Petrol Diesel Price: ಎಂಟು ದಿನಗಳಾದರೂ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಿಲ್ಲ; ಗರಿಷ್ಟ ಮಟ್ಟ ತಲುಪಿರುವ ಇಂಧನ ದರ ಕುಸಿಯುವುದು ಯಾವಾಗ?
Petrol Diesel Rate Today in Bangalore: ಗರಿಷ್ಟ ಮಟ್ಟ ತಲುಪಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಾದರೂ ಇಳಿಕೆ ಕಾಣಬಹುದೆನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೀಗ ಒಂದು ವಾರವಾದರೂ ದರ ಕುಸಿತ ಕಂಡಿಲ್ಲದ್ದನ್ನು ಕಂಡ ಖರೀದಿದಾರರು, ದರ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಒಡ್ಡಿದ್ದಾರೆ.
Petrol Diesel Rate Today in Bangalore: ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಸತತವಾಗಿ 8 ದಿನಗಳಾದರೂ ಬದಲಾಗಿಲ್ಲ. ಈ ಮೊದಲು ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ 15 ದಿನಗಳಾದರೂ ದರ ಇಳಿಕೆ ಕಂಡಿರಲಿಲ್ಲ. ಎಪ್ರಿಲ್ ತಿಂಗಳಿನಲ್ಲಿ ಕೊಂಚ ದರ ಇಳಿಕೆ ಕಂಡಿರುವುದನ್ನು ಕಂಡ ಗ್ರಾಹಕರು ಸಂತೋಷ ಪಟ್ಟಿದ್ದರು. ಗರಿಷ್ಟ ಮಟ್ಟ ತಲುಪಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇನ್ನಾದರೂ ಇಳಿಕೆ ಕಾಣಬಹುದೆನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೀಗ ಒಂದು ವಾರವಾದರೂ ದರ ಕುಸಿತ ಕಂಡಿಲ್ಲದ್ದನ್ನು ಕಂಡ ಖರೀದಿದಾರರು, ದರ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಒಡ್ಡಿದ್ದಾರೆ.
ಇಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.40 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಲೀಟರ್ ಡೀಸೆಲ್ಅನ್ನು 80.73 ರೂಪಾಯಿ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.43 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ದರ 85.75 ರೂಪಾಯಿ ಆಗಿದೆ.
ಇನ್ನು ಕೋಲ್ಕತ್ತಾ, ಬೆಂಗಳೂರು, ಪಂಜಾಬ್, ಹರಿಯಾಣ, ಪುಣೆ ನಗರಗಳಲ್ಲಿ ಇಂಧನ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.62 ರೂಪಾಯಿ ಇದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 83.61 ರೂಪಾಯಿ ಇದೆ. ಪುಣೆಯಲ್ಲಿ ಪೆಟ್ರೋಲ್ ದರ 96.47 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 83.16 ರೂಪಾಯಿ ಇದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೊಲ್ ದರ 93.43 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 88.05 ರೂಪಾಯಿ ಇದೆ.
ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 88.79 ರೂಪಾಯಿ ಹಾಗೂ ಡೀಸೆಲ್ ದರ 81.19 ರೂಪಾಯಿ ಇದೆ. ಮೊಹಾಲಿಯಲ್ಲಿ(ಪಂಜಾಬ್) ಪ್ರತಿ ಲೀಟರ್ ಪೆಟ್ರೋಲ್ ದರ 92.62 ರೂಪಾಯಿ ಇದೆ. ಹಾಗೆಯೇ ಡೀಸೆಲ್ ದರ 83.58 ರೂಪಾಯಿ ಇದೆ.
ನಡೆಯುತ್ತಿರುವ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಸಾರ್ವಜನಿಕ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ 2 ರಿಂದ 3 ರೂಪಾಯಿಯಷ್ಟು ಏರಿಕೆ ಮಾಡಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ. ತಮಿಳುನಾಡು, ಅಸ್ಸಾಂ, ಕೇರಳ, ಪುದುಚೆರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಏಪ್ರಿಲ್ 29ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html
Published On - 10:16 am, Fri, 23 April 21