AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕೊವಿಡ್ ನಿಯಂತ್ರಣ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳ ಏಕಪಕ್ಷೀಯ ನಿರೂಪಣೆಯನ್ನು ಎದುರಿಸಲು ರಾಯಭಾರಿಗಳಿಗೆ ಸಚಿವ ಜೈಶಂಕರ್ ಕರೆ

ಕೊವಿಡ್ ಎರಡನೇ ಅಲೆಯ ಎಚ್ಚರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ, ಮತ್ತು ಕುಂಭಮೇಳವನ್ನು ರದ್ದುಗೊಳಿಸದೇ ಇರುವುದಕ್ಕೆ ಮೋದಿ ಸರ್ಕಾರವನ್ನು ಟೀಕಿಸಿ ಪ್ರಮುಖ ಅಂತಾರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಜೈಶಂಕರ್ ಅವರು ರಾಯಭಾರಿಗಳ ಜತೆ ಸಭೆ ನಡೆಸಿದ್ದಾರೆ.

ಭಾರತದಲ್ಲಿ ಕೊವಿಡ್ ನಿಯಂತ್ರಣ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳ ಏಕಪಕ್ಷೀಯ ನಿರೂಪಣೆಯನ್ನು ಎದುರಿಸಲು ರಾಯಭಾರಿಗಳಿಗೆ ಸಚಿವ ಜೈಶಂಕರ್ ಕರೆ
ಎಸ್. ಜೈಶಂಕರ್ (ಸಂಗ್ರಹ ಚಿತ್ರ)
ರಶ್ಮಿ ಕಲ್ಲಕಟ್ಟ
|

Updated on: Apr 30, 2021 | 3:04 PM

Share

ಮುಂಬೈ: ವಿಶ್ವದಾದ್ಯಂತವಿರುವ ಭಾರತೀಯ ರಾಯಭಾರಿಗಳು ಮತ್ತು ಹೈಕಮಿಷನರ್​ಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ದೇಶದಲ್ಲಿ ಕೊವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂಬ ಅಂತರರಾಷ್ಟ್ರೀಯ ಮಾಧ್ಯಮಗಳ ಏಕಪಕ್ಷೀಯ ನಿರೂಪಣೆಯನ್ನು ಎದುರಿಸಬೇಕು ಎಂಬ ಸಂದೇಶ ರವಾನಿಸಿದ್ದಾರೆ.

ಕೊವಿಡ್ ಎರಡನೇ ಅಲೆಯ ಎಚ್ಚರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ, ಮತ್ತು ಕುಂಭಮೇಳವನ್ನು ರದ್ದುಗೊಳಿಸದೇ ಇರುವುದಕ್ಕೆ ಮೋದಿ ಸರ್ಕಾರವನ್ನು ಟೀಕಿಸಿ ಪ್ರಮುಖ ಅಂತಾರಾಷ್ಟ್ರೀಯ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್, ಲೆ ಮಾಂಡೆ, ಸ್ಟ್ರೈಟ್ಸ್ ಟೈಮ್ಸ್ ಮತ್ತು ಟಿವಿ ಚಾನೆಲ್‌ಗಳಲ್ಲಿ ಬಲವಾದ ಸಂಪಾದಕೀಯಗಳು, ವ್ಯಾಖ್ಯಾನಗಳು ಮತ್ತು ವರದಿಗಳ ಹಿನ್ನೆಲೆಯಲ್ಲಿ ಜೈಶಂಕರ್ ಸಭೆ ನಡೆಸಿದ್ದಾರೆ. ಕೊವಿಡ್ ಅಲೆ ಎದುರಿಸಲು ಭಾರತ ವಿಫಲವಾಗಿದೆ ಎಂದು ತೋರಿಸುವುದಕ್ಕಾಗಿ ಅಂತರರಾಷ್ಟ್ರೀಯ ಟಿವಿ ಚಾನೆಲ್‌ಗಳು ಆಸ್ಪತ್ರೆಗಳ ಹೊರಗೆ ಕಾಯುವ ಆಂಬುಲೆನ್ಸ್‌ಗಳು ಮತ್ತು ರೋಗಿಗಳ ದೃಶ್ಯಗಳನ್ನು ಮತ್ತು ದೆಹಲಿ ಮತ್ತು ಇತರೆಡೆಗಳಲ್ಲಿ ಶವಸಂಸ್ಕಾರಗಳನ್ನು ದೃಶ್ಯವನ್ನು ಪ್ರಸಾರ ಮಾಡುತ್ತಿವೆ.

ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಹೆಣಗಾಡುತ್ತಿರುವಾಗ ವಿವಿಧ ದೇಶಗಳು ಆಮ್ಲಜನಕ, ಸಾಂದ್ರಕಗಳು, ವೆಂಟಿಲೇಟರ್‌ಗಳು, ಔಷಧಗಳು ಮತ್ತು ಲಸಿಕೆಗಳು ಸೇರಿದಂತೆ ಇರ ಸಂಪನ್ಮೂಲಗಳನ್ನು ನೀಡಿ ಸಹಾಯ ಮಾಡುತ್ತಿವೆ. ಈ ವಿಷಯದ ಬಗ್ಗೆ ಮಾತನಾಡಲು ಗುರುವಾರ ಸಭೆ ಕರೆಯಲಾಗಿತ್ತು ಎಂದು ಸಭೆಯಲ್ಲಿ ಭಾಗಿಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಭೆಯಲ್ಲಿ ರಾಜ್ಯ ಸಚಿವರುಗಳಾದ ವಿ.ಮುರಳೀಧರನ್, ವಿದೇಶ ಕಾರ್ಯದರ್ಶಿ ಹರ್ಷ್ ಶ್ರಿಂಗಲಾ ಮತ್ತು ಕೊವಿಡ್ ನಿಯಂತ್ರಣಕ್ಕಾಗಿ ಪರಿಶ್ರಮಿಸುತ್ತಿರುವ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಕೊವಿಡ್ ನಿಯಂತ್ರಿಸಲು ಭಾರತಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿರುವ ಬಗ್ಗೆ. ಇದನ್ನು ಹೇಗೆ ಕಳುಹಿಸುವುದು, ಅಂತಹ ವಸ್ತುಗಳನ್ನು ಕಳುಹಿಸಬೇಕಾದ ಭಾರತದ ಗಮ್ಯಸ್ಥಾನಗಳು, ಕಸ್ಟಮ್ಸ್ ನಿಯಮಗಳು ಮತ್ತು ಲಾಜಿಸ್ಟಿಕ್ಸ್‌ನ ಸಂಬಂಧಿತ ವಿಷಯಗಳ ರಾಯಭಾರಿಗಳು ಕೇಳಿದ ಪ್ರಶ್ನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಅಂತರರಾಷ್ಟ್ರೀಯ ಮಾಧ್ಯಮ ನಿರೂಪಣೆಯ ಮೇಲೆ ಹಿಡಿತ ಸಾಧಿಸುವುದು ಇತರ ಪ್ರಮುಖ ವಿಷಯವಾಗಿತ್ತು. ನಕಾರಾತ್ಮಕ ಮಾಧ್ಯಮ ವರದಿಗಳಿಂದ ಪ್ರಭಾವಿತರಾಗುವುದಲ್ಲ, ಆದರೆ ಸರ್ಕಾರದ ಪರವಿರುವ ವರದಿಗಳು ಬರುವಂತೆ ನೋಡಿಕೊಳ್ಳಬೇಕು ಎಂದು ಜೈಶಂಕರ್ ಹೇಳಿದ್ದಾರೆ.

ಎರಡನೇ ಅಲೆಯ ಪ್ರತಾಪ ಹೀಗಿರುತ್ತದೆ ಎಂದು ಯಾವುದೇ ಸಾರ್ವಜನಿಕ ಆರೋಗ್ಯ ತಜ್ಞರು ಊಹಿಸದ ಸಂಗತಿಯಾಗಿದೆ. ಕಳೆದ ವರ್ಷ ಮೊದಲ ಅಲೆ ಬಂದಾಗ ಅತ್ಯಂತ ಮುಂದುವರಿದ ದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯಗಳು ಕುಸಿದಿವೆ . ಆದ್ದರಿಂದ ಭಾರತದಲ್ಲಿ ಮಾತ್ರ ಸಂಭವಿಸಿದ ವಿಪತ್ತು ಅಲ್ಲ.

ಆಮ್ಲಜನಕದ ಕೊರತೆಯು ಉತ್ಪಾದನೆಯ ಕೊರತೆಯಿಂದಲ್ಲ ಆದರೆ ಉತ್ಪಾದನೆಯ ನಿರ್ಬಂಧಿತ ಭೌಗೋಳಿಕತೆಯಿಂದಾಗಿ ಸರಬರಾಜು ಸಮಸ್ಯೆಯಾಗುತ್ತಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಚುನಾವಣೆಯಿಂದಾಗಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ ಎಂಬುದು ಹೇಳಲಾಗದು ಎಂದು ಜೈಶಂಕರ್ ಹೇಳಿರುವುದಾಗಿ ಸಭೆಯಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿ ಇದೆ. ಈ ಎರಡೂ ರಾಜ್ಯಗಳಲ್ಲಿ ಚುನಾವಣೆ ನಡೆದಿರಲಿಲ್ಲ ಎಂದು ಹೇಳಿದ ಜೈ ಶಂಕರ್, ಕುಂಭಮೇಳದಲ್ಲಿ ಭಾಗವಹಿಸಿದವರು ಕೊವಿಡ್ super spreader (ರೋಗ ವಾಹಕರು) ಎಂಬ ವಿಷಯದ ಬಗ್ಗೆ ಮಾತನಾಡಿಲ್ಲ.

ಭಾಗವಹಿಸಿದ ರಾಜತಾಂತ್ರಿಕರಿಗೆ ಪ್ರಶ್ನೆಗಳಿದ್ದರೂ, ಕುಂಭ ಮೇಳದ ಬಗ್ಗೆ ಯಾರೂ ಕೇಳಲಿಲ್ಲ. ಪ್ರಧಾನ ಮಂತ್ರಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದರ ಬಗ್ಗೆ ಅಥವಾ ಅಂತರರಾಷ್ಟ್ರೀಯ ಮಾಧ್ಯಮಗಳು ಎತ್ತಿ ತೋರಿಸಿದ ಯಾವುದೇ ಸಾಂಸ್ಥಿಕ ವೈಫಲ್ಯಗಳ ಬಗ್ಗೆಯೂ ಪ್ರಶ್ನೆ ಗಳನ್ನು ಕೇಳಲಿಲ್ಲ. ವ್ಯಾಕ್ಸಿನ್ ಮೈತ್ರಿಯಡಿಯಲ್ಲಿ ಭಾರತವು 66 ಮಿಲಿಯನ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ರವಾನಿಸಿತು. ಈ ಬಗ್ಗೆ ಜೈಶಂಕರ್ ಮಾತನಾಡಿಲ್ಲ, ಭಾಗವಹಿಸಿದವರೂ ಪ್ರಶ್ನೆ ಕೇಳಲಿಲ್ಲ. ಪ್ರತಿಯೊಂದು ಮಾಧ್ಯಮ ಟೀಕೆಗಳನ್ನು ಎದುರಿಸುವ ಅಗತ್ಯವಿಲ್ಲ ಎಂದು ರಾಯಭಾರಿಗಳು ಸಲಹೆ ನೀಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ:ಆಜ್ ತಕ್ ಸುದ್ದಿವಾಹಿನಿಯ ಪತ್ರಕರ್ತ ರೋಹಿತ್ ಸರ್ದಾನ ಕೊವಿಡ್​ಗೆ ಬಲಿ