ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಯವರಿಗೆ ಪತ್ರ ಬರೆದ ಟಿಎಂಸಿ ಸಂಸದರು

Tushar Mehta: ಮೆಹ್ತಾ ಮತ್ತು ಸುವೇಂದು ಅಧಿಕಾರಿಯವರ ಸ್ಪಷ್ಟೀಕರಣಗಳ ಕುರಿತು ಮಾತನಾಡಿದ ಟಿಎಂಸಿ ಸಂಸದರು ಸಭೆಯ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕುವ ಸಲುವಾಗಿ ತಮ್ಮ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಮೆಹ್ತಾ ಅವರನ್ನು ಒತ್ತಾಯಿಸುವಂತೆ ರಾಷ್ಟ್ರಪತಿಯವರಲ್ಲಿ ಕೇಳಿಕೊಂಡರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಯವರಿಗೆ ಪತ್ರ ಬರೆದ ಟಿಎಂಸಿ ಸಂಸದರು
ತುಷಾರ್ ಮೆಹ್ತಾ
TV9kannada Web Team

| Edited By: Rashmi Kallakatta

Jul 05, 2021 | 5:54 PM

ಕೊಲ್ಕತ್ತಾ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ನಿವಾಸಕ್ಕೆ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ಭೇಟಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿದ್ದು, ಮೆಹ್ತಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಭಾರತದ ಅತ್ಯುನ್ನತ ಕಾನೂನು ಕಚೇರಿಗಳಲ್ಲಿ ಅನುಚಿತತೆಯ ಗಂಭೀರ ಅನುಮಾನಗಳನ್ನು ಹುಟ್ಟುಹಾಕುವ ವಿಷಯ” ಎಂದು ಕರೆದ ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸುಖೇಂದು ಶೇಖರ್ ರಾಯ್ ಅವರು ಸಹಿ ಮಾಡಿದ ಪತ್ರದಲ್ಲಿ, “ಭಾರತದ ಸಾಲಿಸಿಟರ್ ಜನರಲ್ ದೇಶದ ಎರಡನೇ ಉನ್ನತ ಕಾನೂನು ಅಧಿಕಾರಿ. ಭಾರತದ ಅಟಾರ್ನಿ ಜನರಲ್ ನಂತರ ಮತ್ತು ಭಾರತ ಸರ್ಕಾರ ಮತ್ತು ಅದರ ವಿವಿಧ ಅಂಗಗಳಿಗೆ ಮತ್ತು ನಾರದ ಮತ್ತು ಶಾರದಾ ಪ್ರಕರಣಗಳಂತಹ ನಿರ್ಣಾಯಕ ಕಾನೂನು ವಿಷಯಗಳಲ್ಲಿ ಸಲಹೆ ನೀಡುತ್ತಾರೆ. ತನಿಖಾ ಸಂಸ್ಥೆಗಳಿಗೆ ಸಲಹೆ ನೀಡುತ್ತಿರುವವ ಸಾಲಿಸಿಟರ್ ಜನರಲ್ ಅವರೊಂದಿಗೆ ಘೋರ ಅಪರಾಧಗಳಲ್ಲಿ ಆರೋಪಿಗಳ ನಡುವೆ ಸಭೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಶಾಸನಬದ್ಧ ಕರ್ತವ್ಯಗಳಿಗೆ ಇದು ತದ್ವಿರುದ್ಧವಾಗಿದೆ ಎಂದು ಟಿಎಂಸಿ ಸಭೆಯಲ್ಲಿ ಹೇಳಲಾಗಿದೆ.

ಈ ವಿಷಯದ ಬಗ್ಗೆ ತೃಣಮೂಲ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೇ ರೀತಿಯ ಪತ್ರ ಬರೆದಿದ್ದರು.

ಆದ್ದರಿಂದ ಸಾಲಿಸಿಟರ್ ಜನರಲ್ ಅವರ ಉನ್ನತ ಕಚೇರಿಗಳನ್ನು ಬಳಸಿಕೊಂಡು ಸುವೇಂದು ಅಧಿಕಾರಿಯು ಆರೋಪಿಯಾಗಿದ್ದ ವಿಷಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಇಂತಹ ಸಭೆಯನ್ನು ಆಯೋಜಿಸಲಾಗಿದೆ ಎಂದು ನಂಬಲು ನಮಗೆ ಕಾರಣಗಳಿವೆ. ಭಾರತದ ಸಾಲಿಸಿಟರ್ ಜನರಲ್ ಕಚೇರಿಯ ಸಮಗ್ರತೆ ಮತ್ತು ತಟಸ್ಥತೆಯ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಯಾವುದೇ ಸಂದೇಹವನ್ನು ತಪ್ಪಿಸಲು, ತುಷಾರ್ ಮೆಹ್ತಾ ಅವರನ್ನು ಭಾರತದ ಸಾಲಿಸಿಟರ್ ಜನರಲ್ ಹುದ್ದೆಯಿಂದ ತೆಗೆದುಹಾಕಲು ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸುವೇಂದು ಅಧಿಕಾರಿ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದನ್ನು ಮೆಹ್ತಾ ಒಪ್ಪಿದ್ದು, ಅವರ ನಡುವಿನ ಭೇಟಿಯ ಆರೋಪವನ್ನು ನಿರಾಕರಿಸಿದ್ದರು. ಸುವೇಂದು ಅಧಿಕಾರಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ನನ್ನ ನಿವಾಸ ಮತ್ತು ಕಚೇರಿಗೆ ತಿಳಿಸದೆಯೇ ಬಂದಿದ್ದಾರೆ ಎಂದಿದ್ದರು.

“ನಾನು ಈಗಾಗಲೇ ನನ್ನ ಕೊಠಡಿಯಲ್ಲಿ ಪೂರ್ವ ನಿಗದಿತ ಸಭೆಯಲ್ಲಿದ್ದ ಕಾರಣ, ನನ್ನ ಸಿಬ್ಬಂದಿ ನನ್ನ ಕಚೇರಿ ಕಟ್ಟಡದ ಕಾಯುವ ಕೋಣೆಯಲ್ಲಿ ಕುಳಿತುಕೊಳ್ಳಲು ವಿನಂತಿಸಿದರು. ಅವರಿಗೆ ಒಂದು ಕಪ್ ಚಹಾವನ್ನು ನೀಡಿದರು. ನನ್ನ ಸಭೆ ಮುಗಿದ ನಂತರ ಮತ್ತು ನನ್ನ ಪಿಪಿಎಸ್ ಅವರ ಆಗಮನದ ಬಗ್ಗೆ ನನಗೆ ತಿಳಿಸಿದಾಗ, ಅಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಮತ್ತು ಅವರು ಕಾಯುವಂತೆ ಮಾಡಿರುವುದಕ್ಕೆ ಕ್ಷಮೆಯಾಚಿಸುವಂತೆ ನನ್ನ ಪಿಪಿಎಸ್ ಗೆ ವಿನಂತಿಸಿದೆ ”ಎಂದು ಮೆಹ್ತಾ ಹೇಳಿದ್ದರು.

ಸುವೇಂದು ಅಧಿಕಾರಿಯೂ ಭೇಟಿ ಆರೋಪವನ್ನು ನಿರಾಕರಿಸಿದ್ದು ಮೆಹ್ತಾ ಅವರನ್ನು ನೋಡಲು ಹೋಗಿದ್ದರೂ ಅವರನ್ನು ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ.

ಮೆಹ್ತಾ ಮತ್ತು ಸುವೇಂದು ಅಧಿಕಾರಿಯವರ ಸ್ಪಷ್ಟೀಕರಣಗಳ ಕುರಿತು ಮಾತನಾಡಿದ ಟಿಎಂಸಿ ಸಂಸದರು ಸಭೆಯ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕುವ ಸಲುವಾಗಿ ತಮ್ಮ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಮೆಹ್ತಾ ಅವರನ್ನು ಒತ್ತಾಯಿಸುವಂತೆ ರಾಷ್ಟ್ರಪತಿಯವರಲ್ಲಿ ಕೇಳಿಕೊಂಡರು.

ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾಗಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟನೆ

(TMC MPs writing to President Ram Nath Kovind seeking the removal of Solicitor General Tushar Mehta)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada