ದೆಹಲಿ: ಕೊವಿಡ್ ಎರಡನೇ ಅಲೆಯ ಪರಿಣಾಮ ಭಾರತದಲ್ಲಿ ಸತತ ಎರಡನೇ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದೆ. ಕಳೆದ 24ಗಂಟೆಗಳಲ್ಲಿ 3,32,730 ಸೋಂಕು ಪ್ರಕರಣಗಳು ದಾಖಲಾಗಿದ್ದು 2,263 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಒಟ್ಟು ವರದಿಯಾಗಿರುವ ಕೊವಿಡ್ ಪ್ರಕರಣಗಳ ಸಂಖ್ಯೆ 16,263,695. ಈವರೆಗೆ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 1,86,920 ಆಗಿದೆ. ಕೊವಿಡ್ ಎರಡನೇ ಅಲೆ ಗಂಭೀರ ಸ್ವರೂಪದಿಂದ ಕೂಡಿದ್ದು ಅಧಿಕ ಸಂಖ್ಯೆಯಲ್ಲಿ ಜನರು ಸೋಂಕಿಗೊಳಗಾಗುತ್ತಿದ್ದಾರೆ. ಇದು ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸಿದೆ.
ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಾಖಲೆ ಸೃಷ್ಟಿಸುತ್ತಿದೆ. ಕೊರೊನಾವೈರಸ್ ವ್ಯಾಪಕವಾಗಿ ಹರಡುವುದನ್ನು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಂಡಿದ್ದು,ದೇಶದಾದ್ಯಂತ ಮತ್ತೊಮ್ಮೆ ಲಾಕ್ ಡೌನ್ ಉಂಟಾಗಬಹುದೇ ಎಂಬ ಆತಂಕ ಜನರಿಗಿದೆ. ಗುರುವಾರ ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 314,835 ಹೊಸ ಪ್ರಕರಣಗಳನ್ನು ದಾಖಲಿಸಿದೆ. ದೆಹಲಿಯಲ್ಲಿ ಮಾತ್ರ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆಯಿಲ್ಲದೆ, ಗುರುವಾರ ದಾಖಲಾದ ಪ್ರಕರಣಗಳು 26,000 ಕ್ಕಿಂತಲೂ ಹೆಚ್ಚು. ರಾಷ್ಟ್ರ ರಾಜಧಾನಿಯಲ್ಲಿ ಸಾವಿಗೀಡಾದವರ ಸಂಖ್ಯೆ 306. ಶವ ಸಂಸ್ಕಾರಕ್ಕಾಗಿ ಜನರು ಪರದಾಡುವ ಸ್ಥಿತಿ ಇಲ್ಲಿ ಕಂಡುಬಂದಿದೆ. ದೇಶದಲ್ಲಿ24,28,616 ಸಕ್ರಿಯ ಪ್ರಕರಣಗಳಿವೆ. ಗುರುವಾರ 1,93,279 ಮಂದಿ ಚೇತರಿಸಿಕೊಂಡಿದ್ದು,ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 1,36,48,159 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
India reports 3,32,730 new #COVID19 cases, 2,263 deaths and 1,93,279 discharges in the last 24 hours, as per Union Health Ministry
Total cases: 1,62,63,695
Total recoveries: 1,36,48,159
Death toll: 1,86,920
Active cases: 24,28,616Total vaccination: 13,54,78,420 pic.twitter.com/LKQMB5pUOE
— ANI (@ANI) April 23, 2021
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಮತ್ತು ಗುಜರಾತ್ ಸೇರಿದಂತೆ ಹತ್ತು ರಾಜ್ಯಗಳು ಒಂದು ದಿನದಲ್ಲಿ ದಾಖಲಾದ ಹೊಸ ಪ್ರಕರಣಗಳು ದೇಶದ ಒಟ್ಟು ಪ್ರಕರಣಗಳು ಶೇ 75ರಷ್ಟಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದ್ದಾರೆ. ದೇಶದಲ್ಲಿ ನೀಡಲಾಗುವ ಕೊವಿಡ್ 19 ಲಸಿಕೆ ಪ್ರಮಾಣವು 13.53 ಕೋಟಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಏಪ್ರಿಲ್ 22 ರವರೆಗೆ 274,445,653 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ 1,740,550 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಭಾರತವು ಪ್ರಸ್ತುತ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ಎರಡನೇ ದೇಶವಾಗಿದ್ದು ಅಮೆರಿಕ ಮೊದಲ ಸ್ಥಾನದಲ್ಲಿದೆ.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚುಕೊವಿಡ್ ಸೋಂಕಿತರಿದ್ದು ಗುರುವಾರ 67,013 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 40.94 ಲಕ್ಷದಾಟಿದೆ.
ಮಹಾರಾಷ್ಟ್ರದ ನಂತರ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಿವೆ.
ಕೇರಳದಲ್ಲಿ ಗುರುವಾರ 26,995 ಕೊರೊನಾವೈರಸ್ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ 25,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿ ಆಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1.37 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಸಾವುನೋವು ದಾಖಲಾಗಿದೆ. ಇಲ್ಲಿ 306 ಕೋವಿಡ್ ರೋಗಿಗಳು ಮೃತ ಪಟ್ಟಿದ್ದು 26,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳಿಂದಾಗಿ ಕೆಲವು ದೇಶಗಳು ಭಾರತದ ಮೇಲೆ ಪ್ರಯಾಣ ನಿರ್ಬಂಧ ಹೇರಿವೆ. ಭಾರತದಿಂದ ಬರುವ ಎಲ್ಲ ವಿಮಾನಗಳನ್ನು ಯುಎಇ ಸ್ಥಗಿತಗೊಳಿಸಿದ್ದು, ಕೆನಡಾ, ಭಾರತ ಮತ್ತು ಪಾಕಿಸ್ತಾನದಿಂದ ಪ್ರಯಾಣಿಕರ ವಿಮಾನಯಾನಕ್ಕೆ ಇಂದಿನಿಂದ 30 ದಿನಗಳವರೆಗೆ ನಿಷೇಧ ಹೇರಿದೆ.
ಪ್ರಸ್ತುತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಕರೆದ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ಆಮ್ಲಜನಕ ಪೂರೈಕೆ, ಅಗತ್ಯ ಔಷಧಗಳು ಮತ್ತು ಲಸಿಕೆ ಬಗ್ಗೆ ರಾಷ್ಟ್ರೀಯ ಯೋಜನೆ ರೂಪಿಸುವಂತೆ ಕೇಳಿದೆ.
ಅಸ್ಸಾಂನಲ್ಲಿ ಕೊವಿಡ್ ಪ್ರಕರಣಗಳು ಗುರುವಾರ 2.31 ಲಕ್ಷಕ್ಕೆ ಏರಿದೆ. 1,931 ಜನರಿಗೆ ಕೊವಿಡ್ ದೃಢಪಟ್ಟಿದ್ದು 10 ಮಂದಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಮುಂಬೈನ ವಿರಾರ್‌ನ ವಿಜಯ ವಲ್ಲಭ ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ, 13 ಜನರ ಸಾವು
(Coronavirus second straight day India is reporting over three lakh cases 2263 covid deaths)
Published On - 11:05 am, Fri, 23 April 21