Shocking News: 4 ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ, ಇದೀಗ ಈ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ.

Shocking News: 4 ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
Woman gives birth to 4-legged baby girlImage Credit source: ANI
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 16, 2022 | 2:53 PM

ಮಧ್ಯಪ್ರದೇಶ: ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯಲ್ಲಿ ನಡೆದಿದೆ, ಇದೀಗ ಈ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ. ಗ್ವಾಲಿಯರ್ ಜಿಲ್ಲೆಯ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಬುಧವಾರ ನಾಲ್ಕು ಕಾಲಿನ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹೆಣ್ಣು ಮಗುವಿನ ತೂಕ 2.3 ಕೆ.ಜಿ. ಇದೆ ಎಂದು ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ, ಆಸ್ಪತ್ರೆಯ ಅಧೀಕ್ಷಕರೊಂದಿಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷೆ ಮಾಡಲಾಗಿತ್ತು ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಂಟ್ ಡಾ.ಆರ್.ಕೆ.ಎಸ್.ಧಕಡ್ ಎಎನ್‌ಐಗೆ ತಿಳಿಸಿದರು. ತಾಯಿ ಕೂಡ ಆರೋಗ್ಯವಾಗಿದ್ದು, ಮಗುವಿಗೆ ನಾಲ್ಕು ಕಾಲುಗಳಿವೆ, ಆ ಮಗು ದೈಹಿಕ ವಿಕಲತೆಯನ್ನು ಹೊಂದಿದ್ದು. ಇಂತಹ ಸಮಸ್ಯೆ ಕಂಡುಬರುವುದು ಸಹಜ ಕೆಲವೊಂದು ಭ್ರೂಣಗಳಲ್ಲಿ ಇಂತಹ ಹೆಚ್ಚುವರಿ ಅಂಗಗಳು ಕಂಡು ಬರುತ್ತದೆ. ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ, ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳು ಬೆಳವಣಿಗೆಯಾಗಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ. ಇದು ಚಾಲನೆ ಶಕ್ತಿಯನ್ನು ಹೊಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇದನ್ನು ಓದಿ: 100 ಜನ ಮನೆಗೆ ನುಗ್ಗಿ ಯುವತಿಯ ಕಿಡ್ನಾಪ್; ತೆಲಂಗಾಣದಲ್ಲೊಂದು ಆಘಾತಕಾರಿ ಘಟನೆ

ಮಕ್ಕಳ ವಿಭಾಗದ ವೈದ್ಯರು ಈ ಮಗುವಿನ ದೇಹದ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ತಪಾಸಣೆ ನಡೆಸಲಾಗಿತ್ತು, ಪರೀಕ್ಷೆ ಬಳಿಕ ಆಕೆ ಆರೋಗ್ಯವಾಗಿದ್ದು ಶಸ್ತ್ರಚಿಕಿತ್ಸೆ ಮೂಲಕ ಆ ಕಾಲುಗಳನ್ನು ತೆಗೆಯಲಾಗುತ್ತದೆ. ಇದರಿಂದ ಆಕೆ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದರು.

ಅಧೀಕ್ಷಕರ ಪ್ರಕಾರ ಸದ್ಯ ಕಮಲರಾಜ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಈ ಶಿಶುವನ್ನು ದಾಖಲಿಸಲಾಗಿದೆ. ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಆಕೆಯ ಹೆಚ್ಚುವರಿ ಕಾಲುಗಳನ್ನು ತೆಗೆಯುವುದಾಗಿ ಹೇಳಲಾಗಿದೆ. ಸದ್ಯ ಹೆಣ್ಣು ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. 2022ರ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು ಎಂದು ಡಾ.ಬ್ರಜೇಶ್ ಲಾಹೋಟಿ ಅವರು ಎಎನ್‌ಐಗೆ ತಿಳಿಸಿದ್ದಾರೆ.

ಇದು ದಂಪತಿಗೆ ಮೊದಲ ಮಗು, ಮೊದಲು ಸೋನೋಗ್ರಫಿ ವರದಿಯಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಇದು ಅಪರೂಪದ ಪ್ರಕರಣವಾಗಿದೆ, ಆದರೆ ಆ ಮಕ್ಕಳ ಜೀವ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಮಗುವಿನ ತೂಕ ಸುಮಾರು 3 ಕೆಜಿ, ಎರಡು ಬೆನ್ನುಹುರಿವಿದೆ. ಇದು ತುಂಬಾ ಸಂಕೀರ್ಣವಾದ ಸ್ಥಿತಿಯಾಗಿದೆ. ಮಗುವಿಗೆ ಡೈಸೆಫಾಲಿಕ್ ಪ್ಯಾರಾಪಾಗಸ್ ಎಂಬ ಸ್ಥಿತಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Fri, 16 December 22