ಆಂಧ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,097ಕ್ಕೆ ಏರಿಕೆ

ಆಂಧ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,097ಕ್ಕೆ ಏರಿಕೆ

ಹೈದರಾಬಾದ್: ಆಂಧ್ರದಲ್ಲಿ ಇಂದು ಹೊಸದಾಗಿ 81 ಜನರಿಗೆ ಮಹಾಮಾರಿ ಕೊರೊನಾ ದೇಹ ಹೊಕ್ಕಿದೆ. ಹೀಗಾಗಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,097ಕ್ಕೆ ಏರಿಕೆಯಾಗಿದೆ. 1097 ಜನರಲ್ಲಿ 231 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೃತರ ಸಂಖ್ಯೆ 31ಕ್ಕೆ ಏರಿದೆ.

ಆಂಧ್ರದಲ್ಲಿ ದಿನೇ ದಿನೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇವಲ 24ಗಂಟೆಗಳಲ್ಲಿ ಅಂದ್ರೆ ಒಂದೇ ದಿನದಲ್ಲಿ ಕೃಷ್ಟ ಜಿಲ್ಲೆಯಲ್ಲಿ ಸುಮಾರು 52 ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಹೊಸ 81  ಪ್ರಕರಣಗಳಲ್ಲಿ ಕೃಷ್ಟ ಜಿಲ್ಲೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Published On - 12:24 pm, Sun, 26 April 20

Click on your DTH Provider to Add TV9 Kannada