಯಪ್ ಹಾಗೂ ಡಾನಾ ಜೋಡಿ ಲಾಕ್​ಡೌನ್​ ನಡುವೆಯೂ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದಾರೆ.

ಈ ವಿಶೇಷ ಜೋಡಿಯು ಭಾಷಾ ಕಲಿಕೆ ಆಪ್ ಮುಖಾಂತರ 2017ರಲ್ಲಿ ಭೇಟಿಯಾಗಿದ್ದರು. ನಂತರ ಮುಂದಿನ ವರ್ಷವೇ ನಿಶ್ಚಿತಾರ್ಥ ಸಹ ನೆರವೇರಿತ್ತು. ನಂತರ ಮೆಕ್ಸಿಕೋಗೆ ವಾಪಸ್ ಹೋಗಿ ಎರಡು ವರ್ಷಗಳ ಕಾಲ ಡಾನಾ ಅಲ್ಲೇ ಇದ್ದರು.

ನಿರಂಜನ್ ಹುಟ್ಟುಹಬ್ಬ ನೆಪದಲ್ಲಿ ಡಾನಾ ಮತ್ತೊಮ್ಮೆ ಭಾರತಕ್ಕೆ ಬಂದುಹೋಗಿದ್ದರು. ಅದಾದ ಮೇಲೆ ಫೆ.11ರಂದು ಮದುವೆಗಾಗಿ ಡಾನಾ ಮತ್ತು ಆಕೆಯ ತಾಯಿ ಮೆಕ್ಸಿಕೋದಿಂದ ಭಾರತಕ್ಕೆ ಬಂದರು. ಫೆ.17ರಂದು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ರೋಹ್ಟಕ್ ನಿವಾಸಿ ನಿರಂಜನ್ ಹಾಗೂ ಮೆಕ್ಸಿಕೋ ದೇಶದ ಡಾನಾ ಜೋಹೆರಿ ಆಲಿವೆರೋಸ್ ಕ್ರೂಸ್ ಅರ್ಜಿ ಸಲ್ಲಿಸಿದ್ದರು.

ಅದರಂತೆ ಮಾರ್ಚ್​ 18ಕ್ಕೆ ನೋಟಿಸ್ ಅವಧಿ ಮುಕ್ತಾಯವಾಗಿತ್ತು. ಆದ್ರೆ ಮಾ.19ರಿಂದ ಲಾಕ್​ಡೌನ್ ಶುರುವಾದ್ದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ ವಿವಾಹ ಸಂಬಂಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ವಿವಾಹ ಕೈಂಕರ್ಯಕ್ಕೆ ನೆರವು ಕೋರಿದರು.

ಈಗ ಲಾಕ್​ಡೌನ್ ಸಂದರ್ಭದಲ್ಲಿ ವಿವಾಹವಾಗಲು ಸಾಧ್ಯವಾಗಲಿಲ್ಲ. ಕೊನೆಗೂ… ಏಪ್ರಿಲ್ 13ರ ರಾತ್ರಿ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ವಿವಾಹ ನೆರವೇರಿತು ಎಂಬುದರ ಮೂಲಕ ನಿರಂಜನ್- ಡಾನಾ ಜೋಡಿ ಪ್ರೇಮ ಶುಭರಸ್ತು ಆಗಿದೆ!

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್