Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾಗಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟನೆ

ಸುವೇಂದು ಅಧಿಕಾರಿ ನನ್ನ ಮನೆಗೆ ಬಂದಿದ್ದು ನಿಜ, ಆದರೆ ನಾನು ಅವರನ್ನು ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾಗಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟನೆ
ಸುವೇಂದು ಅಧಿಕಾರಿ ಮತ್ತು ತುಷಾರ್ ಮೆಹ್ತಾ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 02, 2021 | 11:18 PM

ದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಭೇಟಿಯಾಗಿರುವ ಕುರಿತು ಕೇಳಿ ಬಂದಿರುವ ಆರೋಪಗಳನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸುವೇಂದು ಅಧಿಕಾರಿ ನನ್ನ ಮನೆಗೆ ಬಂದಿದ್ದು ನಿಜ, ಆದರೆ ನಾನು ಅವರನ್ನು ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ.

‘ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶ್ರೀ ಸುವೇಂದು ಅಧಿಕಾರಿ ನನ್ನ ಮನೆ ಕಂ ಆಫೀಸಿಗೆ ಇದ್ದಕ್ಕಿದ್ದಂತೆ ಬಂದಿದ್ದು ನಿಜ. ನಾನು ಅದಾಗಲೇ ನನ್ನ ಛೇಂಬರ್​ನಲ್ಲಿ ಪೂರ್ವ ನಿಗದಿತ ಸಭೆಯಲ್ಲಿದ್ದೆ. ನನ್ನ ಕಚೇರಿ ಸಿಬ್ಬಂದಿ ಸುವೇಂದು ಅವರನ್ನು ಕೂಡಿಸಿ, ಒಂದು ಕಪ್ ಚಹಾ ಕೊಟ್ಟರು. ನನ್ನ ಮೀಟಿಂಗ್ ಮುಗಿದ ನಂತರ ನನ್ನ ಸಿಬ್ಬಂದಿ ಸುವೇಂದು ಅಧಿಕಾರಿ ಮನೆಗೆ ಬಂದಿರುವ ಕುರಿತು ಮಾಹಿತಿ ನೀಡಿದರು. ನಾನು ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಸುವೇಂದು ಅವರಿಗೆ ತಿಳಿಸುವಂತೆ ಮತ್ತು ಇಷ್ಟೊತ್ತು ಕಾಯಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಡುವಂತೆ ನನ್ನ ಸಿಬ್ಬಂದಿಯನ್ನು ಕೋರಿದೆ. ನನ್ನ ಕಚೇರಿ ಸಿಬ್ಬಂದಿ ಈ ಮಾತು ಹೇಳಿದ ನಂತರ ಸುವೇಂದು ಅಧಿಕಾರಿ ನನ್ನನ್ನು ಭೇಟಿಯಾಗಲು ಒತ್ತಾಯಿಸದೇ, ಮನೆಯಿಂದ ತೆರಳಿದರು. ಹೀಗಾಗಿ ಭೇಟಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ತುಷಾರ್-ಸುವೇಂದು ಭೇಟಿಯ ಆರೋಪ ಮಾಡಿದ ಟಿಎಂಸಿ  ತುಷಾರ್ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇದ್ರ ಮೋದಿ ಅವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಪತ್ರ ಬರೆದಿದ್ದಾರೆ. ನಾರದ ಪ್ರಕರಣ ಮತ್ತು ಶಾರದಾ ಚಿಟ್ ಫಂಡ್​ ಹಗರಣದಲ್ಲಿ ಆರೋಪಿಯಾಗಿರುವ ಸುವೇಂದು ಅಧಿಕಾರಿ ಅವರನ್ನು ತುಷಾರ್​ ಮೆಹ್ತಾ ಭೇಟಿಯಾಗಿದ್ದರು ಎನ್ನುವುದು ಈ ಒತ್ತಾಯಕ್ಕೆ ಪ್ರಮುಖ ಕಾರಣ. ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಈ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿವೆ.

ಸುವೇಂದು ಅಧಿಕಾರಿ ಮತ್ತು ತುಷಾರ್ ಮೆಹ್ತಾ ಅವರ ಭೇಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಜನರು ಪ್ರಶ್ನಿಸಿದ್ದರು. ಈ ಕುರಿತು ದಿನಪತ್ರಿಕೆಗಳಲ್ಲಿ ಸುದ್ದಿ ಸಹ ಪ್ರಕಟವಾಗಿತ್ತು. ಈ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಉಲ್ಲೇಖಗಳನ್ನು ಟಿಎಂಟಿ ನಾಯಕರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಸಾಲಿಸಿಟರ್ ಜನರಲ್ ಸ್ಥಾನದಲ್ಲಿರುವವರ ಪ್ರಾಮಾಣಿಕತೆಯ ಬಗ್ಗೆಯೂ ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಸಾಲಿಸಿಟರ್ ಜನರಲ್ ಸ್ಥಾನದಲ್ಲಿರುವವರ ಬದ್ಧತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವ ಸಾಧ್ಯತೆಯಿರುವುದರಿಂದ ತುಷಾರ್ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್ ಸ್ಥಾನದಿಂದ ತಕ್ಷಣ ವಜಾ ಮಾಡಬೇಕು ಎಂದು ತಮ್ಮನ್ನು ಕೋರುತ್ತೇವೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದಾರೆ.

(Solicitor General Tushar Mehta says did not meet BJP’s Suvendu Adhikari)

ಇದನ್ನೂ ಓದಿ: ಸುವೇಂದು ಅಧಿಕಾರಿ-ತುಷಾರ್ ಮೆಹ್ತಾ ಭೇಟಿಗೆ ಟಿಎಂಸಿ ಆಕ್ಷೇಪ: ಸಾಲಿಸಿಟರ್ ಜನರಲ್ ಹುದ್ದೆಯಿಂದ ಮೆಹ್ತಾ ವಜಾಕ್ಕೆ ಒತ್ತಾಯಿಸಿ ನರೇಂದ್ರ ಮೋದಿಗೆ ಪತ್ರ

ಇದನ್ನೂ ಓದಿ: ದೆಹಲಿ ದಂಗೆ: ವಿದ್ಯಾರ್ಥಿ ಹೋರಾಟಗಾರಿಗೆ ನೀಡಿದ ಜಾಮೀನು ವಿರುದ್ಧ ದೆಹಲಿ ಪೊಲೀಸ್ ಮೇಲ್ಮನವಿಗೆ ಸುಪ್ರೀಂಕೋರ್ಟ್ ನೋಟಿಸ್