ಗಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ ಭಾರತದ ಕೆಮ್ಮಿನ ಸಿರಪ್​​ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ:ಡಿಸಿಜಿಐ

| Updated By: ರಶ್ಮಿ ಕಲ್ಲಕಟ್ಟ

Updated on: Dec 16, 2022 | 3:12 PM

Gambia kids' deaths ಸರ್ಕಾರಿ ಪ್ರಯೋಗಾಲಯದಿಂದ ಪಡೆದ ಪರೀಕ್ಷಾ ವರದಿಗಳ ಪ್ರಕಾರ, 4 ಉತ್ಪನ್ನಗಳ ಎಲ್ಲಾ ನಿಯಂತ್ರಣ ಮಾದರಿಗಳು ಮಾನದಂಡಗಳನ್ನು ಅನುಸರಿಸುತ್ತಿವೆ ಎಂದು ಕಂಡುಬಂದಿದೆ ಎಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೋಮಾನಿ ಅವರು ವಿಶ್ವಸಂಸ್ಥೆಯ ನಿಯಂತ್ರಣ ಮತ್ತು ಪೂರ್ವ ಅರ್ಹತೆ, ನಿರ್ದೇಶಕ ರೋಜೆರಿಯೊ ಗ್ಯಾಸ್ಪರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಗಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಿದ ಭಾರತದ ಕೆಮ್ಮಿನ ಸಿರಪ್​​ನಲ್ಲಿ  ವಿಷಕಾರಿ ಅಂಶ ಪತ್ತೆಯಾಗಿಲ್ಲ:ಡಿಸಿಜಿಐ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸರ್ಕಾರವು ಪರೀಕ್ಷಿಸಿದ ಮೇಡನ್ ಫಾರ್ಮಾಸ್ಯುಟಿಕಲ್ಸ್‌ನ (Maiden Pharmaceuticals) ಎಲ್ಲಾ ನಾಲ್ಕು ಕೆಮ್ಮಿನ  ಸಿರಪ್ (cough syrups) ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಕಂಡುಬಂದಿವೆ ಎಂದು ರಾಷ್ಟ್ರೀಯ ಔಷಧ ನಿಯಂತ್ರಕರು (DCGI) ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿನಿಧಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅದೇ ವೇಳೆ ಗಾಂಬಿಯಾದಲ್ಲಿ (Gambia) ಸಾವುಗಳನ್ನು ಸ್ಥಾಪಿಸಲು ಭಾರತವು ಇನ್ನೂ ಡೇಟಾವನ್ನು ಸ್ವೀಕರಿಸಿಲ್ಲ ಎಂದು ಪುನರುಚ್ಚರಿಸಿತು. ಭಾರತೀಯ ಔಷಧ ತಯಾರಕ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಸಿರಪ್‌ ಸೇವಿಸಿ ಗಾಂಬಿಯಾದಲ್ಲಿ ಕನಿಷ್ಠ 66 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಅಕ್ಟೋಬರ್ 5 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಾಲ್ಕು ಕೆಮ್ಮಿನ ಸಿರಪ್‌ಗಳ ಮೇಲೆ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯನ್ನು ನೀಡಿತು. ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್, ಮಾಕೋಫ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಮೇಡನ್ ಫಾರ್ಮಾದಿಂದ ತಯಾರಿಸಲ್ಪಟ್ಟ ಕೆಮ್ಮಿನ ಸಿರಪ್ ಆಗಿದ್ದು, ಇದನ್ನು ರಫ್ತು ಮಾಡಲಾಗಿತ್ತು. ನಾಲ್ಕು ಕೆಮ್ಮು ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕೋಲ್ ಎಂಬ ಎರಡು ವಿಷಕಾರಿ ವಸ್ತುಗಳು ಕಂಡುಬಂದಿವೆ ಎಂದು ಡಬ್ಲ್ಯುಎಚ್‌ಒ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ. ಈ 4 ಉತ್ಪನ್ನಗಳ ಮಾದರಿಗಳನ್ನು ಪಡೆದಿದ್ದು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಸರ್ಕಾರಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಲಾಗಿದೆ. ಸರ್ಕಾರಿ ಪ್ರಯೋಗಾಲಯದಿಂದ ಪಡೆದ ಪರೀಕ್ಷಾ ವರದಿಗಳ ಪ್ರಕಾರ, 4 ಉತ್ಪನ್ನಗಳ ಎಲ್ಲಾ ನಿಯಂತ್ರಣ ಮಾದರಿಗಳು ಮಾನದಂಡಗಳನ್ನು ಅನುಸರಿಸುತ್ತಿವೆ ಎಂದು ಕಂಡುಬಂದಿದೆ ಎಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೋಮಾನಿ ಅವರು ವಿಶ್ವಸಂಸ್ಥೆಯ ನಿಯಂತ್ರಣ ಮತ್ತು ಪೂರ್ವ ಅರ್ಹತೆ, ನಿರ್ದೇಶಕ ರೋಜೆರಿಯೊ ಗ್ಯಾಸ್ಪರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಈ ಉತ್ಪನ್ನಗಳಲ್ಲಿ DEG ಮತ್ತು EG ಪತ್ತೆಯಾಗಿಲ್ಲ. ಪರೀಕ್ಷಾ ವರದಿಗಳ ಪ್ರಕಾರ ಉತ್ಪನ್ನಗಳು DEG ಅಥವಾ EGನೊಂದಿಗೆ ಕಲುಷಿತಗೊಂಡಿಲ್ಲ ಎಂದು ಕಂಡುಬಂದಿದೆ. ಈ ವರದಿಗಳನ್ನು ಪರಿಶೀಲಿಸುತ್ತಿರುವ ಸರ್ಕಾರದ ತಾಂತ್ರಿಕ ಸಮಿತಿಗೆ ಲಭ್ಯವಾಗಿದೆ ಎಂದು ಹೇಳಲಾಗಿದೆ. ಔಷಧಗಳನ್ನು ತಯಾರಿಸಲು ಬಳಸಲಾಗುವ ಪ್ರೊಪೈಲೀನ್ ಗ್ಲೈಕಾಲ್, ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಕಲ್ಮಶಗಳನ್ನು ಹೊಂದಿರಬಹುದು. ಈ ಎರಡು ವಿಷಕಾರಿ ರಾಸಾಯನಿಕಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಸಾವಿಗೆ ಸಂಭವನೀಯ ಕಾರಣಗಳೆಂದು ಹೆಸರಿಸಿದೆ.

ಇದನ್ನೂ ಓದಿ: Shocking News: 4 ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

“ಔಷಧಗಳು ಮತ್ತು ಸೌಂದರ್ಯವರ್ಧಕಗಳ ಗುಣಮಟ್ಟ ನಿಯಂತ್ರಣದಲ್ಲಿ ಉತ್ಪಾದನೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಕಠಿಣ ಮೇಲ್ವಿಚಾರಣೆ ಮತ್ತು ನಿಗಾಗೆ ಬದ್ಧವಾಗಿದೆ” ಎಂದು ಸೋಮಾನಿ ಪತ್ರದಲ್ಲಿ ತಿಳಿಸಿದ್ದಾರೆ.

ಗಾಂಬಿಯಾದಲ್ಲಿನ ಘಟನೆಗಳ ಬಗ್ಗೆ ಡಬ್ಲ್ಯುಎಚ್ಒನಿಂದ ಬಂದ ಎಚ್ಚರಿಕೆಗಳ ನಂತರ, ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಆವರಣದಲ್ಲಿ ಸ್ವತಂತ್ರ ತಪಾಸಣೆ ನಡೆಸಲಾಯಿತು. ವಿವಿಧ ಉತ್ತಮ ಉತ್ಪಾದನಾ ಅಭ್ಯಾಸಗಳನ್ನು (GMP) ಉಲ್ಲಂಘಿಸಿದ್ದಕ್ಕಾಗಿ ಮತ್ತು ನಿಯಮಗಳ ಪ್ರಕಾರ ತಯಾರಿಕೆ ಮತ್ತು ಪರೀಕ್ಷೆಯ ಸಂಪೂರ್ಣ ದಾಖಲೆಗಳನ್ನು ನೀಡದಿದ್ದಕ್ಕಾಗಿ ಭಾರತದ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ WHO ತನ್ನ ನಿಲುವನ್ನು ಬದಲಾಯಿಸಿದೆ ಎಂದು ಸೋಮಾನಿ ಹೇಳಿದ್ದಾರೆ. ಅಂದಹಾಗೆ ಗಾಂಬಿಯಾ ಕೂಡಾ ಅಲ್ಲಿ ಸಂಭವಿಸಿದ ಸಾವುಗಳು ಮತ್ತು ಸಿರಪ್ ಸೇವನೆಯ ನಡುವೆ ಇನ್ನೂ ಯಾವುದೇ ಸಂಬಂಧವಿಲ್ಲ ಎಂದು ತೋರುತ್ತಿದೆ ಎಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 16 December 22