ಮುಂದಿನ ತಿಂಗಳೇ 3ನೇ ಅಲೆ; ಸೆಪ್ಟೆಂಬರ್ ತಿಂಗಳ ವೇಳೆಗೆ 3ನೇ ಅಲೆ ಪೀಕ್‌ಗೆ ಹೋಗುತ್ತದೆ… ಇದು ಎಸ್‌ಬಿಐ ರಿಸರ್ಚ್

| Updated By: ಸಾಧು ಶ್ರೀನಾಥ್​

Updated on: Jul 05, 2021 | 4:33 PM

coronavirus third wave: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಸರ್ಚ್ ಕೋವಿಡ್-19 (SBI Research report), ದಿ ರೇಸ್ ಟು ಫಿನಿಶಿಂಗ್ ಲೈನ್ ಶೀರ್ಶಿಕೆಯಡಿ ಸಂಶೋಧನಾ ಲೇಖನ ಪ್ರಕಟಿಸಿದೆ. ಈ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲೇ ಭಾರತಕ್ಕೆ ಕೊರೊನಾದ ಮೂರನೇ ಅಲೆ ಬರಲಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ಪೀಕ್‌ಗೆ ಹೋಗಲಿದೆ ಎಂದು ಈ ಸಂಶೋಧನಾ ಲೇಖನದಲ್ಲಿ ಹೇಳಲಾಗಿದೆ.

ಮುಂದಿನ ತಿಂಗಳೇ 3ನೇ ಅಲೆ; ಸೆಪ್ಟೆಂಬರ್ ತಿಂಗಳ ವೇಳೆಗೆ 3ನೇ ಅಲೆ ಪೀಕ್‌ಗೆ ಹೋಗುತ್ತದೆ... ಇದು ಎಸ್‌ಬಿಐ ರಿಸರ್ಚ್
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಕೊರೊನಾದ 2ನೇ ಅಲೆಯ ಅಬ್ಬರ ತಗ್ಗಿದೆ. ಆದರೇ, ಈಗ ಕೊರೊನಾದ ಮೂರನೇ ಅಲೆಯು ಮುಂದಿನ ತಿಂಗಳೇ ಅಂದರೇ, ಆಗಸ್ಟ್ ತಿಂಗಳಿನಲ್ಲಿ ಬರಲಿದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ. ಕೊರೊನಾದ ಮೂರನೇ ಅಲೆಯು ಸೆಪ್ಟೆಂಬರ್ ತಿಂಗಳ ವೇಳೆಗೆ ಪೀಕ್‌ಗೆ ಹೋಗಲಿದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ. ಇದು ಈಗ ಆತಂಕಕ್ಕೆ ಕಾರಣವಾಗಿದೆ.

ಕೊರೊನಾದ 2ನೇ ಅಲೆ ಬಗ್ಗೆ ಕಾನ್ಪುರ ಐಐಟಿ ತಜ್ಞರು ಮುಂಚೆಯೇ ಹೇಳಿದ್ದ ಮಾತುಗಳು ನಿಜವಾಗಿವೆ. ಕಾನ್ಪುರ ಐಐಟಿ ತಜ್ಞರು ಮೇ ತಿಂಗಳ ಆರಂಭದ ವೇಳೆಗೆ ಕೊರೊನಾ 2ನೇ ಅಲೆ ಪೀಕ್‌ಗೆ ಹೋಗಲಿದೆ. ಜೂನ್ ಅಂತ್ಯದ ವೇಳೆಗೆ ಕೊರೊನಾದ 2ನೇ ಅಲೆ ಕುಸಿತವಾಗಲಿದೆ ಎಂದು ಮುಂಚೆಯೇ ಸರಿಯಾಗಿ ಲೆಕ್ಕಾಚಾರ ಹಾಕಿ ಹೇಳಿದ್ದರು. ಈಗ ಅದೇ ರೀತಿ ಮತ್ತೊಂದು ತಜ್ಞರ ತಂಡ ದೇಶಕ್ಕೆ ಕೊರೊನಾದ ಮೂರನೇ ಅಲೆ ಯಾವಾಗ ಬಹಬಹುದು ಎಂದು ಲೆಕ್ಕಾಚಾರ ಹಾಕಿ ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಸರ್ಚ್ ಕೋವಿಡ್-19 (SBI Research report), ದಿ ರೇಸ್ ಟು ಫಿನಿಶಿಂಗ್ ಲೈನ್ ಶೀರ್ಶಿಕೆಯಡಿ ಸಂಶೋಧನಾ ಲೇಖನ ಪ್ರಕಟಿಸಿದೆ. ಈ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲೇ ಭಾರತಕ್ಕೆ ಕೊರೊನಾದ ಮೂರನೇ ಅಲೆ ಬರಲಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ಪೀಕ್‌ಗೆ ಹೋಗಲಿದೆ ಎಂದು ಈ ಸಂಶೋಧನಾ ಲೇಖನದಲ್ಲಿ ಹೇಳಲಾಗಿದೆ. ಈಗ ಲಭ್ಯವಿರುವ ಡಾಟಾ ಪ್ರಕಾರ ಹೇಳುವುದಾದರೇ, ಜುಲೈ 2ನೇ ವಾರದಲ್ಲಿ ಭಾರತದಲ್ಲಿ ಹತ್ತು ಸಾವಿರದ ಅಸುಪಾಸಿನಲ್ಲಿ ಕೊರೊನಾ ಕೇಸ್ ಪತ್ತೆಯಾಗಲಿವೆ. ಆದರೂ, ಆಗಸ್ಟ್ 2ನೇ ವಾರದ ಬಳಿಕ ಕೊರೊನಾ ಕೇಸ್ ಏರಿಕೆ ಶುರುವಾಗಲಿದೆ.

ಕೊರೊನಾದ ಮೂರನೇ ಅಲೆಯಲ್ಲಿ ಜಾಗತಿಕ ಡಾಟಾ ಪ್ರಕಾರ, ಕೊರೊನಾದ 2ನೇ ಅಲೆಯ ಪೀಕ್ ನಲ್ಲಿದ್ದ ಕೇಸ್ ಗಳ 1.7ಪಟ್ಟು ಹೆಚ್ಚು ಕೇಸ್ ಗಳು ಪತ್ತೆಯಾಗಲಿವೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ. ಭಾರತದಲ್ಲಿ ಈಗ ನಿತ್ಯ 40 ಲಕ್ಷ ಡೋಸ್ ಸರಾಸರಿಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ, ಭಾರತದಲ್ಲಿ ಕೊರೊನಾ ಲಸಿಕೆಯ 2 ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇದೆ ಎಂದು ಎಸ್‌ಬಿಐ ರಿಸರ್ಚ್ ಹೇಳಿದೆ.

ಬ್ಲ್ಯಾಕ್ ಫಂಗಸ್ ಬಳಿಕ ಮತ್ತೊಂದು ಕಾಟ ಶುರು!
ಕೊರೊನಾದಿಂದ ಗುಣಮುಖ ಆದ ಬಳಿಕ ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಈಗ ಬ್ಲ್ಯಾಕ್ ಫಂಗಸ್ ಜೊತೆಗೆ ಮತ್ತೊಂದು ಹೊಸ ಕಾಯಿಲೆ ಶುರುವಾಗಿದೆ. ಅದುವೇ ಅವಾಸ್ಕ್ಯೂಲರ್ ನೆಕ್ರೋಸಿಸ್ ಅಥವಾ ಮೂಳೆಯ ಅಂಗಾಂಶಗಳ ಸಾವು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರದ ಮೂವರಲ್ಲಿ ಅವಾಸ್ಕ್ಯೂಲರ್ ನೆಕ್ರೋಸಿಸ್( AVN) ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಎವಿಎನ್ ಪ್ರಕರಣಗಳು ಹೆಚ್ಚಾಗುವ ಭೀತಿಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಮೂವರಿಗೆ ಕೊರೊನಾ ಬಂದು ಗುಣಮುಖರಾದ 2 ತಿಂಗಳ ಬಳಿಕ ಎವಿಎನ್ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಮತ್ತು ಎವಿಎನ್ ರೋಗಗಳ ಸಾಮಾನ್ಯ ಲಕ್ಷಣವೆಂದರೇ, ಎರಡಕ್ಕೂ ಅತಿಯಾದ ಸ್ಟಿರಾಯ್ಡ್ ಬಳಕೆಯೇ ಕಾರಣ. ದೊಡ್ಡ ಪ್ರಮಾಣದಲ್ಲಿ ಸ್ಟೀರಾಯ್ಡ್ ಬಳಕೆಯಿಂದ ಎವಿಎನ್ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ವೈದ್ಯ ಸಂಜಯ್ ಅಗರವಾಲ್ ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಬಳಿಕ ಮತ್ತೊಂದು ಕಾಟ ಶುರು!

(ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

Published On - 4:32 pm, Mon, 5 July 21