2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(Corruption Perceptions Index)ದಲ್ಲಿ ಭಾರತವು 180 ದೇಶಗಳಲ್ಲಿ 93 ನೇ ಸ್ಥಾನದಲ್ಲಿದೆ. ಜಗತ್ತಿನ ಹಲವು ದೇಶಗಳಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಸಮರಗಳು ಹೆಚ್ಚು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಮಂಗಳವಾರ ಬಿಡುಗಡೆಯಾದ 2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಅಥವಾ ಸಿಪಿಐ ಡೇಟಾ ಅಂತಹ ಸೂಚನೆಯನ್ನು ನೀಡಿದೆ.
ಈ ಪಟ್ಟಿಯಲ್ಲಿರುವ ಮೂರನೇ ಎರಡರಷ್ಟು ದೇಶಗಳು 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ. ಸಿಪಿಐ 180 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡೆನ್ಮಾರ್ಕ್ ಸತತ 6ನೇ ವರ್ಷವೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಇಲ್ಲಿ ಕಡಿಮೆ ಭ್ರಷ್ಟಾಚಾರ ಕಂಡುಬಂದಿದೆ. ಆದರೆ ಸೋಮಾಲಿಯಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಸಿಪಿಐ ಪಟ್ಟಿಯನ್ನು ಬಿಡುಗಡೆ ಮಾಡುವ ಟ್ರಾನ್ಸ್ಫರೆನ್ಸಿ ಇಂಟರ್ನ್ಯಾಷನಲ್ ಪ್ರಕಾರ, 12 ದೇಶಗಳ ಸಿಪಿಐ ಸ್ಕೋರ್ 2018ರಿಂದ ನಿರಂತರವಾಗಿ ಕಡಿಮೆಯಾಗಿದೆ. ಇದು ಕಡಿಮೆ ಮತ್ತು ಮಧ್ಯಮ ಆದಾಯ ದೇಶಗಳಾದ, ಎಲ್ ಸಾಲ್ವಡಾರ್, ಹೊಂಡುರಾಸ್, ಲೈಬೀರಿಯಾ, ಮ್ಯಾನ್ಮಾರ್, ನಿಕರಾಗುವಾ, ಶ್ರೀಲಂಕಾ ಮತ್ತು ವೆನೆಜುವೆಲಾ ಹೆಸರನ್ನು ಒಳಗೊಂಡಿದೆ. ಈ ಐದು ದೇಶಗಳ ಸ್ಕೋರ್ 30ಕ್ಕಿಂತ ಕಡಿಮೆ.
ಮತ್ತಷ್ಟು ಓದಿ:ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಅಕ್ರಮ ಸಂಪತ್ತು ಪತ್ತೆ
ಇವುಗಳಲ್ಲಿ ಅರ್ಜೆಂಟೀನಾ, ಆಸ್ಟ್ರೀಯಾ, ಪೋಲೆಂಡ್, ಟರ್ಕಿ ಹಾಗೂ ಯುನೈಟೆಡ್ ಕಿಂಗ್ಡಮ್ನಂತಹ ಕೆಲವು ಉನ್ನತ ಹಾಗೂ ಮಧ್ಯಮ ಮತ್ತು ಉನ್ನತ ಆದಾಯದ ದೇಶಗಳು ಸೇರಿವೆ. ಆದರೆ ಈ ಅವಧಿಯಲ್ಲಿ 8 ದೇಶಗಳ ಸಿಪಿಐ ಸ್ಕೋರ್ ಸುಧಾರಇಸಿರುವುದು ಜಗತ್ತಿಗೆ ಸಾಮಾಧಾನದ ಸುದ್ದಿಯಾಗಿದೆ. ಇವುಗಳಲ್ಲಿ ಐರ್ಲೆಂಡ್, ದಕ್ಷಿಣ ಕೊರಿಯಾ, ಅರ್ಮೇನಿಯಾ, ವಿಯೆಟ್ನಾಂ, ಮಾಲ್ಡೀವ್ಸ್, ಅಂಗೋಲಾ ಮತ್ತು ಉಜ್ಬೇಕಿಸ್ತಾನ್ ಹೆಸರುಗಳಿವೆ.
ಭಾರತವು 93ನೇ ಸ್ಥಾನದಲ್ಲಿದೆ
ಭಾರತವು 2023ರ ಸಿಪಿಐನಲ್ಲಿ 39 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ. ಆದರೆ ನೆರೆಯ ರಾಷ್ಟ್ರ ಚೀನಾ 76 ಅಂಕ ಪಡೆದು 42ನೇ ಸ್ಥಾನದಲ್ಲಿದೆ. ವಿಶೇಷವೆಂದರೆ 2022ರಿಂದ ಚೀನಾದ ಅಂಕ 3ರಷ್ಟು ಕಡಿಮೆಯಾಗಿದೆ. ಪಾಕಿಸ್ತಾನವು 133ನೇ ಸ್ಥಾನದಲ್ಲಿದೆ, ಅವರು 29 ಅಂಕಗಳನ್ನು ಪಡೆದಿದ್ದಾರೆ. 180 ದೇಶಗಳಲ್ಲಿ ಅಫ್ಘಾನಿಸ್ತಾನ 20 ಅಂಕಗಳೊಂದಿಗೆ 162ನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ